For the best experience, open
https://m.kannadavani.news
on your mobile browser.
Advertisement

Gokarna | ಸಾಣಿಕಟ್ಟಾ ಉಪ್ಪಿನ ಉತ್ಪಾದನ ಘಟಕಕ್ಕೆ ವಿಷ ಬೆರೆಸಿದ ಗೋದಾವರಿ ಹೋಟಲ್ ಕಿರಾತಕರು!

Kumta news 05 December 2024:- ಸಾಣಿಕಟ್ಟಾ ಉಪ್ಪು (sanikatta salt )ಎಂದರೇ ಅದಕ್ಕೆ ತನ್ನದೇ ಆದ ಹೆಸರು ಇತಿಹಾಸವಿದೆ. ನೈಸರ್ಗಿಕವಾಗಿ ಸಿಗುವ ಈ ಉಪ್ಪನ್ನು ಔಷಧೋಪಚಾರ, ಸಂಪ್ರದಾಯಿಕ ಪದಾರ್ಥಗಳನ್ನು ತಯಾರಿಸಲು ಬಳಸುತ್ತಾರೆ.
11:44 AM Dec 05, 2024 IST | ಶುಭಸಾಗರ್
gokarna   ಸಾಣಿಕಟ್ಟಾ ಉಪ್ಪಿನ ಉತ್ಪಾದನ ಘಟಕಕ್ಕೆ ವಿಷ ಬೆರೆಸಿದ ಗೋದಾವರಿ ಹೋಟಲ್ ಕಿರಾತಕರು

Kumta news 05 December 2024:- ಸಾಣಿಕಟ್ಟಾ ಉಪ್ಪು (sanikatta salt )ಎಂದರೇ ಅದಕ್ಕೆ ತನ್ನದೇ ಆದ ಹೆಸರು ಇತಿಹಾಸವಿದೆ. ನೈಸರ್ಗಿಕವಾಗಿ ಸಿಗುವ ಈ ಉಪ್ಪನ್ನು ಔಷಧೋಪಚಾರ, ಸಂಪ್ರದಾಯಿಕ ಪದಾರ್ಥಗಳನ್ನು ತಯಾರಿಸಲು ಬಳಸುತ್ತಾರೆ.

Advertisement

ಮಲೆನಾಡು ಮತ್ತು ಕರಾವಳಿಯಲ್ಲಿ ಈ ಉಪ್ಪಿಗೆ (SALT) ಹೆಚ್ಚಿನ ಬೇಡಿಕೆ. ಈ ಉಪ್ಪು ಅರಬ್ಬಿ ಸಮುದ್ರ ಹಾಗೂ ಗಂಗಾವಳಿ ನದಿಯ ನೀರನ್ನು ಬಳಸಿ ಸುಮಾರು 500 ಎಕರೆ ಪ್ರದೇಶದಲ್ಲಿ ಉಪ್ಪನ್ನು ಉತ್ಪಾದಿಸಲಾಗುತ್ತದೆ. ಹೀಗಾಗಿ ಈ ಉಪ್ಪಿಗೆ ವಿಶೇಷ ಮಹತ್ವವಿದೆ.

ಇದನ್ನೂ ಓದಿ:-Gokarna ಆರೋಗ್ಯ ಕೇಂದ್ರದಲ್ಲಿದ್ದ ಕೋಟಿ ಮೌಲ್ಯದ ಪುರಾತನ ಬುದ್ದನ ಲೋಹ ಶಿಲ್ಪ ಕಾಣೆ!

ಆದರೇ ಇತ್ತೀಚಿನ ದಿನದಲ್ಲಿ ಗೋಕರ್ಣದಲ್ಲಿ (Gokarna) ಹೋಟಲ್ ರೆಸಾರ್ಟಗಳ ಹಾವಳಿ ಹೆಚ್ಚಾಗಿದ್ದು ಇದರ ಕಲ್ಮಶಗಳನ್ನು ಉಪ್ಪು ತಯಾರಿಕಾ ಘಟಕದ ನೀರಿನಲ್ಲಿ ಬಿಡಲಾಗುತ್ತಿದೆ.

ಹೌದು ಗೋಕರ್ಣದ ಗೋದಾವರಿ ಎಂಬ ಐಷಾರಾಮಿ ಹೋಟಲ್(hostel) ನಲ್ಲಿ ಉತ್ಪತ್ತಿಯಾದ ಕಲ್ಮಶ ( ಟಾಯ್ಲೆಟ್ ನೀರು , ಮಲ ಸೇರಿ)ವನ್ನು ಸಾಣಿಕಟ್ಟದ ಉಪ್ಪು ಉತ್ಪಾದನಾ ಘಟಕದ ಗದ್ದೆಗೆ ಬಿಡಲಾಗುತ್ತಿದೆ.

Godavari hotel gokarna

ಜನರಿಗೆ ಗೊತ್ತಾಗುತ್ತದೆ ಎಂಬ ಕಾರಣಕ್ಕೆ ಮಧ್ಯರಾತ್ರಿ ವೇಳೆ ಇಲ್ಲಿಗೆ ತಂದು ಗಲೀಜು ನೀರನ್ನು ನಿರಂತರವಾಗಿ ಬಿಟ್ಟು ಹೋಗುತಿದ್ದು ಮೊನ್ನೆ ಮಧ್ಯರಾತ್ರಿ ಹೀಗೆ ಬಿಡುವಾಗ ಸ್ಥಳೀಯ ಜನರು ತರಾಟೆ ತೆಗೆದುಕೊಂಡರು.

