Shirur :ಗುಡ್ಡ ಕುಸಿತದಲ್ಲಿ ಮಾಲೀಕನನ್ನು ಕಳೆದುಕೊಂಡು ಅನಾಥವಾಗಿದ್ದ ಶ್ವಾನ ಮ್ಯಾರಥಾನ್ ನಲ್ಲಿ ಓಟ :ಬೆಳ್ಳಿ ಪದಕ
Shirur :ಗುಡ್ಡ ಕುಸಿತದಲ್ಲಿ ಮಾಲೀಕನನ್ನು ಕಳೆದುಕೊಂಡು ಅನಾಥವಾಗಿದ್ದ ಶ್ವಾನ ಮ್ಯಾರಥಾನ್ ನಲ್ಲಿ ಓಟ :ಬೆಳ್ಳಿ ಪದಕ.

ಕಾರವಾರ :- ಶಿರೂರು ಗುಡ್ಡ ಕುಸಿತದಲ್ಲಿ ತನ್ನ ಮಾಲೀಕನನ್ನು ಕಳೆದುಕೊಂಡು ಅನಾಥವಾಗಿ ಕುಸಿದ ಗುಡ್ಡದ ಅವಶೇಷದಲ್ಲಿ ಮಾಲೀಕನಿಗಾಗಿ ಕಾದು ಕುಳಿತಿದ್ದ ಶ್ವಾನ(Dog) ಇದೀಗ ಪೊಲೀಸ್ ಇಲಾಖೆ (police department )ಸೇರಿದೆ.ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿ ಎಂ. ನಾರಾಯಣ್ ಇದನ್ನು ದತ್ತು ಪಡೆದು ಪಳಗಿಸಿದ್ದು ಇಂದು ಮಾದಕ ದ್ರವ್ಯ ಹಾಗೂ ಸೈಬರ್ ಅಪರಾಧ ಮುಕ್ತ ಕರ್ನಾಟಕ ಜಾಗೃತಿ ಮೂಡಿಸಲು ನಡೆದ ಮ್ಯಾರಾಥಾನ್ ( marathon) ನಲ್ಲಿ ಈ ಶ್ವಾನ 5 ಕಿಲೋಮೀಟರ್ ಹೆಜ್ಜೆ ಹಾಕಿ ಬೆಳ್ಳಿ ಪದಕ ಗಳಿಸಿತು.

ಹೌದು ಶಿರೂರಿನ (shirur)ಗುಡ್ಡ ಕುಸಿತ ಪ್ರಕರಣ ಇಡೀ ರಾಜ್ಯದಲ್ಲಿಯೇ ಸದ್ದು ಮಾಡಿತ್ತು. ಕಳೆದ 2024ರ ಜುಲೈ 16 ರಂದು ಧಾರಾಕಾರವಾಗಿ ಸುರಿದ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತವಾಗಿ 11 ಜನ ಮೃತಪಟ್ಟಿದ್ದರು.
ಇದನ್ನೂ ಓದಿ:-Shiruru ದುರಂತ :ಕಾಣೆಯಾದ DNA ವರದಿ ಕೊನೆಗೂ ನೋವು ತಿಂದ ಕುಟುಂಬಕ್ಕೆ ಸಂದ ಪರಿಹಾರ
ಹೆದ್ದಾರಿ ಪಕ್ಕದಲ್ಲೇ ಲಕ್ಷ್ಮಣ್ ನಾಯ್ಕ ಎನ್ನುವಾತ ಹೋಟೆಲ್ ನಡೆಸುತ್ತಿದ್ದು ಗುಡ್ಡ ಕುಸಿದು ಮಣ್ಣು ಹೋಟೆಲ್ ಮೇಲೆ ಬಿದ್ದ ಪರಿಣಾಮ ಆತ, ಆತನ ಪತ್ನಿ ಹಾಗೂ ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದರು.
ಇನ್ನು ಈ ಘಟನೆಯಲ್ಲಿ ಲಕ್ಷ್ಮಣ್ ನಾಯ್ಕ ಕುಟುಂಬದವರು ಪ್ರೀತಿಯಿಂದ ಸಾಕಿದ್ದ ಶ್ವಾನವೊಂದು ಅನಾಥವಾಗಿತ್ತು. ಕಾರ್ಯಚರಣೆ ನಡೆಯುವ ಪ್ರತಿದಿನ ಬಂದು ಮಾಲೀಕನ ಬರುವಿಕೆಗಾಗಿ ಶ್ವಾನ ಕಾಯುತ್ತಾ ಕುಳಿತಿರುವುದು ಸಾಕಷ್ಟು ಗಮನ ಸೆಳೆದಿತ್ತು.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ. ನಾರಾಯಣ್ ಇದನ್ನ ಗಮನಿಸಿ ಶ್ವಾನವನ್ನ ತಂದು ತನ್ನ ಮನೆಯಲ್ಲಿ ಸಲುಹಿದರು. ಜಿಲ್ಲಾ ಪೊಲೀಸ್ ಶ್ವಾನದಳದಲ್ಲಿ ಇದೇ ಶ್ವಾನಕ್ಕೆ ತರಬೇತಿ ನೀಡಿದ್ದ ಸದ್ಯ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಈ ಶ್ವಾನ ಎಲ್ಲರ ಗಮನ ಸೆಳೆದಿದೆ.
ಇಂದು ಪೊಲೀಸ್ ಇಲಾಖೆಯಿಂದ ನಡೆದ ಮಾದಕ ದ್ರವ್ಯ ಹಾಗೂ ಸೈಬರ್ ಅಪರಾಧ ಮುಕ್ತ ಕರ್ನಾಟಕ ಜಾಗೃತಿ ಮೂಡಿಸಲು ನಡೆದ ಮ್ಯಾರಾಥಾನ್ ನಲ್ಲಿ ಈ ಶ್ವಾನ 5 ಕಿಲೋ ಮೀಟರ್ ಸಂಚರಿಸಿ ಬೆಳ್ಳಿ ಪದಕವನ್ನ ಪಡೆದಿದ್ದು ಕಾರವಾರದ ಶಾಸಕ ಸತೀಶ್ ಸೈಲ್ ಶ್ವಾನಕ್ಕೆ ಪದಕ ತೊಡಿಸಿದರು.

