ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Uttara kannda Latest news: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಏನಾಯ್ತು? ವಿವರ ನೋಡಿ

ಕಾರವಾರ:-ಉತ್ತರ ಕನ್ನಡ (uttara kannda) ಜಿಲ್ಲೆಯ 12 ತಾಲೂಕಿನಲ್ಲಿ ಇಂದು ಏನಾಯ್ತು. ಬೆಳಗಿನ ಪ್ರಮುಖ ಸುದ್ದಿ ಏನು ,ಕೆಲವು ಪ್ರಮುಖ ಸುದ್ದಿಗಳು ಒಂದು ಲಿಂಕ್ ನಲ್ಲಿ ಓದಲು ನಿಮಗಿದೋ ಅವಕಾಶ. ವಿವರ ನೋಡಿ.
12:46 PM Apr 10, 2025 IST | ಶುಭಸಾಗರ್

Uttara kannda Latest news: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಏನಾಯ್ತು? ವಿವರ ನೋಡಿ

ಕಾರವಾರ:-ಉತ್ತರ ಕನ್ನಡ (uttara kannda) ಜಿಲ್ಲೆಯ 12 ತಾಲೂಕಿನಲ್ಲಿ ಇಂದು ಏನಾಯ್ತು. ಬೆಳಗಿನ ಪ್ರಮುಖ ಸುದ್ದಿ ಏನು ,ಕೆಲವು ಪ್ರಮುಖ ಸುದ್ದಿಗಳು ಒಂದು ಲಿಂಕ್ ನಲ್ಲಿ ಓದಲು ನಿಮಗಿದೋ ಅವಕಾಶ. ವಿವರ ನೋಡಿ.

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

Sirsi :ಇಸ್ಪೀಟ್ ಅಡ್ಡದ ಮೇಲೆ ದಾಳಿ 54,900 ವಶಕ್ಕೆ-13 ಜನರ ಬಂಧನ.

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕೆಳಗಿನ ಇಟಗುಳಿಯ ಮನೆಯೊಂದರಲ್ಲಿ ಇಸ್ಪೀಟ್ ಆಡುತ್ತಿದ್ದ ವೇಳೆ‌ ದಾಳಿ ನಡೆಸಿದ ಶಿರಸಿ ಗ್ರಾಮೀಣ ಠಾಣೆಯ ಪೊಲೀಸರು 13 ಜನರನ್ನು ಹಾಗೂ 54900ವಶಕ್ಕೆ ಪಡೆಯಲಾಗಿದೆ.

ಶಿರಸಿ ಪೊಲೀಸ್ ಠಾಣೆಯ ಪಿಎಸ್ಐ ಸಂತೋಷ ಅವರು ಗಸ್ತಿನಲ್ಲಿರುವಾಗ ದಾಳಿ ನಡೆಸಿದ್ದಾರೆ. ಕೆಳಗಿನ ಇಟಗುಳಿ ಗ್ರಾಮದ ರಾಮಚಂದ್ರ ವಿಠ್ಠಲ ಹೆಗ್ಗಡೆಯವರ ಮನೆಯಲ್ಲಿ ಸುಮಾರು 10 ರಿಂದ 13 ಜನರು ಸೇರಿ ಪಂಥಕಟ್ಟಿಕೊಂಡು ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇಲೆ‌ ದಾಳಿ ನಡೆಸಲಾಗಿದೆ.

ರಾಮಚಂದ್ರ ವಿಠ್ಠಲ ಹೆಗಡೆ, ಮಂಜುನಾಥ ಸುಬ್ರಾಯ ಕೇಶವ ಮಹಾಬಲೇಶ್ವರ ಹೆಗಡೆ,ಮಂಜುನಾಥ ರಾಮಚಂದ್ರ ಹೆಗಡೆ, ಮಹೇಶ ರಾಮಚಂದ್ರ ಹೆಗಡೆ, ನಾರಾಯಣ ವೆಂಕಟರಮಣ ಹೆಗಡೆ, ವಿನಯ ಮಹಾಬಲೇಶ್ವರ ಹೆಗಡೆ,ಕಮಲಾಕರ ಮಹಾಬಲೇಶ್ವರ ಭಟ್,ಆನಂದ ಮಂಜುನಾಥ ಹೆಗಡೆ, ಮಂಜುನಾಥ ಸತ್ಯನಾರಾಯಣ ಹೆಗಡೆ,ಗಣಪತಿ ಶಾಂತರಾಮ ಹೆಗಡೆ,  ಮಹಾಬಲೇಶ್ವರ ಶ್ರೀಪತಿ ಹೆಗಡೆ, ಕಾರ್ತಿಕ್ ಗಣಪತಿ ಹೆಗಡೆ ಎಂಬುವವರನ್ನ ವಶಕ್ಕೆ ಪಡೆಯಲಾಗಿದೆ.

