Uttara kannda ಗೋ ಹತ್ಯೆ ಪ್ರಕರಣದ ಆರೋಪಿಗಳ ಜಾಡಿನ ಬಗ್ಗೆ ಎಸ್.ಪಿ ಎಂ.ನಾರಾಯಣ್ ಹೇಳಿದ್ದೇನು?
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದ ಗರ್ಭ ಧರಿಸಿದ್ದ ಗೋ ಹತ್ಯೆ ಪ್ರಕರಣವನ್ನ ಭೇದಿಸುವಲ್ಲಿ ಉತ್ತರ ಕನ್ನಡ ಪೊಲೀಸ್ (uttara kannda police) ಕೊನೆಗೂ ಯಶಸ್ವಿಯಾಗಿದ್ದಾರೆ.
ಪ್ರಕರಣದ ಆರೋಪಿಗಳಲ್ಲಿ ಒಬ್ಬನ ಕಾಲಿಗೆ ಗುಂಡು ಹಾರಿಸಿದ್ದರೆ, ಇನ್ನೊಬ್ಬನನ್ನ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಹಾಗೂ ಪ್ರಮುಖ ಆರೋಪಿಗಳಿಬ್ಬರ ಹುಡುಕಾಟ ಚುರುಕುಗೊಳಿಸಿದ್ದು ಹುಡುಕಿ ಕೊಟ್ಟವರಿಗೆ 50 ಸಾವಿರ ಬಹುಮಾನ ಘೋಷಣೆ ಮಾಡಲಾಗಿದೆ.

ಏನಿದು ಘಟನೆ ? ತನಿಖೆಯಲ್ಲಿ ತಿಳಿದದ್ದೇನು?
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕೊಂಡಕುಳಿ ಗ್ರಾಮದಲ್ಲಿಗ್ರಾಮದಲ್ಲಿ ಜನವರಿ 19 ರಂದು ನಡೆದಿದ್ದ ಗರ್ಭ ಧರಿಸಿದ್ದ ಹಸುವಿನ ಹತ್ಯೆ ಪ್ರಕರಣ ಇಡೀ ರಾಜ್ಯದಲ್ಲಿ ಸದ್ದು ಮಾಡಿತ್ತು.
ಪ್ರಕರಣದ ಆರೋಪಿಗಳನ್ನ ಬಂಧಿಸುವಂತೆ ಸಾಕಷ್ಟು ಹೋರಾಟಗಳು ನಡೆದಿದ್ದವು. ಇನ್ನು ಪ್ರಕರಣದ ಹಿಂದೆ ಬಿದ್ದಿದ್ದ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಆರೋಪಿಗಳನ್ನ ಗುರುತಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಕೊಂಡಕುಳಿ ಗ್ರಾಮದಲ್ಲಿ ಮೇಯಲು ಬಂದಿದ್ದ ಹಸುವನ್ನ ಕಡಿದು ಭಟ್ಕಳದಲ್ಲಿ ಮದುವೆ ಸಮಾರಂಭದಲ್ಲಿ ಊಟಕ್ಕೆ ಬಳಕೆ ಮಾಡಲು ಆರೋಪಿಗಳು ನೀಡಿದ್ದರು. ಇದಲ್ಲದೇ ಕೊಂದ ಹಸುವಿನ ಫೋಟೋ ಹೊಡೆಯುವ ಜೊತೆ ಅದರ ಮಾಂಸದ ಫೋಟೋ ಹೊಡೆದು ಗ್ರಾಹರಿಗೆ ಕಳುಹಿಸಿ ವ್ಯವಹಾರ ಮಾಡುತಿದ್ದರು.
ಇದನ್ನೂ ಓದಿ:-Honnavara ಗರ್ಭಿಣಿ ಆಕಳು ರುಂಡ ,ಕಾಲು ಕಡಿದು ,ಕರುಹತ್ಯೆ ಮಾಡಿದ ದುರುಳರು!
ಆರೋಪಿಗಳ ಪತ್ತೆಗಾಗಿ ಸುಮಾರು 400ಕ್ಕೂ ಅಧಿಕ ಜನರನ್ನ ಪೊಲೀಸರು ವಿಚಾರಣೆ ನಡೆಸಿ ಕೊನೆಗೂ ಹೊನ್ನಾವರ ತಾಲೂಕಿನ ಮಲ್ಕಿಯ ತೌಫಿಕ್ ಎನ್ನುವ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಹೊನ್ನಾವರ ತಾಲೂಕಿನ ಕಾಸರಕೋಡ ಫೈಝನ್ ಎನ್ನುವ ಆರೋಪಿಯನ್ನ ಸಹ ಬಂಧಿಸಿದ್ದು ಆರೋಪಿ ಹಸು ಕಡಿಯಲು ಬಳಸಿದ್ದ ಕತ್ತಿಯನ್ನ ವಶಕ್ಕೆ ಪಡೆಯಲು ಹೋದ ವೇಳೆಯಲ್ಲಿ ಪೊಲೀಸರ ಮೇಲೆ ದಾಳಿ ನಡೆಸಿದ್ದು ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.