ಗೋದಾವರಿ ಹೋಟಲ್ ರವರಿಂದ ಸಾಣಿಕಟ್ಟಾ ಉಪ್ಪು ಘಟಕದಲ್ಲಿ ಕಲ್ಮಶ ನೀರು ಬಿಡುತ್ತಿರುವ ವಿಡಿಯೋ ಇಲ್ಲಿದೆ:-

ಇನ್ನು ಕಿಂಚಿತ್ ಪರಿಜ್ಞಾನ ಇಲ್ಲದ ಈ ಹೋಟಲ್ ನವರು ಲಕ್ಷಾಂತರ ಜನ ತಿನ್ನುವ ಉಪ್ಪಿಗೆ ವಿಷ ಬೆರಸುತಿದ್ದಾರೆ. ಇವರ ವಿರುದ್ಧ ಆಡಳಿತ ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದರೇ ಅಮೃತ ಎಂದು ಬಳಸುವ ಸಾಣಿಕಟ್ಟಾ ಉಪ್ಪು ಇನ್ನುಮುಂದೆ ವಿಷವಾಗುವ ಜೊತೆ ನೂರಾರು ವರ್ಷದ ಇತಿಹಾಸ ಇರುವ ರೈತರಿಂದಲೇ ನಿರ್ಮಾಣವಾದ ರಾಜ್ಯದ ಐತಿಹಾಸಿಕ ಉಪ್ಪು ಉತ್ಪಾದನಾ ಘಟಕಕ್ಕೆ ಕಂಠಕವಾಗಲಿದೆ.

ಸದ್ಯ ಈ ಭಾಗದಲ್ಲಿ ಉಪ್ಪು ಉತ್ಪಾದನೆಯಾಗುತ್ತಿಲ್ಲ. ಪೆಬ್ರವರಿ ವೇಳೆಯಲ್ಲಿ ಉಪ್ಪು ಉತ್ಪಾದನೆ ಪ್ರಾರಂಭವಾಗುತ್ತದೆ. ಆದರೇ ಮತ್ತೆ ಹೋಟಲ್ ಮಾಲೀಕರು ಈ ರೀತಿ ಈ ಭಾಗದಲ್ಲಿ ಕಲುಷಿತ ನೀರು ಬಿಟ್ಟರೇ ಏನಾಗಬಹುದು ಎಂಬ ಪ್ರಶ್ನೆ ಎದ್ದಿದೆ.

ಹೋಟಲ್, ರೆಸಾರ್ಟ ನಿಂದ ಗಬ್ಬು ನಾರುತ್ತಿದೆ ಗೋಕರ್ಣ.

ಗೋದಾವರಿ ಹೋಟಲ್ ಸಿಬ್ಬಂದಿಗಳು ಸಾಣಿಕಟ್ಟಾದ ಉಪ್ಪು ಉತ್ಪಾದಕ ಗದ್ದೆಗಳಿಗೆ ಕಲ್ಮಶ ಬಿಡುತ್ತಿರುವುದು.

ಪುರಾಣ ಪ್ರಸಿದ್ದ ಗೋಕರ್ಣ ಇದೀಗ ಕೊಳಚೆ ಗುಂಡಿಯಂತಾಗುತ್ತಿದೆ. ಪ್ರವಾಸೋಧ್ಯಮ ಬೆಳದಂತೆ ಇಲ್ಲಿನ ಸ್ಥಳೀಯ ಆಡಳಿತ ಅವುಗಳ ಸೂಕ್ತ ವಿಲೇವಾರಿ ಮರೆತಿದೆ. ಇದರಿಂದ ಕಡಲ ತೀರದಲ್ಲಿ ಕಸದ ರಾಶಿಯೇ ನಿರ್ಮಾಣ ಆಗಿದೆ.

ಇನ್ನು ಕೊಳಚೆ ನೀರು ಸಮುದ್ರ ಸೇರುವುದು ಮಾಮೂಲಾದರೇ ಈ ಹಿಂದೆ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿಗೇ ಕೊಳಚೆ ನೀರು ನುಗ್ಗಿ ಮಲೀನವಾಗಿತ್ತು.

ಇನ್ನು ಹೋಟಲ್(Hotel) ರೆಸಾರ್ಟ ನವರು ಕಸಗಳ ವಿಲೇವಾರಿ ಸಮರ್ಪಕವಾಗಿ ಮಾಡುತ್ತಿಲ್ಲ. ಇದರಿಂದ ಕೆಲವು ಹೋಟಲ್ ನವರು ಕಸವನ್ನು ಗೋಕರ್ಣದ ಗುಡ್ಡಭಾಗದ ರಸ್ತೆಯ ಕಾಡಿನಲ್ಲಿ ಹಾಕಿ ಹೋಗುತಿದ್ದಾರೆ.

ಇದರಿಂದಾಗಿ ಪ್ರಾಣಿ ಪಕ್ಷಿಗಳಿಗೂ ಕಂಟಕವಾದರೇ ಓಡಾಡುವ ಜನ ಮೂಗು ಮುಚ್ಚಿ ಹೋಗಬೇಕಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