Uttara kannda : ಮುಂದಿನ ಮೂರು ತಾಸಿನಲ್ಲಿ ಮಳೆ ಎಚ್ಚರಿಕೆ
Uttara kannda : ಮುಂದಿನ ಮೂರು ತಾಸಿನಲ್ಲಿ ಮಳೆ ಎಚ್ಚರಿಕೆ
ಉತ್ತರ ಕನ್ನಡ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಮಂಗಳವಾರ ಮಳೆಯಾಗಿದೆ. ಸೋಮವಾರ ಮಧ್ಯಾಹ್ನದಿಂದಲೇ ಮಳೆಯ ವಾತಾವರಣ ಕಾಣಿಸಿದ್ದು, ಮುಂದಿನ ಮೂರು ತಾಸುಗಳಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆಯಿದೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಹೆಚ್ಚಲಿದ್ದು, ಜಿಲ್ಲಾಡಳಿತ ವಿವಿಧ ಮುನ್ನಚ್ಚರಿಕೆಯನ್ನು ನೀಡಿದೆ.

ಗುಡುಗು-ಸಿಡಿಲಿನ ಜೊತೆ ಆಲೆಕಲ್ಲಿನ ಮಳೆ ಬೀಳುವ ಲಕ್ಷಣಗಳಿರುವ ಬಗ್ಗೆ ಹವಾಮಾನ ಇಲಾಖೆ ( weather forecast) ವರದಿ ಆಧರಿಸಿ ಉತ್ತರ ಕನ್ನಡ ಜಿಲ್ಲಾಡಳಿತ ಮಂಗಳವಾರ ಸಂಜೆ ಮಾಹಿತಿ ನೀಡಿದೆ.
ಹೀಗಾಗಿ ಸಾಕಷ್ಟು ಮುನ್ನಚ್ಚರಿಕೆವಹಿಸುವಂತೆ ಜನತೆಗೆ ಸೂಚಿಸಲಾಗಿದೆ. ಆಪತ್ತುಗಳಿಂದ ರಕ್ಷಿಸಿಕೊಳ್ಳುವುದಕ್ಕಾಗಿ ಜಿಲ್ಲಾಡಳಿತ ಅಧೀನದ ವಿಪತ್ತು ನಿರ್ವಹಣಾ ಪ್ರಾಧಿಕಾರ ಜನರಿಗೆ ವಿವಿಧ ಸಲಹೆಗಳನ್ನು ನೀಡಿದೆ. ಜಾನುವಾರುಗಳ ಬಗ್ಗೆಯೂ ಕಾಳಜಿವಹಿಸಿ ಎಂದು ನೆನಪಿಸಿದೆ.
ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಪಾಲಿಸಬೇಕಾದ ಸಲಹೆ ಸೂಚನೆಗಳು:
ಪ್ರತಿಕೂಲ ಹವಾಮಾನದ ಸಮಯದಲ್ಲಿ ವಿಶೇಷವಾಗಿ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಲು, ಜಾನುವಾರುಗಳನ್ನು ಮೇಯಿಸಲು ಮೀನುಗಾರಿಕೆ ಮತ್ತು ದೋಣಿಗಳನ್ನು ಓಡಿಸಲು ಅಥವಾ ಸಾಮಾನ್ಯ ಪ್ರಯಾಣಕ್ಕಾಗಿ ಮನೆಯಿಂದ ಹೊರಗೆ ಹೋಗುವುದು ಸೂಕ್ತವಲ್ಲ. ಗುಡುಗು-ಸಿಡಿಲಿನ ಸಂದರ್ಭದಲ್ಲಿ ಲೋಹದ ತಗಡನ್ನು ಹೊದಿಸಿರುವ ಮನೆಗಳು ಸುರಕ್ಷಿತವಲ್ಲ, ಸುರಕ್ಷಿತವಾದ ಕಟ್ಟಡಗಳಲ್ಲಿ ಅಶ್ರಯ ಪಡೆಯುವುದು. ಬೆಟ್ಟ ಗುಡ್ಡಗಳಂತಹ ಎತ್ತರದ ಪ್ರದೇಶಗಳಿಂದ ಕೆಳಗೆ ಇಳಿದು ಆಶ್ರಯ ಪಡೆಯುವುದು ಸೂಕ್ತ.
ಇದನ್ನೂ ಓದಿ:-Uttara kannda :ಇಂದು ಬೆಳಗ್ಗೆ ಜಿಲ್ಲೆಯಲ್ಲಿ ಏನು ಸುದ್ದಿ ವಿವರ ನೋಡಿ.
