Uttara kannda ಕಾಳಿನದಿ- ಕುಸಿದುಬಿದ್ದ ಸ್ಥಳದಲ್ಲೇ ಸೇತುವೆ ಮರು ನಿರ್ಮಾಣ
Uttara kannda /karwar:-ಗೋವಾ -ಕರ್ನಾಟಕವನ್ನು (Goa- karnataka) ಸಂಪರ್ಕಿಸುವ ಕಾಳಿ ನದಿಯ (kali rever ) ಕಾರವಾರದ ಕೋಡಿಬಾಗದ ಹಳೆಯ ಸೇತುವೆಯು ಅ.7 ರಂದು ಕುಸಿದು ಬಿದ್ದು ಅನಾಹುತ ಸಂಭವಿಸಿತ್ತು.
ಇದರ ಬೆನ್ನಲ್ಲೇ ಹೊಸ ಸೇತುವೆ ನಿರ್ಮಾಣಮಾಡಬೇಕು ಎಂಬ ಆಗ್ರಹ ಜನರಿಂದ ಕೇಳಿಬಂದಿತ್ತು. ಆದರೇ ಬಿದ್ದ ಸೇತುವೆಯ ಅವಶೇಷಗಳ ಮೇಲೆ ಇದೀಗ ರಿಪೇರಿ ಮಾಡಿ ಅಲ್ಲಿಯೇ ಸೇತುವೆ ನಿರ್ಮಿಸುವ ಕಾರ್ಯ ಅಂತಿಮ ಹಂತಕ್ಕೆ ಬಂದಿದೆ.
ಬಹುತೇಕ ಹೊಸ ಸೇತುವೆ ನಿರ್ಮಾಣ ಮಾಗುತ್ತದೆ ಎಂದು ಜನರು ನಂಬಿದ್ದರು ಆದರೇ ಇದೀಗ ಬಿದ್ದ ಹಳೆಯ ಸೇತುವೆ ಅವಶೇಷಗಳನ್ನು ಬಳಸಿ ಅದರಮೇಲೆಯೇ ಕಟ್ಟಲಾಗಿದೆ.
ಇನ್ನು ಸದ್ಯಕ್ಕೆ ಇದನ್ನ ಹೀಗೆಯೇ ರಿಪೇರಿ ಮಾಡಿ ವಾಹನ ಓಡಾಟಕ್ಕೆ ಬಿಡುತ್ತಾರೆಯೇ ಅಥವಾ ಹೊಸ ಸೇತುವೆ ನಿರ್ಮಾಣ ಮಾಡುತ್ತಾರ ಎಂಬ ಪ್ರಶ್ನೆ ಗೆ ಅಧಿಕಾರಿಗಳ ಬಳಿಯೂ ಉತ್ತರವಿಲ್ಲ. ಇನ್ನು ಹೊಸ ಸೇತುವೆ ಮಾಡಲು ಜಾಗವೆಲ್ಲಿ ಎಂಬ ಪ್ರಶ್ನೆ ಸಹ ಎದ್ದಿದೆ.
ಈಗಿನ ಸ್ಥಿತಿ ಏನು?.
ಕಾಳಿನದಿಗೆ ಈ ಹಿಂದೆ ಇದ್ದ ಸೇತುವೆಯ ಪಕ್ಕದಲ್ಲೇ ಹೊಸ ಸೇತುವೆ ನಿರ್ಮಾಣಗೊಂಡಿದೆ. ಹಳೆಯ ಸೇತುವೆ ಕುಸಿದು ಬಿದ್ದ ಬಳಿಕ ಮರುನಿರ್ಮಾಣಕ್ಕೆ ಪರ್ಯಾಯ ಜಾಗ ಲಭ್ಯತೆ ಇಲ್ಲ. ಬೇರೆ ಜಾಗ ಹುಡುಕಿದರೂ ಹೆದ್ದಾರಿಯ ನಕ್ಷೆಯೇ ಬದಲಾಗುವ ಸಾಧ್ಯತೆ ಇದೆ. ಹೀಗಾಗಿ ಹಳೆಯ ಸತುವೆ ಇದ್ದ ಜಾಗದಲ್ಲಿ ಹೊಸ ಸೇತುವೆ ನಿರ್ಮಿಸಲು ಆದ್ಯತೆ ನೀಡಬೇಕಾಗಬಹುದು’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಉನ್ನತ ಮೂಲಗಳು ತಿಳಿಸಿವೆ.
ಆ.7 ರಂದು ತಡರಾತ್ರಿ 41 ವರ್ಷಗಳಷ್ಟು ಹಳೆಯದಾದ ಸೇತುವೆ ಕುಸಿದು ಬಿದ್ದಿತ್ತು. ಸೇತುವೆ ಕುಸಿದು ಬಿದ್ದ ಒಂದು ತಿಂಗಳ ಬಳಿಕ (ಸೆ.9) ಸೇತುವೆಯ ಅವಶೇಷ ತೆರವುಗೊಳಿಸುವ ಕಾರ್ಯ ಆರಂಭಗೊಂಡಿತ್ತು. ತಿಂಗಳಿಗೂ ಹೆಚ್ಚು ಕಾಲ ನಿಧಾನಗತಿಯಲ್ಲಿ ಕಾರ್ಯಾಚರಣೆ ನಡೆಸಿದ್ದ ಐ.ಆರ್.ಬಿ ಕಂಪನಿ ನವೆಂಬರ್ ಬಳಿಕ ತೆರವು ಕಾರ್ಯಕ್ಕೆ ವೇಗ ನೀಡಿದೆ.
