Uttara kannda : ಜಿಲ್ಲೆಯಲ್ಲಿ ಇಂದು ಏನು ಸುದ್ದಿ? ವಿವರ ನೋಡಿ.
Uttara kannda : ಜಿಲ್ಲೆಯಲ್ಲಿ ಇಂದು ಏನು ಸುದ್ದಿ? ವಿವರ ನೋಡಿ.

ಉತ್ತರ ಕನ್ನಡ ಜಿಲ್ಲೆಯಲ್ಲಿ (uttara kannda ) ಶನಿವಾರ ಯಾವ ತಾಲೂಕಿನಲ್ಲಿ ಏನಾಯ್ತು ವಿವರ ಈ ಕೆಳಗಿನಂತಿದೆ.
ಸಿದ್ದಾಪುರ: ಕುಡಿತದ ನಶೆಯಲ್ಲಿ ಇರುವೆ ಔಷಧಿ ಕುಡಿದ ವ್ಯಕ್ತಿ ಸಾವು.
Siddapura news:-ಕೈಯಲ್ಲಿ ಬಾವು ಬಂದ ಬಗ್ಗೆ ತಲೆಕೆಡಿಸಿಕೊಂಡು ಮನನೊಂದು ಕುಡಿದ ನಶೆಯಲ್ಲಿ ಇರುವೆ ಔಷಧಿ ಸೇವಿಸಿದ್ದ ವ್ಯಕ್ತಿಯು ಚಿಕಿತ್ಸೆ ಫಲಿಸದೇ ಶಿವಮೊಗ್ಗ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಸಿದ್ದಾಪುರ ತಾಲೂಕಿನ ಕಾನಗೋಡಿನ ನಾರಾಯಣ ನಾಯ್ಕ (55) ಎಂಬುವವರು ಇರುವೆಗೆ ಹಾಕುವ ಔಷಧಿ ಸೇವಿಸಿ ಅಸ್ವಸ್ಥಗೊಂಡು ಶಿವಮೊಗ್ಗ ಆಸ್ಪತ್ರೆಗೆ ಸೇರಿದ್ದು, ಅಲ್ಲಿಯೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಾಗಿದೆ.
ಹಳಿಯಾಳ: ಪತ್ನಿ ಜೊತೆ ಪರಪುಷ: ಪ್ರಶ್ನೆ ಮಾಡಿದ ಪತಿಗೆ ಗೂಸಾ.
Haliyala news :ಪತ್ನಿ ಪರ ಪುರುಷನ ಜೊತೆ ಇದ್ದಾಗಲೇ ಪತಿ ಬಂದು ಮನೆಯ ಹೊರಗಿಂದ ಬಾಗಿಲು ಹಾಕಿದ್ದು, ಪತಿಯ ಸಹೋದರರು ಆಕ್ಷೇಪಿಸಿದ್ದಕ್ಕೆ ಸಹೋದರರಿಗೇ ಗೂಸಾ ನೀಡಿದ ಕುರಿತು ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳಿಯಾಳದ ರಾಜಅಲಿ ಸಾಬ್ ದೂರು ನೀಡಿದ ವ್ಯಕ್ತಿ. ರಾಜಅಲಿ ಸಾಬ್ ಅವರ ಜೊತೆ ತಮ್ಮಂದಿರಾದ ಮಹಿದ್ ಜಾಂಗಳೆ ಹಾಗೂ ಅಮಾನ್‌ಸಾಬ್ ಜಾಂಗಳೆ ಜಗಳ ಮಾಡಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಅಲ್ಲಿ ರಾಜೀಸಂಧಾನ ಆಗಿದ್ದು ಸಮಾಧನ ಆಗದೇ ನ್ಯಾಯಾಲಯದ ಮೂಲಕ ಪ್ರಕರಣ ದಾಖಲಿಸಿದ್ದಾರೆ.
ಭಟ್ಕಳ: ಅಜ್ಜಿಯ ಆಭರಣ ದೋಚಿದ ಪ್ರಕರಣ ; ಮೊಮ್ಮಗನ ಬಂಧನ

Bhatkal news :-ಅಜ್ಜಿಯ ಆಭರಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಮೊಮ್ಮಗನನ್ನೇ ಬಂಧಿಸಿದ ಘಟನೆ ಭಟ್ಕಳದಲ್ಲಿ ನಡೆದಿದೆ. ತಾಜಮ್ಮುಲ್ ಹಸನ್ ಅಕ್ಕೇರಿ(46) ದರೋಡೆ ಪ್ರಕರಣದಲ್ಲಿ ಬಂಧಿತ ಆರೋಪಿ. ಮಾ. 17. ರಂದು ಅಜ್ಜಿಯ ಬಾಯಿ ಮುಚ್ಚಿ ಅಪರಿಚಿತನೊಬ್ಬ ಆಕೆಯ ಚಿನ್ನಾಭರಣ ದೋಚಿದ ಕುರಿತು ದೂರು ದಾಖಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಅಪರಾಧ ಕೃತ್ಯದ ನಂತರ, ಆರೋಪಿಯು ಆರಂಭದಲ್ಲಿ ಮನೆಯಲ್ಲಿಯೇ ಇದ್ದು, ನಂತರ ಮನೆಯಿಂದ ಪರಾರಿಯಾಗಿದ್ದನು.
ಮುಂಡಗೋಡ: ಪರವಾನಗಿ ಇಲ್ಲದ ಖಾಸಗಿ ಕ್ಲೀನಿಕ್ ಗಳಿಗೆ ಬೀಗ.

Mundgod news:- ಕೆ. ಪಿ. ಎಮ್. ಇ ಪರವಾನಗಿ ಪಡೆಯದೆ ನಡೆಸುತ್ತಿದ್ದ ಆಸ್ಪತ್ರೆಗಳ ಮೇಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಆಸ್ಪತ್ರೆಯನ್ನು ಮುಚ್ಚಿಸಿದ ಘಟನೆ ಶನಿವಾರ ನಡೆಯಿತು.
ಇದನ್ನೂ ಓದಿ:-Mundgodu: ಕಚೇರಿಯಲ್ಲೇ ಹೊಡೆದಾಡಿಕೊಂಡ ಉಪತಹಶಿಲ್ದಾರ್ ,ಕಂದಾಯ ಅಧಿಕಾರಿ
ಮುಂಡಗೋಡ ಪಟ್ಟಣದ ಹಲವು ಕ್ಲೀನಿಕ್ ಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ದಾಖಲೆ ಪರಿಶೀಲಿಸಿದಾಗ ಪರವಾನಗಿ ಪಡೆಯದೆ ಇರುವುದು ಕಂಡು ಬಂತು. ಇದರಿಂದ ಪರವಾನಗಿ ಪಡೆದುಕೊಂಡು ನಂತರ ಆಸ್ಪತ್ರೆಯನ್ನು ಆರಂಭಿಸಿ ಅಲ್ಲಿವರೆಗೆ ಬೀಗ ಹಾಕುವಂತೆ ಸೂಚಿಸಿದರು.