ನೀರಿನ ಮೂಲಗಳಾದ ಕೆರೆ, ತೋಡು ಮತ್ತು ನದಿಗಳಿಂದ ದೂರವಿರುವುದು ಒಳ್ಳೆಯದು. ವಿದ್ಯುತ್ ಉಪಕರಣ ಹಾಗೂ ವಿದ್ಯುತ್ ಸರಬರಾಜು ಮಾರ್ಗ, ದೂರವಾಣಿ ಸಂಪರ್ಕ, ಮೊಬೈಲ್ ಟವರ್, ಪವನ ವಿದ್ಯುತ್ ಗೋಪುರ ಹಾಗೂ ರೈಲು ಹಳಿಗಳಿಂದ ದೂರವಿರುವುದು. ವಾಹನ ಚಲಾಯಿಸುತ್ತಿದ್ದರೆ ತಕ್ಷಣವೇ ವಾಹನ ನಿಲ್ಲಿಸಿ ವಾಹನದಲ್ಲಿಯೇ ಆಶ್ರಯ ಪಡೆಯುವುದು. ಗುಡುಗು ಸಿಡಿಲಿನ ಸಮಯದಲ್ಲಿ ಗುಂಪಿನಲ್ಲಿರುವ ಬದಲು ಸಾಕಷ್ಟು ಅಂತರ ಕಾಪಾಡಿಕೊಳ್ಳುವುದ ಉತ್ತಮ. ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಹೊರಾಂಗಣದಲ್ಲಿ ಕೆಲಸ ಮಾಡುತ್ತಿದ್ದರೆ ಮತ್ತು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯಲು ಸಮಯ ಇಲ್ಲದಿದ್ದರೆ ತಕ್ಷಣ ಎರಡು ಕಾಲುಗಳನ್ನು ಜೋಡಿಸಿ ಮಂಡಿಯೂರಿ ಕುಳಿತುಕೊಂಡು ತಲೆಯನ್ನು ಬಗ್ಗಿಸಿ ಕಿವಿಗಳನ್ನು ಮುಚ್ಚಿಕೊಳ್ಳಬೇಕು.
ಸಿಡಿಲು ಹಾಗೂ ಮಿಂಚು ಆಕರ್ಷಿಸುವ ವಿದ್ಯುತ್ ಅಥವಾ ಟೆಲಿಫೋನ್ ಕಂಬಗಳು ಅಥವಾ ಮರಗಳ ಕೆಳಗೆ ಅಶ್ರಯ ಬೇಡ. ಲೋಹದ ವಸ್ತುಗಳನ್ನು ಬಳಸಬಾರದು. ಬೈಕು, ವಿದ್ಯುತ್ ಅಥವಾ ದೂರವಾಣಿ ಕಂಬಗಳು, ತಂತಿ ಬೇಲಿ, ಯಂತ್ರಗಳಿoದ ದೂರವಿರುವುದು ಸೂಕ್ತ. ಸಿಡಿಲು ಸಂದರ್ಭದಲ್ಲಿ ಮೊಬೈಲ್ ಫೋನ್ ಬಳಕೆ ಬೇಡ. ಕಬ್ಬಿಣದ ಸರಳುಗಳಿಂದ ಕೂಡಿದ ಕೊಡೆಗಳು ಯೋಗ್ಯವಲ್ಲ. ಗುಡುಗು ಸಿಡಿಲಿನ ಸಮಯದಲ್ಲಿ ಕಿಟಕಿ, ಬಾಗಿಲುಗಳನ್ನು ಮುಚ್ಚಿ ಮತ್ತು ವಿದ್ಯುತ್ ಶಕ್ತಿ ಸಂಪರ್ಕದಿ0ದ ದೂರವಿರುವುದು.
ಇದನ್ನೂ ಓದಿ:-Karnataka :ಗುಲಾಮನೊಬ್ಬ ದೈವವಾದ ಕತೆ: ಈತನಿಗೆ ಮದ್ಯ,ಸಿಗರೇಟೇ ನೈವೇದ್ಯ!
ಮಕ್ಕಳು, ವಯೋವೃದ್ಧರು ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಗಮನಹರಿಸುವುದು. ಸಿಡಿಲು ಸಂದರ್ಭದಲ್ಲಿ ಕಟ್ಟಡದ ಕೊಳಾಯಿ ಮತ್ತು ಲೋಹದ ಕೊಳವೆಗಳ ಮೂಲಕ ವಿದ್ಯುತ್ ಹರಿಯುವ ಸಾಧ್ಯತೆ ಇರುವುದರಿಂದ ಸ್ನಾನ ಮಾಡಲು ಶವರ್ ಬಳಕೆ ಸೂಕ್ತವಲ್ಲ. ಪಾತ್ರೆಗಳನ್ನು ತೊಳೆಯಲು ಇದು ಸಮಯವಲ್ಲ. ಅದಾಗಿಯೂ ಸಾರ್ವಜನಿಕರು ತುರ್ತು ಸಮಯದಲ್ಲಿ 08382-229857ಗೆ ಫೋನ್ ಮಾಡಬಹುದು. ಅಥವಾ ವಾಟ್ಯಾಪ್ ಸಂಖ್ಯೆ: 9483511015ಗೆ ವಿಷಯ ಮುಟ್ಟಿಸಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.