ಸುಮಾರು ಎರಡೂವರೆ ತಿಂಗಳಿನಿಂದ ಅವಶೇಷಗಳನ್ನು ತೆರವುಗೊಳಿಸುವ ಕೆಲಸ ನಡೆದಿದೆ. ನದಿಯ ನೀರಿನ ಏರಿಳಿತದ ಕಾರಣದಿಂದ ದೊಡ್ಡ ಬಾರ್ಜ್ ತರಿಸಲು ವಿಳಂಬ ಉಂಟಾಗಿತ್ತು. ಸದ್ಯ
ನಾಲ್ಕು ಬಾರ್ಜ್, ಎರಡು ಕ್ರೇನ್‍ಗಳನ್ನು ಬಳಸಿ ಅವಶೇಷ ತೆರವು ಕೆಲಸ ನಡೆಯುತ್ತಿದೆ.
ಐದು ಸಾವಿರ ಟನ್ ಭಾರ ಎತ್ತುವ ಸಾಮರ್ಥ್ಯದ ಕ್ರೇನ್ ತರಿಸಲಾಗಿದ್ದು, ಅದನ್ನು ನದಿಗೆ ಇಳಿಸಿ ಕಾರ್ಯಾಚರಣೆ ನಡೆಸಲು ಜಾಗದ ಅಡಚಣೆ ಉಂಟಾಗಿದೆ. ಈವರೆಗೆ ಶೇ.30 ರಷ್ಟು ತೆರವು ಕೆಲಸ ನಡೆದಿದೆ ಎಂದು ಐ.ಆರ್.ಬಿ ಕಂಪನಿಯ ಮೂಲಗಳು ಮಾಹಿತಿ ನೀಡಿದೆ.
ಆದರೇ ಈವರೆಗೆ ಹೊಸ ಸೇತುವೆ ನಿರ್ಮಾಣ ಯೋಜನೆಯ ಕುರಿತು ಈವರೆಗೆ ಯಾವುದೇ ನಿರ್ಧಾರ ಆಗಿಲ್ಲ ಎಂದು ಐ.ಆರ್.ಬಿ ಕಂಪನಿ ಮೂಲಗಳು ತಿಳಿಸಿದೆ.
ಹೆದ್ದಾರಿ ಪ್ರಾಧಿಕಾರ ಹೇಳೋದು ಏನು?
ರಾಷ್ಟ್ರೀಯ ಹೆದ್ದಾರಿ–66ರ ನಿರ್ಮಾಣ ಯೋಜನೆಗೆ ಐ.ಆರ್.ಬಿ ಜತೆ ಒಪ್ಪಂದ ಆಗಿರುವ ಕಾರಣಕ್ಕೆ ಸೇತುವೆಯನ್ನು ಮರುನಿರ್ಮಿಸಲು ಅವರಿಗೆ ಹೊಣೆ ನೀಡಬೇಕಾಗುತ್ತದೆ. ಈ ಬಗ್ಗೆ ಕಂಪನಿಗೆ
ಮೌಖಿಕವಾಗಿ ತಿಳಿಸಲಾಗಿದೆ.
ಕಂಪನಿಯೊಂದಿಗೆ ನಿರಂತರ ಮಾತುಕತೆ ನಡೆಯುತ್ತಿದೆ. ಹೊಸ ಸೇತುವೆ ನಿರ್ಮಾಣದ ಸಂಬಂಧ ತಜ್ಞರು ಕೆಲ ನೀಲನಕ್ಷೆ ಸಿದ್ಧಪಡಿಸಿದ್ದು, ಅದಕ್ಕೆ ಪ್ರಾಧಿಕಾರದ ಉನ್ನತ ಮಟ್ಟದಿಂದ ಅನುಮೋದನೆ ಈವರೆಗೆ ಸಿಕ್ಕಿಲ್ಲ.
ಕಾಳಿನದಿಗೆ ಹೊಸ ಸೇತುವೆ ನಿರ್ಮಿಸುವ ಕುರಿತು ಪ್ರಾಧಿಕಾರ ಮತ್ತು ಐ.ಆರ್.ಬಿ ಕಂಪನಿ ಜೊತೆ ಮಾತುಕತೆ ನಡೆಯುತ್ತಿದೆ. ಸೇತುವೆಗೆ ವಿಶೇಷ ಅನುದಾನ ಮಂಜೂರಾತಿ ಬಗ್ಗೆ ಇನ್ನೂ ನಿರ್ಣಯವಾಗಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಕೆ.ಶಿವಕುಮಾರ್ ತಿಳಿಸಿದ್ದಾರೆ.
ಶರಾವತಿ ನದಿಗೆ ಹೊಸ ಸೇತುವೆ ನಿರ್ಮಾಣ.
ರಾಷ್ಟ್ರೀಯ ಹೆದ್ದಾರಿ -66 ರ ಉಡುಪಿ ,ಮಂಗಳೂರು ಭಾಗಕ್ಕೆ ತೆರಳುವ ಚತುಷ್ಪತ ಹೆದ್ದಾರಿಯಲ್ಲಿ ಬರುವ ಶರಾವತಿ ನದಿಗೆ ಹೊಸ ಸೇತುವೆ ನಿರ್ಮಿಸುವ ಬಗ್ಗೆಯೂ ಪ್ರಸ್ತಾವ ಸಲ್ಲಿಕೆಯಾಗಿದೆ. ಕುಮಟಾ ತಾಲ್ಲೂಕಿನ ಹೊನ್ಮಾವರ, ಮಾನೀರ ಬಳಿ ಸೇತುವೆ ನಿರ್ಮಾಣಕ್ಕೆ ₹11 ಕೋಟಿ ಯೋಜನೆಗೆ ಅನುಮೋದನೆ ಸಿಕ್ಕಿದೆ.