Sirsi : ಸಾಗುವಾನಿ ನಾಟ ವಶ: ಮೂವರ ಬಂಧನ
Sirsi : ಸಾಗುವಾನಿ ನಾಟ ವಶ: ಮೂವರ ಬಂಧನ.

ಕಾರವಾರ :- ಅಕ್ರಮವಾಗಿ ಸಾಗುವಾನಿ ಮರ ಕಡಿದ ಮೂರು ಜನ ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ (sirsi) ಶಿವಳ್ಳಿ ಗ್ರಾಮದಲ್ಲಿ ನಡೆದಿದೆ.
ಬಂಧಿರಿಂದ ಲಕ್ಷಾಂತರ ಮೌಲ್ಯದ ನಾಲ್ಕು ಸಾಗವಾನಿ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಶಿವಳ್ಳಿಯ ಮಂಜುನಾಥ ಕೃಷ್ಣ ಮೋಗೇರ (39), ಕೃಷ್ಣ ರಾಮಚಂದ್ರ ಪಟಗಾರ (33) , ಶಾಂತಪ್ಪ ರಾಮಣ್ಣ ತಳವಾರ( 45) ಬಂಧಿತ ಆರೋಪಿಗಳಾಗಿದ್ದಾರೆ.
ಇದನ್ನೂ ಓದಿ:-Uttara kannda ಮೀಟರ್ ಬಡ್ಡಿ ಕಿರುಕುಳ ಮುಂಡಗೋಡಿನಲ್ಲಿ 18 ಜನರ ಬಂಧನ
ಶಿರಸಿ ತಾಲೂಕು ಶಿವಳ್ಳಿ ಗ್ರಾಮದ ಅರಣ್ಯ ಸ.ನಂ-139ರಲ್ಲಿ ಅನಧಿಕೃತವಾಗಿ ಸಾಗವಾನಿ ಜಾತಿಯ ಮರವನ್ನು ಕಡಿದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅಜ್ಜಯ್ಯ ಜಿ ಆರ್ , ಎಸ್. ಎಸ್. ನಿಂಗಾಣಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಶಿರಸಿ ಉಪ ವಿಭಾಗ, ಶಿರಸಿ ಇವರ ಮಾರ್ಗದರ್ಶನದಲ್ಲಿ ಬನವಾಸಿಯ ವಲಯ ಅರಣ್ಯಾಧಿಕಾರಿ ಭವ್ಯಾ ನಾಯ್ಕ,ಇವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
