For the best experience, open
https://m.kannadavani.news
on your mobile browser.
Advertisement

Uttara kannda 24 ನೇ ಕನ್ನಡ ಸಾಹಿತ್ಯ ಸಮ್ಮೇಳನ | ಹೇಗಿತ್ತು ವಿವರ ಇಲ್ಲಿದೆ.

ಶಿರಸಿ : ಉತ್ತರ ಕನ್ನಡ ಜಿಲ್ಲೆಯ 24 ನೇ ಕನ್ನಡ ಸಾಹಿತ್ಯ ಸಮ್ಮೇಳನ ಶಿರಸಿಯ ರಂಗಧಾಮ ವೇದಿಕೆಯು ನೆರವೇರಿತು.
11:06 PM Dec 03, 2024 IST | ಶುಭಸಾಗರ್
uttara kannda 24 ನೇ ಕನ್ನಡ ಸಾಹಿತ್ಯ ಸಮ್ಮೇಳನ   ಹೇಗಿತ್ತು ವಿವರ ಇಲ್ಲಿದೆ

ಶಿರಸಿ : ಉತ್ತರ ಕನ್ನಡ ಜಿಲ್ಲೆಯ 24 ನೇ ಕನ್ನಡ ಸಾಹಿತ್ಯ ಸಮ್ಮೇಳನ ಶಿರಸಿಯ ರಂಗಧಾಮ ವೇದಿಕೆಯು ನೆರವೇರಿತು.

Advertisement

ಇದಕ್ಕೂ ಮುನ್ನ ನಡೆದ ಶೋಭಾಯಾತ್ರೆಗೆ ಶಾಸಕ ಭೀಮಣ್ಣ ಟಿ ನಾಯ್ಕ ಚಾಲನೆ ನೀಡಿದರು.

ನಗರದ ಮಾರಿಕಾಂಬಾ ದೇವಸ್ಥಾನದಿಂದ ಹೊರಟ ಈ ಜಾಥಾದಲ್ಲಿ ಬೇಡರವೇಶ,ಡೊಳ್ಳು ಕುಣಿತ ಹಾಗು ಶಾಲಾ ಮಕ್ಕಳ ಆಕರ್ಷಕವಾದ ಪಥ ಸಂಚಲನದೊಂದಿಗೆ ಸಾಹಿತ್ಯ ಸಮ್ಮೇಳನದ ಶೋಭಾಯಾತ್ರೆ ನೆಮ್ಮದಿ ರಂಗಮಂದಿರದ ವರೆಗೆ ನಡೆಯಿತು.

ನಂತ ನಡೆಸ ಸಭಾ ಕಾರ್ಯಕ್ರಮಕ್ಕೆ ಸಾಹಿತಿ ಬಿಟಿ ಲಲಿತಾ ನಾಯಕ್ ಚಾಲನೆ ನೀಡಿದರು.

ಸಾಹಿತ್ಯ ಸಮ್ಮೇಳನ ಉದ್ಘಾಟನೆ.

ಇದೇ ಹೊತ್ತಲ್ಲಿ ಅನೇಕ ಸಾಹಿತಿಗಳ ಪುಸ್ತಕ ಬಿಡುಗಡೆಗೊಳಿಸಲಾಯಿತು. ಸಾಹಿತಿ ಅಂಕಣಕಾರ ರಾಜು ಅಡಕಳ್ಳಿ ಬರೆದ ವಿಶ್ವವಾಣಿ ಪುಸ್ತಕ ಪ್ರಕಾಶನದ ಹೊಸ ಮುಖ ಪುಸ್ತಕವನ್ನು ಶಾಸಕ ಶಿವರಾಮ ಹೆಬ್ಬಾರ್ ಬಿಡುಗಡೆಗೊಳಿಸಿದರು.

ಸಂದರ್ಭದಲ್ಲಿ ಸಮ್ಮೇಳನದ ಅಧ್ಯಕ್ಷ ಆರ್ ಡಿ ಹೆಗಡೆ, ಸಹಾಯಕ ಆಯುಕ್ತೆ ಕಾವ್ಯರಾಣಿ, ಕಸಾಪ ಜಿಲ್ಲಾದ್ಯಕ್ಷ ಬಿ ಎನ್ ವಾಸರೆ, ಕಸಾಪ ತಾಲೂಕಾ ಅದ್ಯಕ್ಷ ಜಿ ಸು ಭಟ್ಟ ಬಕ್ಕಳ ಹಾಗೂ ಅನೇಕ ಸಾಹಿತ್ಯಾಸಕ್ತರು ಇದ್ದರು.

