Gokarna :ಗೋದಾವರಿ ಹೋಟಲ್ ತ್ಯಾಜ್ಯ ,ಸಾಣಿಕಟ್ಟಾ ಉಪ್ಪು ಉತ್ಪಾದಕ ಸಂಘ ಸ್ಪಷ್ಟನೆ -ದಿಕ್ಕು ತಪ್ಪಿದ ಸುದ್ದಿ ಹಿಂದೆ!
Gokarna 06 December 2024:- ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಸಾಣಿಕಟ್ಟಾ ಉಪ್ಪು ಉತ್ಪಾದಕ ಘಟಕದ ವ್ಯಾಪ್ತಿಯಲ್ಲಿ ಗೋಕರ್ಣದ (gokarna) ಗೋದಾವರಿ ಹೋಟಲ್ ತ್ಯಾಜ್ಯವನ್ನು ಬಿಡುತ್ತಿರುವ ಕುರಿತು ಸ್ಥಳೀಯ ಸಾರ್ವಜನಿಕರು ಕನ್ನಡವಾಣಿಗೆ ವಿಡಿಯೋ ಸಮೇತ ದೂರು ನೀಡಿದ್ದರು.
ಈ ಕುರಿತು ಕನ್ನಡವಾಣಿಯಲ್ಲಿ ಸುದ್ದಿ ಪ್ರಕಟಗೊಂಡಿತ್ತು. ಇದರ ಬೆನ್ನಲ್ಲೇ ಸಾಣಿಕಟ್ಟಾ ಉಪ್ಪು ಉತ್ಪಾದಕ ಸಂಘದ ಮ್ಯಾನೇಜರ್ ರವರು ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಹೋಟಲ್ ತ್ಯಾಜ್ಯವನ್ನು ಸಂಘದ ವ್ಯಾಪ್ತಿಗೆ ಒಳಪಟ್ಟ ಜಾಗದಲ್ಲಿ ಹಾಕಿಲ್ಲ ಎಂಬ ಸ್ಪಷ್ಟನೆಯನ್ನು ನೀಡಿದ್ದು ಈ ಪ್ರತಿ ಕನ್ನಡವಾಣಿಗೆ ತಲುಪಿದೆ.
ಸಂಘದಿಂದ ನೀಡಿದ ಸ್ಪಷ್ಟನೆ ಪ್ರತಿ:-
ಗೊಂದಲ ಆಗಿದ್ದೆಲ್ಲಿ?
ಇನ್ನು ದಿನಾಂಕ 5/11/2024 ರಂದು ಸಾಣಿಕಟ್ಟಾ ಉಪ್ಪು ಉತ್ಪಾದಕ ಸಂಘದಿಂದ ಗ್ರಾಮಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ಸಂಘದ ಉಪ್ಪಿನ ಆಗರದ ಸಮೀಪ ಸಮುದ್ರಕ್ಕೆ ಸೇರುವ ಅಳವೆಯಲ್ಲಿ ತಮ್ಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಹೋಟಲ್ /ರೆಸಾರ್ಟ ನವರು ರಾತ್ರಿ ವೇಳೆ ತ್ಯಾಜ್ಯ ನೀರನ್ನು ಟ್ಯಾಂಕರ್ ನಿಂದ ತಂದು ಬಿಡುತಿದ್ದು ದಿನಾಂಕ 03-11-2024 ರಂದು ಹೊಲಸುನೀರು ಬಿಡುತಿದ್ದಾರೆ ,ಸಂಘದ ವಾಚಮನ್ ಹಾಗೂ ಊರಿನ ಜನರು ಪ್ರತಿಭಟಿಸಿ ಎಚ್ಚರಿಕೆ ನೀಡಿರುತ್ತಾರೆ ,ಕೋಳಿಫಾರ್ಮ ರವರು ಸಹ ತ್ಯಾಜ್ಯವನ್ನು ತಂದು ಬಿಡುತಿದ್ದಾರೆ .
ಈ ಘಟನೆ ನಂತರ ವಾಟ್ಸ್ ಅಪ್ ನಲ್ಲಿ ವಿಡಿಯೋ ಹರಿದಾಡಿದ್ದು ,ಉಪ್ಪು ನೀರಿಗೆ ಹೊಲಸು ನೀರು ಸೇರಿರುತ್ತದೆ ಎಂದು ಬರೆದಿದ್ದು, ಈ ರೀತಿಯ ಮಾಹಿತಿಯಿಂದ ಸಾಣಿಕಟ್ಟ ಉಪ್ಪಿನ ಬಗ್ಗೆ ತಪ್ಪು ಅಭಿಪ್ರಾಯ ಬರುತ್ತದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಾಣಿಕಟ್ಟ ಉಪ್ಪು ಉತ್ಪಾದಕ ಸಂಘ ದ ಮ್ಯಾನೇಜರ್ ರವರು ಲಿಖಿತ ರೂಪದಲ್ಲಿ ಗ್ರಾಮಪಂಚಾಯ್ತಿಗೆ ದೂರು ನೀಡಿದ್ದರು .
ಇದರ ನಂತರ ಈ ದೂರನ್ನು ಹಿಂಪಡೆದಿದ್ದಾರೆ.