Advertisement

ಇದನ್ನೂ ಓದಿ:-Yallapur :ಒಂದನೇ ತರಗತಿ ವಿದ್ಯಾರ್ಥಿನಿ ಯನ್ನು ಪಾಳು ಬಿದ್ದ ದೇವಸ್ಥಾನದಲ್ಲಿ ಅ*ಚಾರ ಮಾಡಿದ ಅಪ್ರಾಪ್ತ ಬಾಲಕ!

ಒಟ್ಟು 54,900/- ರೂಪಾಯಿ ನಗದು 07 ಮೊಬೈಲ್ ಗಳನ್ನು ಸ್ಥಳದಲ್ಲಿ  ಪಂಚರ ಸಮಕ್ಷಮ ವಶಕ್ಕೆ ಪಡೆದಿದ್ದಾರೆ.ದಾಳಿಯಲ್ಲಿ ಸಿಬ್ಬಂದಿಗಳಾ ರಾಘವೇಂದ್ರ, ಸಿ. ಹೆಚ್.  ಷಣ್ಮುಖ ಮಿರಾಶಿ, ಮಾರುತಿ ಗೌಡ ಹಾಜರಿದ್ದರು. ದಾಳಿಯ ಬಗ್ಗೆ ಪೊಲೀಸ್ ಅಧಿಕ್ಷಕರು. ಹೆಚ್ಚುವರಿ ಪೊಲೀಸ್ ಅಧಿಕ್ಷಕರು, ಹೆಚ್ಚುವರಿ ಪೊಲೀಸ್ ಅಧಿಕ್ಷಕರು, ಪೊಲೀಸ್ ಉಪಾಧಿಕ್ಷಕರು ಶಿರಸಿ ಉಪವಿಭಾಗ ಹಾಗೂ ಪೊಲೀಸ್ ನೀರಿಕ್ಷಕರು ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ರವರು ಮಾರ್ಗದರ್ಶನ ನೀಡಿ ದಾಳಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿದ್ದಾರೆ.

ಅಕ್ರಮ ಜಾನುವಾರು ಸಾಗಾಟ - ಆರೋಪಿ ಜೊತೆ ಟ್ರಾಕ್ಟರ್ ವಶಕ್ಕೆ.

ಅಕ್ರಮ ಜಾನುವಾರು ಸಾಗಾಟ -ಬಂಧನ.

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನಗರದ ದೋಡ್ಡಳ್ಳಿ ರಸ್ತೆಯಲ್ಲಿ ವಿವೇಕಾನಂದನಗರ ಕ್ರಾಸ ಹತ್ತಿರ, ಟ್ರಾಕ್ಟರ್ ನಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತಿದ್ದ ಟ್ರಾಕ್ಟರ್ ನನ್ನು ವಶಕ್ಕೆಪಡೆದು ಆರೋಪಿಯನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.

ಶಿರಸಿ ತಾಲೂಕಿನ ಮಂಜು ಪೊಲೀಸರು ವಶಕ್ಕೆ ಪಡೆದ ವ್ಯಕ್ತಿಯಾಗಿದ್ದು ಈತನಿಂದ ಒಂದು ಟ್ರಾಕ್ಟರ್ ,ಎರಡು ಹೋರಿಗಳನ್ನು ವಶಕ್ಕೆ ಪಡೆಯಲಾಗಿದೆ.ಘಟನೆ ಸಂಬಂಧ ಶಿರಸಿ ಹೊಸ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bhatkal :ಯಾಸಿನ್ ಭಟ್ಕಳ್ ಗೆ ಗಲ್ಲು ಶಿಕ್ಷೆ.

ಹೈದರಾಬಾದ್​ನಲ್ಲಿ 2013ರಲ್ಲಿ ನಡೆದ ಬಾಂಬ್​ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾಸಿನ್​ ಭಟ್ಕಳ್(Yasin Bhatkal) ಸೇರಿ ಐವರು ಅಪರಾಧಿಗಳಿಗೆ ನೀಡಿದ್ದ ಮರಣದಂಡನೆಯ ಶಿಕ್ಷೆಯನ್ನು ತೆಲಂಗಾಣ ಹೈಕೋರ್ಟ್​ ಎತ್ತಿಹಿಡಿದಿದೆ. ನಿಷೇಧಿತ ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದ್ದೀನ್‌ನ ಐವರು ಭಯೋತ್ಪಾದಕರ ಮರಣದಂಡನೆ ಶಿಕ್ಷೆಯನ್ನು ತೆಲಂಗಾಣ ಹೈಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ.  ಈ ಭಯೋತ್ಪಾದಕರು 2013 ರ ಹೈದರಾಬಾದ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದರು, ಇದರಲ್ಲಿ 18 ಜನರು ಸಾವನ್ನಪ್ಪಿದ್ದರು ಮತ್ತು 131 ಜನರು ಗಾಯಗೊಂಡಿದ್ದರು.

ಇದನ್ನೂ ಓದಿ:-Sirsi  ರೇಷನ್ ಅಕ್ಕಿಯಲ್ಲಿ ಕಲ್ಲು ,ಮಣ್ಣು.- ಇದನ್ನು ತಿಂದವನನ್ನು ದೇವರೇ ಕಾಪಾಡಬೇಕು!

