Maha Shivratri: ಗೋಕರ್ಣ ,ಸಹಸ್ರ ಲಿಂಗದಲ್ಲಿ ಭಕ್ತರ ಪೂಜೆ ವಿಡಿಯೋ ನೋಡಿ
Maha Shivratri: ಗೋಕರ್ಣ ,ಸಹಸ್ರ ಲಿಂಗದಲ್ಲಿ ಭಕ್ತರ ಪೂಜೆ ವಿಡಿಯೋ ನೋಡಿ

ದಕ್ಷಿಣ ಕಾಶಿ ಎಂದೇ ಪ್ರಸಿದ್ದವಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ (uttara kannda) ವಿಶಿಷ್ಟವಾಗಿ ಶಿವಪೂಜೆ ನರೆವೇರಿತು. ಜಿಲ್ಲೆಯ ಗೋಕರ್ಣದಲ್ಲಿ ಮಹಾಬಲೇಶ್ವರನ ಸನ್ನಿದಿಗೆ ಆಗಮಿಸಿದ ದೇಶ ವಿದೇಶದ ಭಕ್ತರು ಆತ್ಮ ಲಿಂಗ ಸ್ಪರ್ಶಿಸಿ ಶಿವಪೂಜೆ ಗೈದರು.
ಮಹಾಶಿವರಾತ್ರಿ ಅಂಗವಾಗಿ ಜಿಲ್ಲೆಯ ಮಲೆನಾಡು ಭಾಗದ ಶಿವ ದೇಗುಲಗಳಲ್ಲಿ ಸಂಭ್ರಮ ಮೇಳೈಸಿತ್ತು. ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೆರವೇರುತ್ತಿವೆ.
ಇದನ್ನೂ ಓದಿ:-Gokarna ಬಳಿ ಮುಳುಗಿದ ಬೋಟ್ ನಾಲ್ಕು ಜನರ ರಕ್ಷಣೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪವಿತ್ರ ಶಿವನ ಕ್ಷೇತ್ರವಾದ ಸಹಸ್ರಲಿಂಗದಲ್ಲಿ ಶಿವರಾತ್ರಿ ನಿಮಿತ್ತ ವಿಶೇಷ ಪೂಜಾ ಕೈಂಕರ್ಯಗಳು ನೆರವೇರುತ್ತಿವೆ. ಜಿಲ್ಲೆಯ ಹಾಗೂ ರಾಜ್ಯದ ಹಲವಾರು ಭಾಗಗಳಿಂದ ಬಂದ ಸಾವಿರಾರು ಭಕ್ತರು ಶಿವನ ಪೂಜೆ ಮಾಡಿ ಪುನೀತರಾದರು. ಸಾವಿರ ಲಿಂಗಗಳು ನೆಲೆಸಿರೋ ಸಹಸ್ರಲಿಂಗಕ್ಕೆ ಭಕ್ತರ ದಂಡೇ ಹರಿದು ಬಂದಿತ್ತು. ಶಿವಲಿಂಗಗಳಿಗೆ ಅಭಿಷೇಕ ಮಾಡಿ ಅರಿಶಿನ, ಕುಂಕುಮ, ಹೂವು ಹಣ್ಣುಗಳನ್ನ ಸಮರ್ಪಣೆ ಮಾಡಲಾಯಿತು. ಸಹಸ್ರಲಿಂಗದಲ್ಲಿ ಜಾತ್ರಾ ಸಂಭ್ರಮ ಮನೆಮಾಡಿದ್ದು ಭಕ್ತರ ಸಮೂಹ ಹರಿದು ಬಂದಿತ್ತು.
ವಿಡಿಯೋ ನೋಡಿ:-