ಘಟನೆ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ್ ಹೇಳಿದ್ದೇನು? ವಿಡಿಯೋ ನೋಡಿ
ಇನ್ನು ಪ್ರಕರಣದಲ್ಲಿ ನಾಲ್ವರು ಆರೋಪಿಗಳಿದ್ದು ಇಬ್ಬರು ಹಿಂದೂ ಸಮಾಜದ ಆರೋಪಿಗಳು ಕೃತ್ಯಕ್ಕೆ ಸಹಾಯ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣದಲ್ಲಿ ಹೊನ್ನಾವರ ತಾಲೂಕಿನ ವಾಸಿಂ ಹಾಗೂ ಮುಜಾಮಿಲ್ ಎನ್ನುವವರು ಪ್ರಮುಖ ಆರೋಪಿಗಳಾಗಿದ್ದು ಇಬ್ಬರು ಪರಾರಿಯಾಗಿದ್ದಾರೆ.
ಇದನ್ನೂ ಓದಿ:-Honnavara ಗರ್ಭಧರಿಸಿದ್ದ ಗೋಹತ್ಯೆ ಮಾಡಿದ್ದ ಓರ್ವ ಆರೋಪಿ ಬಂಧನ ! ಕೆಂಡ ಹಿಡಿದು ನಿಂತವರ ಸುತ್ತಾ ಹಲವು ಪ್ರಶ್ನೆ? ಏನದು
ಪೊಲೀಸರು ಈಗಾಗಲೇ ತಪ್ಪಿಸಿಕೊಂಡ ಇಬ್ಬರು ಆರೋಪಿಗಳ ಬಂಧನಕ್ಕೆ ಜಾಡು ಬೀಸಿದ್ದು ಆರೋಪಿಗಳ ಬಗ್ಗೆ ಮಾಹಿತಿ ನೀಡಿದರೆ, ಅಥವಾ ಆರೋಪಿ ಹುಡುಕಿಕೊಟ್ಟಲ್ಲಿ 50 ಸಾವಿರ ಬಹುಮಾನ ಕೊಡುವುದಾಗಿ ಎಸ್.ಪಿ ಎಂ ನಾರಾಯಣ್ ಘೋಷಣೆ ಮಾಡಿದ್ದಾರೆ.
ಆರೋಪಿಗಳು ಹಸು ಹಾಗೂ ಕರುವಿನ ಮಾಂಸವನ್ನ ಭಟ್ಕಳದ ಮದುವೆ ಸಮಾರಂಭಕ್ಕೆ ನೀಡಿದ್ದು ಅವರಿಂದ 7500 ಸಾವಿರ ಹಣವನ್ನ ಸಹ ಪಡೆದಿದ್ದರು. ಗೂಗಲ್ ಪೇ ಮೂಲಕ ಹಣ ಹಾಕಿಸಿಕೊಂಡ ದಾಖಲೆ ಪೊಲೀಸರಿಗೆ ಲಭ್ಯವಾಗಿದ್ದು ಸದ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ 6 ತಂಡಗಳನ್ನ ಮಾಡಿ ನಾಪತ್ತೆಯಾದ ಇಬ್ಬರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದಾರೆ.
ಆರೋಪಿಯಿಂದಾಗಿ ಗಾಯಗೊಂಡ ಪೊಲೀಸರು ಯಾರು?

ಜನವರಿ 25 ರಂದು ಹೊನ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯ ಹೊನ್ನಾವರ ತಾಲೂಕಾ ದುಗ್ಗುರು ರಸ್ತೆ ಹತ್ತಿರ ಆರೋಪಿತ ಪೈಜಾನ್ ನಿಂದ ಆಯುಧ ಜಪ್ತಿ ಪಂಚನಾಮೆ ಜರುಗಿಸುವ ಕಾಲಕ್ಕೆ ಆರೋಪಿತ ತಪ್ಪಿಸಿಕೊಳ್ಳಲು ಕರ್ತವ್ಯನಿರತ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ್ದು ಆ ಸಮಯದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಾದ ಹೊನ್ನಾವರ ಪೊಲೀಸ್ ಠಾಣೆ ಯ PI ಸಿದ್ಧರಾಮೇಶ್ವರ ,PSI ರಾಜಶೇಖರ ವಂದಲಿ , CHC ಗಜಾನನ ನಾಯ್ಕ,CPC ಗಣೇಶ ಬಡ್ನಿ ಎಂಬುವ ಅಧಿಕಾರಿಗಳಾಗಿದ್ದಾರೆ.
ಇನ್ನು ಆರೋಪಿಯ ಕಾಲಿಗೆ ಗುಂಡು ಹಾರಿಸಿದ ಪ್ರಕರಣ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿದ್ದು ಕಾನೂನು ಉಲ್ಲಂಘಿಸಿದವರ ಮೇಲೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ ಎಂದು ವಾರ್ನಿಂಗ್ ನೀಡಿದ್ದಾರೆ.