ನ್ಯಾಯಮೂರ್ತಿಗಳಾದ ಲಕ್ಷ್ಮಣ್ ಮತ್ತು ಪಿ. ಶ್ರೀ ಸುಧಾ ಅವರ ಪೀಠವು, ಐಎಂ ಭಯೋತ್ಪಾದಕರು ಸಲ್ಲಿಸಿದ್ದ ಕ್ರಿಮಿನಲ್ ಪರಿಷ್ಕರಣಾ ಮೇಲ್ಮನವಿಯನ್ನು ವಜಾಗೊಳಿಸಿ, ಎನ್ಐಎ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ. ವಿಚಾರಣಾ ನ್ಯಾಯಾಲಯ ವಿಧಿಸಿದ ಶಿಕ್ಷೆಯನ್ನು ದೃಢಪಡಿಸಲಾಗಿದೆ ಎಂದು ಪೀಠ ಹೇಳಿದೆ.

ಇದಕ್ಕೂ ಮೊದಲು ಡಿಸೆಂಬರ್ 13, 2016 ರಂದು ಐಎಂ ಸಹ ಸಂಸ್ಥಾಪಕ ಮೊಹಮ್ಮದ್ ಅಹ್ಮದ್ ಸಿದ್ದಿಬಾಪಾ ಅಲಿಯಾಸ್ ಯಾಸಿನ್ ಭಟ್ಕಳ್, ಪಾಕಿಸ್ತಾನಿ ಪ್ರಜೆ ಜಿಯಾ-ಉರ್-ರೆಹಮಾನ್ ಅಲಿಯಾಸ್ ವಕಾಸ್, ಅಸಾದುಲ್ಲಾ ಅಖ್ತರ್ ಅಲಿಯಾಸ್ ಮೊನ್ಜಾ ಹದ್ದಿ ಸೇರಿದಂತೆ ಐವರು ಸದಸ್ಯರನ್ನು ಎನ್‌ಐಎ ನ್ಯಾಯಾಲಯ ದೋಷಿ ಎಂದು ಘೋಷಿಸಿತ್ತು.

ಇದನ್ನೂ ಓದಿ:-Bhatkal: ಹಿಂದೂ ಕಾರ್ಯಕರ್ತನ ಹಲ್ಲೆ ಗಲಾಟೆ- ಆರೋಪ ತಳ್ಳಿಹಾಕಿದ ಎಸ್.ಪಿ ಎಂ ನಾರಾಯಣ್

ಫೆಬ್ರವರಿ 21, 2013 ರಂದು ನಗರದ ಜನದಟ್ಟಣೆಯ ಶಾಪಿಂಗ್ ಪ್ರದೇಶವಾದ ದಿಲ್‌ಸುಖ್‌ನಗರದಲ್ಲಿ ಎರಡು ಮಾರಕ ಸ್ಫೋಟಗಳು ಸಂಭವಿಸಿದವು. ಆರೋಪಿಗಳಲ್ಲಿ ಒಬ್ಬರ ವಕೀಲರು ವರದಿಗಾರರಿಗೆ ತಿಳಿಸಿದ್ದು, ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:- Yallapura : ಕೋಟಿ ವಂಚನೆ ಮಾಡಿ ದುಬೈಗೆ ಪರಾರಿಯಾಗಿದ್ದ ಮಾಜಿ PDO ಬಂಧನ

ಉತ್ತರ ಕನ್ನಡ ಜಿಲ್ಲೆಯ ಹಲವು ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ,ಕುಮಟಾ,ಹೊನ್ನಾವರ ತಾಲೂಕಿನಲ್ಲಿ ವಿದ್ಯತ್ ದುರಸ್ತಿ ಇರುವುದರಿಂದ ಏ.9 ಬೆಳಗ್ಗಿನಿಂದ ಸಂಜೆ 4-30 ರ ವರೆಗೆ ಈ ತಾಲೂಕಿನ ಹಲವು ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

 ಉತ್ತರ ಕನ್ನಡ ಜಿಲ್ಲೆಯ ಅಡಿಕೆ (Arecanut price) ಧಾರಣೆ .

Sirsi ಮಾರುಕಟ್ಟೆ APMC ಅಡಿಕೆ ಧಾರಣೆ.

ಏ.11-ಯಲ್ಲಾಪುರ ಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜೆಯೇಂದ್ರ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ (yallapur)ನಗರಕ್ಕೆ ಏ.11 ರಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ರವರು ಆಗಮಿಸಲಿದ್ದು ಅಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಲೆಏರಿಕೆ ಖಂಡಿಸಿ ಪ್ರತಿಭಟನಾ ರ್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗಿಯಾಗಲಿದ್ದಾರೆ.

Advertisement
Tags :
AnkolaDandeliHaliyalaHonnavarJoidaKarnatakaKarwarKumtaneedSiddapuraSirsiUttara kanndaUttara kannda Latest newsYallapura
Advertisement
Next Article
Advertisement