SSLC ಪರೀಕ್ಷೆ -ಉತ್ತರ ಕನ್ನಡ ಜಿಲ್ಲೆಯಲ್ಲಿ ಕರಾವಳಿ ವಿದ್ಯಾರ್ಥಿಗಳೇ ಹೆಚ್ಚು ಗೈರು!
SSLC ಪರೀಕ್ಷೆ -ಉತ್ತರ ಕನ್ನಡ ಜಿಲ್ಲೆಯಲ್ಲಿ ಕರಾವಳಿ ವಿದ್ಯಾರ್ಥಿಗಳೇ ಹೆಚ್ಚು ಗೈರು!
ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ (uttara kannda) ಮೊದಲ ದಿನದ ಎಸ್.ಎಸ್.ಎಲ್.ಸಿ ಕನ್ನಡ ಪರೀಕ್ಷೆ (SSLC Exam) ಮುಕ್ತಾಯವಾಗಿದೆ.
ಶಿರಸಿ (sirsi) ಮತ್ತು ಕಾರವಾರ (karwar) ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 18,989 ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆದಿದ್ದು ,ಇಂದು ಶಿರಸಿ ಮತ್ತು ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 18,769 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜುರಾಗಿದ್ದಾರೆ.
ಇದನ್ನೂ ಓದಿ:-Karwar:ಕನ್ನಡವಾಣಿ ವರದಿ ಫಲಶೃತಿ- ಗುಡ್ಡಳ್ಳಿಗೆ ಸಂಪರ್ಕ ,ನುಡಿದಂತೆ ನೆಡೆದ ಜಿಲ್ಲಾಧಿಕಾರಿ
ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು - 9560 , ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 9209 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ಶಿರಸಿ ಮತ್ತು ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 220 ವಿದ್ಯಾರ್ಥಿಗಳು ಗೈರಾಗಿದ್ದಾರೆ.ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು - 94 ವಿದ್ಯಾರ್ಥಿಗಳು ಹಾಗೂ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 126 ವಿದ್ಯಾರ್ಥಿಗಳು ಕನ್ನಡ ಪರೀಕ್ಷೆಯಲ್ಲಿ ಗೈರಾಗುದ್ದು ಅತೀ ಹೆಚ್ಚು ಕರಾವಳಿ ಭಾಗದ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಗೈರಾಗಿದ್ದಾರೆ.
ವಿಶೇಷ ಬಸ್ ವ್ಯವಸ್ಥೆ.
ಇನ್ನು ಕಾರವಾರ ವಾಯುವ್ಯ ಸಾರಿಗೆಯಿಂದ ಗ್ರಾಮೀಣ ಪ್ರದೇಶದ ವಿಧ್ಯಾರ್ಥಿಗಳಿಗೆ ಅನುಕೂಲ ಆಗಲು ಬಸ್ ವ್ಯವಸ್ಥೆಯನ್ನು ಪ್ರತ್ತೇಕವಾಗಿ ಮಾಡಿದೆ.
ಮಲ್ಲಾಪುರ,ಉಳಗ,ಕದ್ರ,ಕಾರವಾರ ಕ್ಕೆ 8-15 am ಮತ್ತು ಕಾರವಾರ-ಉಳಗ-ಕದ್ರ-ಮಲ್ಲಾಪುರ-1.30 pm ಗೆ ಬಿಡಲಿದೆ.