Uttara kannda :ಸಿನಿಮಾ ನಟರಂತೆ ಹೇರ್ ಕಟ್ಟ್ ಮಾಡಿಸಿದ ವಿದ್ಯಾರ್ಥಿಗಳಿಗೆ ಕೇಶಮುಂಡನ ಮಾಡಿಸಿದ ಅಧಿಕಾರಿ
Mundgod News 25 November 2024 :- ಸಿನಿಮಾ,ಕ್ರಿಕೆಟ್ ಅಂತ ಹುಚ್ಚಿಗೆ ಬಿದ್ದು ನಟರು, ಕ್ರಿಕೇಟಿಗರಂತೆ ತಾವೂ ಕೂಡ ಇರಬೇಕು ಎಂದು ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದ ವಿದ್ಯಾರ್ಥಿಗಳಿಗೆ ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಬುದ್ದಿಮಾತು ಹೇಳಿ ಕೇಶ ಮುಂಡನ ಮಾಡಿಸಿದ್ದಾರೆ.
ಹೌದು ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ (mundgod) ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ.
ಹೌದು ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳು ಶಿಸ್ತಿನಿಂದಿಲ್ಲದೇ ಉದ್ದುದ್ದ ಕೂದಲು ಬಿಟ್ಟು ಪೊರಕಿಯಂತೆ ಕಾಣುತಿದ್ದುದನ್ನು ಕಂಡ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕ ಉಮೇಶ ವೈ.ಕೆ ವಿದ್ಯಾರ್ಥಿಗಳಿಗೆ ಬುದ್ದಿಮಾತು ಹೇಳಿ ವಸತಿ ಶಾಲೆಗೆ ಕ್ಷೌರಿಕನನ್ನು ಕರೆಯಿಸಿ ಕಟಿಂಗ್ ಮಾಡಿಸಿದ ಘಟನೆ ತಾಲೂಕಿನ ಕರಗಿನಕೊಪ್ಪ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜರುಗಿತು.
ಇದನ್ನೂ ಓದಿ:-Mundgod:125 ಕ್ಕೆ ಏರಿಕೆ ಕಂಡ ಮಂಗನಬಾವು ಸೊಂಕು-ಶಾಲೆಗೆ ಮೂರುದಿನ ರಜೆ ಘೋಷಣೆ
ತಾಲೂಕಿನ ಕರಗಿನಕೊಪ್ಪ ಗ್ರಾಮದ ಬಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಿದೆ ಈ ಶಾಲೆಯಲ್ಲಿ ಆರನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ವಿದ್ಯಾರ್ಥಿಗಳು ಓದುತ್ತಾರೆ.
ಪಿಯುಸಿ ವಿಭಾಗದ ಕೆಲವು ವಿದ್ಯಾರ್ಥಿಗಳು ವಿವಿಧ ಬಗೆಯಲ್ಲಿ ಹೇರ್‌ಸ್ಟೈಲ್ ಮಾಡಿಸಿಕೊಂಡಿದ್ದರು. ಇದನ್ನು ಕಂಡ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕ ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡು, ನೀವು ಕಾಲೇಜಿನಲ್ಲಿ ಶಿಕ್ಷಣ ಪಡೆಯಲು ಬಂದಿದ್ದಿರಾ ಅಥವಾ ಸ್ಟೈಲ್ ಮಾಡಲು ಬಂದಿದ್ದಿರಾ? ನಿಮ್ಮನ್ನು ನೋಡಿ ಕೆಳ ಹಂತದ ವಿದ್ಯಾರ್ಥಿಗಳು ಕಲಿಯುತ್ತಾರೆ.
ನೀವು ಮಾದರಿ ವಿದ್ಯಾರ್ಥಿಗಳಾಗಿ ಇರಬೇಕು ಎಂದು ಹೇಳಿದರು. ತಕ್ಷಣವೆ ಕ್ಷೌರಿಕನನ್ನು ಶಾಲೆಗೆ ಕರೆಯಿಸಿ ವಿದ್ಯಾರ್ಥಿಗಳ ಹೇರ್ ಕಟಿಂಗ್ ಮಾಡಿಸಿದರು.
ಸಿಬ್ಬಂದಿಗಳಿಗೂ ತರಾಟೆ
ವಸತಿ ಶಾಲೆಗೆ ಅಡುಗೆ ಮಾಡಲು ಬರುವ ಸಿಬ್ಬಂದಿಗಳು ಕೈಯಲ್ಲಿ ಯಾವುದೆ ಕೈಚೀಲ ಹಿಡಿದುಕೊಂಡು ಬರುವುದು ಹಾಗೂ ಹೋಗುವುದು ಮಾಡುವಂತಿಲ್ಲ.
ಅಡುಗೆ ಮನೆಯಿಂದ ಯಾವುದೆ ಆಹಾರ ಸಾಮಗ್ರಿಗಳನ್ನು ತೆಗೆದುಕೊಂಡು ಹೋದರೆ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದು ಅಲ್ಲಿನ ಸಿಬ್ಬಂದಿಗಳಿಗೂ ಎಚ್ಚರಿಕೆ ನೀಡಿದರು.
ನಂತರ ಶಿಕ್ಷಕರ ಸಭೆ ನಡೆಸಿ ಅವರು ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಫಲಿತಾಂಶ ಶೇ.100 ರಷ್ಟು ಸಾಧನೆಯಾಗಬೇಕು ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡಬೇಕು. ಶಿಕ್ಷಕರು ಪಾಠ ಮಾಡುವ ಬಗ್ಗೆ ನಿರ್ಲಕ್ಷ ವಹಿಸಬಾರದು. ಸರಿಯಾಗಿ ಪಾಠ ಮಾಡುವ ಮೂಲಕ ವಿದ್ಯಾರ್ಥಿಗಳು ಸಾಧನೆಗೈಯುವಂತೆ ಸಿದ್ಧ ಪಡಿಸಬೇಕು ಎಂದರು.