ಇನ್ನು ಸಾಣಿಕಟ್ಟಾ ಉಪ್ಪು ಉತ್ಪಾದಕ ಘಟಕದವರೇ ಸ್ಪಷ್ಟನೆ ನೀಡಿದ್ದು ಈ ಬಗ್ಗೆ ನಮ್ಮ ತಂಡ ಹೋಟಲ್ ಗೋದಾವರಿ ಜನರಲ್ ಮ್ಯಾನೇಜರ್ ರವರನ್ನು ಸಂಪರ್ಕಿಸಿದಾಗ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ನಮ್ಮ ಹೋಟಲ್ ನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮದಂತೆ ತ್ಯಾಜ್ಯ ನೀರನ್ನು ಶುದ್ದೀಕರಣ ಮಾಡಿ ನಂತರ ನಮ್ಮದೇ ಜಮೀನಿನಲ್ಲಿ ಬಿಡುತ್ತೇವೆ.
ನಮ್ಮ ಹೋಟಲ್ ಬೆಳವಣಿಗೆ ಸಹಿಸದವರು ಹೋಟಲ್ ನ ಹೆಸರು ಕೆಡಿಸಲು ಈ ರೀತಿ ಮಾಡಿದ್ದಾರೆ.
ನಾವು ತ್ಯಾಜ್ಯವನ್ನು ಹೊರಗೆ ಬಿಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದ್ದು , ಗೋಕರ್ಣದಲ್ಲಿ ಇರುವ ಏಕೈಕ ತ್ರಿಸ್ಟಾರ್ ಹೋಟಲ್ ನಮ್ಮದು ನಿಯಮದ ಪ್ರಕಾರವೇ ನಡೆದುಕೊಳ್ಳುತಿದ್ದೇವೆ ಎಂದಿದ್ದಾರೆ.
ಇನ್ನು ಸ್ಥಳೀಯರ ಮಾಹಿತಿ ಹಾಗೂ ದೂರಿನ ಮೇಲೆ ಸಾರ್ವಜನಿಕ ಹಿತಾಸಕ್ತಿಯಲ್ಲಿ ಕನ್ನಡವಾಣಿ ಸುದ್ದಿ ಪ್ರಕಟಮಾಡಿದೆ. ಸಾಣಿಕಟ್ಟಾ ಉಪ್ಪು ಉತ್ಪಾದಕ ಸಂಘದ ಮ್ಯಾನೇಜರ್ ರವರೇ ಸ್ಪಷ್ಟೀಕರಣ ನೀಡಿದಾಗ ಎಲ್ಲೋ ಒಂದು ಭಾಗದಲ್ಲಿ ಸುದ್ದಿ ತಪ್ಪುಗ್ರಹಿಕೆಗೆ ಆಸ್ಪದಕೊಡುತ್ತದೆ.ಇದರಿಂದ ಆಗುವ ಪರಿಣಾಮ ಸಂಸ್ಥೆ ,ಸಂಘ ಹಾಗೂ ಇಲ್ಲಿ ಜೀವನಕ್ಕಾಗಿ ಕಾರ್ಯ ನಿರ್ವಹಿಸುವ ಬಡ ಉದ್ಯೋಗಿಗಳ ಮೇಲೆ ಬೀರುತ್ತದೆ.
ಹೀಗಾಗಿ ಗೋದಾವರಿ ಹೋಟಲ್ ನ (Hotal )ತ್ಯಾಜ್ಯ ಹಾಕಿರುವ ಬಗ್ಗೆ ಸಾಣಿಕಟ್ಟಾ ಉಪ್ಪು ಉತ್ಪಾದಕ ಘಟಕ ಸ್ಪಷ್ಟನೆ ನೀಡಿರುವುದರಿಂದ ಹಾಗೂ ಎರಡು ಸಂಸ್ಥೆಗಳ ಮೇಲೆ ತಪ್ಪು ಗ್ರಹಿಕೆ ಆಗಬಾರದು ಎಂಬ ಕಾರಣದಿಂದ ಓದುಗರು ಗಮನಿಸಬೇಕಾಗಿ ವಿನಂತಿ. ಈ ಬಗ್ಗೆ ಕನ್ನಡವಾಣಿ ವಿಷಾಧಿಸುತ್ತದೆ.
ಇದನ್ನೂ ಓದಿ:-Karwar| ನಿಲ್ಲಿಸಿಟ್ಟಿದ್ದ ಕಾರು ಬೆಂಕಿಗಾಹುತಿ
ಯಾವುದೇ ಸಂಸ್ಥೆ ,ಸಂಘಟನೆ ತೇಜೋವಧೆ ಮಾಡುವ ಇರಾದೆ ನಮ್ಮ ತಂಡಕ್ಕಿಲ್ಲ.ಸುದ್ದಿಗಳು ಹಾದಿ ತಪ್ಪಬಾರದು ,ಸಾರ್ವಜನಿಕ ಹಿತ ವಷ್ಟೇ ಮುಖ್ಯ . ಹೀಗಾಗಿ ಓದುಗರು ಈ ಬಗ್ಗೆ ಗಮನಿಸಿ ತಿಳಿದುಕೊಳ್ಳುವಂತೆ ಈ ಮೂಲಕ ನಮ್ಮ ತಂಡ ಸ್ಪಷ್ಟೀಕರಿಸಿದೆ.