Yana: 29 ವರ್ಷದ ಬಳಿಕ ಯಾಣಕ್ಕೆ ಭೇಟಿ ನೀಡಿ ಶಿವಣ್ಣ ಭಾವುಕ! ಏನಂದ್ರು ಗೊತ್ತಾ
Yana: 29 ವರ್ಷದ ಬಳಿಕ ಯಾಣಕ್ಕೆ ಭೇಟಿ ನೀಡಿ ಶಿವಣ್ಣ ಭಾವುಕ! ಏನಂದ್ರು ಗೊತ್ತಾ.
ಕಾರವಾರ: ಖ್ಯಾತ ಚಲನಚಿತ್ರ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್( Shiva Rajkumar)
ಇತ್ತೀಚೆಗೆ ಅನಾರೋಗ್ಯದಿಂದ ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದಾರೆ.
ಇದೀಗ ಶಿವಮೊಗ್ಗ ,ಶಿರಸಿ ಎಂದು ಮಲೆನಾಡಿನ ಪರಿಸರದಲ್ಲಿ ಓಡಾಡುತ್ತಾ ಹಸಿರ ಸಿರಿಯನ್ನು ಆನಂದಿಸುತಿದ್ದಾರೆ.
ಆಪರೇಷನ್ ಬಳಿಕ ಚೇತರಿಸಿಕೊಂಡಿರುವ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shiva Rajkumar) 29 ವರ್ಷಗಳ ಬಳಿಕ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿತಾಣವಾಗಿರುವ ಯಾಣಗೆ (Yana) ಭೇಟಿ ನೀಡಿದ್ದಾರೆ.
ಇದನ್ನೂ ಓದಿ:-Actor Umashree ಮಂಥರೆ yakshagana ವೇಶ ಹೇಗಿದೆ ಗೊತ್ತಾ| ವಿಡಿಯೋ ನೋಡಿ
ಹೌದು ಯಾಣಕ್ಕೆ ಭೇಟಿ ನೀಡಿದ ಅವರು 29 ವರ್ಷದ ಹಿಂದೆ ಯಾಣದಲ್ಲಿ ಚಿತ್ರೀಕರಣವಾಗಿದ್ದ ನಮ್ಮೂರ ಮಂದಾರಹೂವೆ ಸಿನಿಮಾ ಚಿತ್ರೀಕರಣಕ್ಕೆ ಇಲ್ಲಿ ತಂಗಿದ್ದರು.
ಆದ್ರೆ ಇದೀಗ ಮತ್ತೆ ಯಾಣಕ್ಕೆ ಭೇಟಿ ನೀಡಿದ್ದು ,ಹಳೆಯ ಫೋಟೋ ಹಾಗೂ ಇತ್ತೀಚೆಗೆ ಭೇಟಿ ಕೊಟ್ಟ ಫೋಟೋವನ್ನು ಇನ್ಸ್ಟಾದಲ್ಲಿ ಶೇರ್ ಮಾಡಿಕೊಂಡು ಶಿವಣ್ಣ ಖುಷಿ ಹಂಚಿಕೊಂಡಿದ್ದಾರೆ. ಶಿವಣ್ಣ ಜೊತೆ ಪತ್ನಿ ಗೀತಾ ಕೂಡ ಯಾಣಗೆ ಭೇಟಿ ಕೊಟ್ಟಿದ್ದಾರೆ.
ಇನ್ನೂ ಯಾಣಕ್ಕೆ ಭೇಟಿ ನೀಡಿರುವ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಶಿವಣ್ಣ, ಬಾಳಿನ ಬೆನ್ನು ಹತ್ತಿ.. ನೂರಾರು ಊರು ಸುತ್ತಿ.. ಏನೇನೋ ಕಂಡ ಮೇಲೂ.. ನಮ್ಮೂರೇ ನಮಗೆ ಮೇಲೂ ಎಂಬ ಸಾಲು ಬರೆದುಕೊಂಡಿದ್ದಾರೆ.
ಅಂದಹಾಗೆ ಶಿವಣಣನಿಗೆ ಉತ್ತರ ಕನ್ನಡ ಹೊಸದಲ್ಲ. ಶಿರಸಿಯ ಶಾಸಕ ಭೀಮಣ್ಣ ನವರು ಇವರಿಗೆ ಸಂಬಂಧಿ. ಈ ಹಿಂದೆ ಭೀಮಣ್ಣ ನಾಯ್ಕ ರವರ ಗೆಲುವಿಗಾಗಿ ಶಿರಸಿಯಲ್ಲಿ ಇದ್ದು ಪ್ರಚಾರ ನಡೆಸಿದ್ದರು.
ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಆಗಾಗ ಭೇಟಿ ನೀಡುವ ಶಿವಣ್ಣ ಶಿರಸಿಯಲ್ಲಿ ಉಳಿಯುತ್ತಾರೆ. ಇತ್ತೀಚೆಗೆ ಶಿರಸಿಯ ಚಿತ್ರಮಂದಿರದಲ್ಲಿ ಸಿನಿಮಾ ಸಹ ವೀಕ್ಷಣೆ ಮಾಡಿದ್ದು ಇದೀಗ ಅನಾರೋಗ್ಯದಿಂದ ಚೇತರಿಕೆ ಕಂಡಿರುವ ಶಿವಣ್ಣ ಉತ್ತರ ಕನ್ನಡ ,ಸೊರಬ ಭಾಗದಲ್ಲಿ ಹಸಿರಿನ ಮಡಿಲಿನಲ್ಲಿ ಕುಟುಂಬದ ಜೊತೆ ಸುತ್ತಾಟ ನಡೆಸುತಿದ್ದಾರೆ.