ಸಾಹಿತಿ ಬಿಟಿ ಲಲಿತಾ ನಾಯಕ್ ಹೇಳಿದ್ದೇನು?

ನಮ್ಮದೇ ಆದ ದೇಶ, ನಾಡು ಬೇಕು. ನಮ್ಮದೇ ಆದ ಸಂವಿಧಾನ ಬೇಕು ಎಂದು ಮಾಡಿಕೊಂಡೆವು. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎನ್ನುವುದನ್ನು ನಾವು ಪಾಲಿಸಬೇಕು. ಕನ್ನಡ ನಾಡಿನ ಚರಿತ್ರೆ ಮುಂದೆ ಬೆಳೆಯುತ್ತದೆ. ಇವತ್ತಿನ ಸಮಾಹ ಮುಂದಿನ ಇತಿಹಾಸ ಚರಿತ್ರೆ ಆಗುತ್ತದೆ. ಕನ್ನಡಿಗರಾದ ನಮ್ಮ ಹೆಗಲ ಮೇಲೆ ದೊಡ್ಡ ಜವಾಬ್ದಾರಿ ಇದೆ. ಈ ನಾಡನ್ನು ಹೇಗೆ ಭೃಷ್ಟಾಚಾರದಿಂದ ಮುಕ್ತ ಮಾಡಬೇಕು. ಮುಂದಿನ ಭವಿಷ್ಯದ ಮಕ್ಕಳನ್ನು ಬೆಳೆಸಬೇಕೆನ್ನುವುದನ್ನು ರೂಪಿಸಬೇಕು, ಎಂದು ಹಿರಿಯ ಸಾಹಿತಿ ಬಿ.ಟಿ.ಲಲಿತಾ ನಾಯಕ,ಹೇಳಿದರು.

ಅವರು ಮಂಗಳವಾರ ಶಿರಸಿಯ ರಂಗಧಾಮದಲ್ಲಿ ಉತ್ತರಕನ್ನಡ ಜಿಲ್ಲಾ 24 ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತಾ, ಮಕ್ಕಳಲ್ಲಿ ಬುದ್ಧ, ಬಸವ, ಗಾಂಧಿಯವರ ತತ್ವ ಹೊಂದಿರುವ ಕನ್ನಡದ ಮಕ್ಕಳನ್ನು ಸಿದ್ಧಪಡಿಸಬೇಕಿದೆ.

ಪಟೇಲ್, ರಾಮಕೃಷ್ಣ ಹೆಗಡೆ, ನಜೀರ್‌ಸಾಬ್‌ರವರನ್ನು ನೆನೆದು, ಅವರು ನಾಡುನುಡಿಗೆ, ಶಿಕ್ಷಣಕ್ಕೆ ನೀಡಿದ ಕೊಡುಗೆ ಸ್ಮರಿಸಬೇಕು. ಅವರು ಕಂಡ ಕನಸು ಮಾದರಿ ನಾಡನ್ನು ಕಟ್ಟಬೇಕು. ನಾನು ಬುಡಕಟ್ಟು ಮಹಿಳೆ, ಅದು ಹೇಗೋ ಒಂದಿಷ್ಟು ಶಿಕ್ಷಣ ಕಲಿತೆ. ಅವರು ನಮ್ಮನ್ನು ಗುರ್ತಿಸಿ, ಗೌರವ ನೀಡಿದರು, ಎಂದರು.
ರಾಜಕೀಯ ಕ್ಷೇತ್ರ ಪವಿತ್ರ ಕ್ಷೇತ್ರವೇ ಆಗಿದೆ. ರಾಜಮಹಾರಾಜರು ಹೆಮ್ಮೆಯಿಂದ ಆಳಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಸ್ಮರಿಸಲೇಬೇಕು. ಕಾರಣ ಅವರೇ ಸಾಹಿತ್ಯ ಕ್ಷೇತ್ರವನ್ನು ಪೋಷಿಸಿ ಬೆಳೆಸಿದವರು. ಅನ್ನದ ಮುಂದೆ ಬೇರೆ ದೇವರಿಲ್ಲ. ಅನ್ನ ಬೆಳೆಯುವವ ನೇಗಿಲಯೋಗಿ. ಅವರನ್ನುö ಯೋಗಿ ಎಂದು ಗೌರವಿಸಿದರು. ಕಾಮ, ಕ್ರೋಧ, ಮದ, ಮತ್ಸರಗಳಿಂದ ಮನುಷ್ಯ ಮೃಗವಾಗುತ್ತಿದ್ದಾನೆ. ಅಂತಹ ಮೃಗತ್ವ ದೂರವಾದ ನಮ್ಮ ಮಕ್ಕಳು ಉತ್ತಮ ಪ್ರಜೆಗಳಾಗಲು ಸಾಧ್ಯ. ಇನ್ನೊಬ್ಬರ ಗುಲಾಮರಾಗಿದ್ದೆವು, ಇಂದು ಸ್ವತಂತ್ರರಾಗಿದ್ದೇವೆ.

