Kumta :ಫೈನಾನ್ಸ್ ನಿಂದ ಮಹಿಳಾ ವ್ಯಾಪಾರಿಗೆ ಬೆದರಿಕೆ: ಐವರ ವಿರುದ್ಧ ಪ್ರಕರಣ ದಾಖಲು
Kumta :ಫೈನಾನ್ಸ್ ನಿಂದ ಮಹಿಳಾ ವ್ಯಾಪಾರಿಗೆ ಬೆದರಿಕೆ: ಐವರ ವಿರುದ್ಧ ಪ್ರಕರಣ ದಾಖಲು

ಕಾರವಾರ :-ಉತ್ತರ ಕನ್ನಡ ಜಿಲ್ಲೆಯಲ್ಲಿ ಪೈನಾನ್ಸ್ ದಾರರ ಕಿರುಕುಳ ಮುಂದುವರೆದಿದ್ದು ಶೇಂಗಾ ಮಾರುವ ಮಹಿಳಾ ವ್ಯಪಾರಿಯೊಬ್ಬರಿಗೆ ಸಾಲದ ಕಂತು ಮರು ಪಾವತಿಸಲು ಒತ್ತಾಯಿಸಿ ಬೆದರಿಕೆ ಹಾಕಿದ ವಿವಿಧ ಖಾಸಗಿ ಹಣಕಾಸು ಸಂಸ್ಥೆಗಳ ಐವರ ಮೇಲೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕುಮಟಾ ಪಟ್ಟಣದ ಚೈತನ್ಯ ಫೈನಾನ್ಸ್ ವ್ಯವಸ್ಥಾಪಕ ನಾಗೇಂದ್ರ ಗೌಡ, ಸಿಬ್ಬಂದಿ ರಮೇಶ ಗೊಂಡ, ಭಾರತೀಯ ಸಂಯುಕ್ತ ಸಂಸ್ಥೆ ಫೈನಾನ್ಸ್ ವ್ಯವಸ್ಥಾಪಕ ಪ್ರೇಮಾನಂದ ನಾಯ್ಕ, ಸಿಬ್ಬಂದಿ ಜ್ಯೋತಿ ನಾಯ್ಕ ಮತ್ತು ಸ್ಪಂದನ ಫೈನಾನ್ಸ್‌ನ ಮದನ ಮಡಿವಾಳ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:-Bank ನಿಂದ ಸಾಲಕ್ಕೆ ಲಾರಿ ಜಪ್ತಿ ಟೈರನ್ನೇ ಕದ್ದ ಅಧಿಕಾರಿಗಳು!
ಕುಮಟಾದ ಚಿತ್ರಿಗಿಯ ಕಲ್ಲುಗುಡ್ಡದ ಪವಿತ್ರಾ ನಾಯ್ಕ (40) ಎಂಬುವರ ಮನೆಗೆ ಹೋಗಿ ಸಾಲದ ಕಂತು ತುಂಬುವಂತೆ ಒತ್ತಾಯಿಸಿದ್ದಾರೆ. ಸಾಲದ ಕಂತು ತುಂಬಲು ಸಾಧ್ಯವಾಗದಿದ್ದರೆ ಮನೆಯ ಕಾಗದ ಪತ್ರ ಮತ್ತು ಸಹಿ ಮಾಡಿದ ಖಾಲಿ ಚೆಕ್ ಕೊಡುವಂತೆ ಒತ್ತಾಯಿಸಿ, ಜೀವ ಬೆದರಿಕೆ ಹಾಕಿದ ಬಗ್ಗೆ ದೂರು ದಾಖಲಾಗಿದೆ .