ಇನ್ನು ಶ್ವಾನಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ ನಾರಾಯಣ್ ತನ್ನ ಮನೆಯಲ್ಲಿಯೇ ಇಟ್ಟುಕೊಂಡು ತರಬೇತಿಯನ್ನ ನೀಡಿದ್ದು ಬೇರೆ ಶ್ವಾನಗಳಂತೆ ಈ ಶ್ವಾನ ಸಹ ಸಾಕಷ್ಟು ಚುರುಕಿನಿಂದ ಕೆಲಸ ಮಾಡುತ್ತಿದೆ.
ಅಲ್ಲದೇ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ನೆಚ್ಚಿನ ಶ್ವಾನವಾಗಿದ್ದು ಪ್ರತಿನಿತ್ಯ ಬೆಳಿಗ್ಗೆ ಕೆಲಸಕ್ಕೆ ಹೊಗಬೇಕಾದರೆ ಸಲ್ಯೂಟ್ ಮಾಡಿಯೇ ಕಳಿಸುತ್ತದೆ. ಇನ್ನು ಮನೆಗೆ ವಾಪಾಸ್ ಬರುವ ವೇಳೆಯಲ್ಲಿ ಗೇಟ್ ಬಳಿಯೇ ಕಾಯುತ್ತಾ ಕುಳಿತಿರುತ್ತದೆ. ಬೆಂಗಳೂರಿನಲ್ಲಿ ಮೀಟಿಂಗ್ ಇನ್ನಿತರ ಕಾರಣಕ್ಕೆ ಮೂರ್ನಾಲ್ಕು ದಿನ ಎಸ್ ಪಿ ನಾರಾಯಣ್ ತೆರಳಿದರೆ ಈ ಶ್ವಾನ ಮಂಕಾಗಿ ಇರುತ್ತದೆ. ಈ ಹಿನ್ನಲೆಯಲ್ಲಿ ಶ್ವಾನ ತನ್ನ ಮನೆಯ ಸದಸ್ಯನಂತಾಗಿದೆ ಎನ್ನುತ್ತಾರೆ ಪೊಲೀಸ್ ವರಿಷ್ಟಾಧಿಕಾರಿ ಎಂ ನಾರಾಯಣ್.
ಇದನ್ನೂ ಓದಿ:-Shirur ಭೂ ಕುಸಿತ ದುರಂತ| ಕೇರಳದ ಮೃತ ಅರ್ಜುನ್ ಲಾರಿ ಮಾಲೀಕ ಮುನಾಫ್ ವಿರುದ್ಧ ಪ್ರಕರಣ ದಾಖಲು.
ಶಿರೂರಿನಲ್ಲಿ ಸಿಕ್ಕ ಶ್ವಾನಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಮನೆಯಲ್ಲಿ ವಿಶೇಷ ಆತಿಥ್ಯ ನೀಡಿದ್ದಾರೆ.ಒಂದುವೇಳೆ ಹಾಗೆಯೇ ಬೀದಿಯಲ್ಲಿ ಬಿಟ್ಟಿದ್ದರೇ ಇಂದು ಮಾಲೀಕನಿಲ್ಲದೇ ಬೀದಿಯಲ್ಲಿ ಅನಾಥವಾಗಿ ಸಾಯಬೇಕಿದ್ದ ಶ್ವಾನ ಇಂದು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ನಾಯಿಯ ನಿಯತ್ತು ಎಂದರೇ ಇದೇ ಅಲ್ಲವೇ.