ಯೋಗ್ಯರ ಕೈಯ್ಯಲ್ಲಿ ದೇಶ, ಆಡಳಿತ ಇಲ್ಲವಾದರೆ ಸಂಸ್ಕೃತಿ ದೇಶ ಎಲ್ಲವೂ ನಾಶವಾಗುತ್ತದೆ. ನಾವಿಂದಿಗೂ ಗುಲಾಮ ಮನಸ್ಥಿತಿಯಲ್ಲಿ ಇದ್ದೇವೆ, ಎಂದರು.

ಉತ್ತರಕನ್ನಡ ಜಿಲ್ಲೆಯ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕು. ಈ ಪರಿಸರ ದೇವತೆ ಎಂದು ಭಾವಿಸಿ ಅದನ್ನು ರಕ್ಷಿಸಿದರೆ, ಅದು ನಮ್ಮನ್ನು ರಕ್ಷಿಸಿಸುತ್ತದೆ. ಇದನ್ನು ಮಕ್ಕಳಿಗೆ ತಿಳಿಸುವ ಕೆಲಸ ಆಗಬೇಕು. ಈ ಜಿಲ್ಲೆಯ ನೆಲದಲ್ಲಿ ಒಗ್ಗಟ್ಟು ಸ್ನೇಹ, ಪ್ರೀತಿ ಇದೆ ಎಂದು ಈ ಸಮ್ಮೇಳನ ತೋರಿಸುತ್ತಿದೆ, ಎಂದರು.

ಸಮ್ಮೇಳನದ ಅಧ್ಯಕ್ಷ ಆರ್ ಡಿ ಹೆಗಡೆ ಹೇಳಿದ್ದೇನು?

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಆರ್.ಡಿ ಹೆಗಡೆ ಮಾತನಾಡಿ ಸಾಹಿತ್ಯದಲ್ಲಿ ಧರ್ಮ ,ಜಾತಿ ಇರಬಾರದು, ಕನ್ನಡ ಭಾಷೆ ಉಳಿಯಬೇಕು ಹತ್ತನೇ ತರಗತಿಯ ವರೆಗೆ ಕನ್ನಡ ಕಡ್ಡಾಯ ಶಿಕ್ಷಣ ಜಾರಿಗೆ ತರಬೇಕು ಎಂದರು. ಇನ್ನು ಜಿಲ್ಲೆಯ ಜನ ಕರ್ಣನಂತೆ ಎಲ್ಲವನ್ನೂ ದಾನ ಮಾಡಿದ್ದಾರೆ, ಪಡೆದುಕೊಳ್ಳುವುದು ಜಿಲ್ಲೆಯ ಜನರಿಗೆ ತಿಳಿದಿಲ್ಲ, ಕೊಟ್ಟಿದ್ದೇ ಹೆಚ್ಚು, ತ್ಯಾಗ ಮಾಡುವ ಜನ ಜಿಲ್ಲೆಯ ಜನ ಈಗಲಾದರೂ ಪಡೆದುಕೊಳ್ಳುವುದನ್ನು ಕಲಿಯಬೇಕು , ಜಿಲ್ಲೆಯ ಮೂಲಭೂತ ಸಮಸ್ಯೆ ಬಗೆಹರಿಯಬೇಕು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಜಿಲ್ಲೆಗೆ ಎರಡು ಅವಷ್ಯವಿದೆ ಎಂದರು.

ಸಾಹಿತ್ಯಾಸಕ್ತರಿಗೆ ಪುಸ್ತಕದ ಮನೆ.

ಇನ್ನು ಸಮ್ಮೇಳನದ ಹೊರಾಂಗಣದಲ್ಲಿ ವಿವಿಧ ಪುಸ್ತಕಗಳ ಪ್ರದರ್ಶನ ಮಾರಾಟ ವ್ಯವಸ್ಥೆ ಮಾಡಲಾಗಿದ್ದು ಓದುಗರನ್ನ ಸೆಳೆಯಿತು.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