For the best experience, open
https://m.kannadavani.news
on your mobile browser.
Advertisement

Uttara kannada:ಸಂತೆ ,ಪಾರ್ಕ ಗೆ ತೆರಳಿದ ಜಿಲ್ಲಾಧಿಕಾರಿ ಜನಸಾಮಾನ್ಯರಂತೆ ಮಾಡಿದ ಕಾರ್ಯ ವೇನು ಗೊತ್ತಾ?

Karwar news 24 November 2024 :- ಜಿಲ್ಲಾಧಿಕಾರಿ ಎಂದಾಕ್ಷಣ ಕೈಗೆ ಕಾಲಿಗೆ ಸೇವೆ ಮಾಡುವ ಸಿಬ್ಬಂದಿ ,ಜನ ಇರೋದು ಮಾಮೂಲು. ಅಧಿಕಾರ ದರ್ಪ ,ತಾನು ಮಾತನಾಡಿದ್ದೇ ಶಾಸನ ಎಂಬುವ ಹಲವು ಅಧಿಕಾರಿಗಳು ಇದ್ದಾರೆ.
11:23 PM Nov 24, 2024 IST | ಶುಭಸಾಗರ್
uttara kannada ಸಂತೆ  ಪಾರ್ಕ ಗೆ ತೆರಳಿದ ಜಿಲ್ಲಾಧಿಕಾರಿ ಜನಸಾಮಾನ್ಯರಂತೆ ಮಾಡಿದ ಕಾರ್ಯ ವೇನು ಗೊತ್ತಾ

Karwar news 24 November 2024 :- ಜಿಲ್ಲಾಧಿಕಾರಿ ಎಂದಾಕ್ಷಣ ಕೈಗೆ ಕಾಲಿಗೆ ಸೇವೆ ಮಾಡುವ ಸಿಬ್ಬಂದಿ ,ಜನ ಇರೋದು ಮಾಮೂಲು. ಅಧಿಕಾರ ದರ್ಪ ,ತಾನು ಮಾತನಾಡಿದ್ದೇ ಶಾಸನ ಎಂಬುವ ಹಲವು ಅಧಿಕಾರಿಗಳು(officers) ಇದ್ದಾರೆ.

Advertisement

ಇದನ್ನೂ ಓದಿ:-Karnatakaರಾಜ್ಯದಲ್ಲಿ 25 ಲಕ್ಷಕ್ಕೂ ಅಧಿಕ APL ಕಾರ್ಡ ಗಳು ರದ್ದು -ಇನ್ನುಮುಂದೆ ಸರ್ಕಾರಿ ಯೋಜನೆಗಳಿಂದಲೂ ವಂಚಿತ !

ಆದ್ರೆ ಉತ್ತರ ಕನ್ನಡ (Uttara Kannda )ಜಿಲ್ಲೆಯ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ (Lakshmi priya )ರವರು ಮಾತ್ರ ಹಾಗಲ್ಲ. ವಾರದಲ್ಲಿ ಒಮ್ಮೆ ನಡೆಯುವ ಕಾರವಾರದ ಭಾನುವಾರದ ಸಂತೆಯಲ್ಲಿ ಜನಸಾಮಾನ್ಯರಂತೆ ಪತಿಯೊಂದಿಗೆ ತೆರಳಿ ಸಂತೆ ಮಾಡುತ್ತಾರೆ. ಗಾಂಧಿ ಪಾರ್ಕ ನಲ್ಲಿ ಪ್ರತಿ ಭಾನುವಾರ ವಿದ್ಯಾರ್ಥಿ ,ಜನರೊಂದಿಗೆ ಸಾಮಾನ್ಯರಂತೆ ‌ ಕುಳಿತು ಪುಸ್ತಕ ಓದುವ ಮೂಲಕ ಇತರ ಜನರಿಗೂ ಓದುವ ಹವ್ಯಾಸ ಬೆಳೆಯುವಂತೆ ಮಾದರಿಯಾಗಿದ್ದಾರೆ.

ಸಂತೆ ಮಾಡುತ್ತಿರುವ ಜಿಲ್ಲಾಧಿಕಾರಿ

ಅದಕ್ಕಾಗಿಯೇ ಗಾಂಧಿ ಪಾರ್ಕ್ ನಲ್ಲಿ ಪ್ರತಿ ಭಾನುವಾರ
"ಕಾರವಾರ ರೀಡ್ಸ್" ಎನ್ನುವ ಓದುಗರ ವೇದಿಕೆ ಸೃಷ್ಟಿಸಿದ್ದು ಜನರಲ್ಲಿ ಓದುವ ಹವ್ಯಾಸ ಬೆಳಸಬೇಕು ಎನ್ನುವ ತುಡಿತದಲ್ಲಿ ಪ್ರಯತ್ನಿಸುತಿದ್ದಾರೆ.

Uttara kannda DC lakhmipriya
ಕಾರವಾರದ ಗಾಂಧಿ ಪಾರ್ಕ ನಲ್ಲಿ ಜಿಲ್ಲಾಧಿಕಾರಿ ಪತಿಯೊಂದಿಗೆ ಓದುತ್ತಿರುವುದು

ಇನ್ಬು ಆಗಾಗ ಬಿಡುವು ಸಿಕ್ಕಾಗ ಶಾಲೆ,ಅಂಗನವಾಡಿಗಳಿಗೆ ಭೇಟಿ ನೀಡಿ ಮಕ್ಕಳೊಂದಿಗೆ ಕಳೆಯುತ್ತಾರೆ. ಹೀಗೆ ಸಿಂಪಲ್ಲಾಗಿ ಇರುವ ಇವರು ಕರ್ತವ್ಯ ಸಮಯ ಹೊರತುಪಡಿಸಿ ಸರ್ಕಾರಿ ವಾಹನ ಬಳಸದೇ ತಮ್ಮ ವಾಹನ ಬಳಸುತ್ತಾರೆ.

ಇಂದಿನ ದಿನಗಳಲ್ಲಿ ಆಧಿಕಾರ ಸಿಕ್ಕರೆ ಏನುಬೇಕಾದ್ರು ಮಾಡಬಹುದು ಎಂಬ ಅಹಂಕಾರದಲ್ಲಿರುವ ಅಧಿಕಾರಿಗಳ ಮಧ್ಯೆ ಇಂತಹ ಸರಳ ಅಧಿಕಾರಿ ನಿಜವಾಗಿಯೂ ಮಾದರಿ ಎನ್ನಬಹುದು.

ಈ ಲೇಖನ ಬರೆಯಲು ಕಾರಣ ಇಷ್ಟೇ ಒಬ್ಬ ಜಿಲ್ಲಾಧಿಕಾರಿಯಾಗಿ ಸರಳತೆಯಿಂದ ಇರುವ ಇವರ ಬಗ್ಗೆ ಗೌರವ ಮೂಡುತ್ತದೆ. ಆದರೇ ಇವರ ಕೆಳಗೆ ಕರ್ತವ್ಯ ನಿರ್ವಹಿಸುವ ಎಸಿಗಳು ಜನರನ್ನ ನೋಡುವ ಮತ್ತು ನಡೆಸಿಕೊಳ್ಳುವ ಪರಿ ನಿಜವಾಗಿಯೂ ಬೇಸರ ಎನಿಸುತ್ತದೆ.

ಬಂದ ಜನರ ಸಮಸ್ಯೆ ಆಲಿಸುವುದಿರಲಿ ಸಮಸ್ಯೆ ಆಲಿಸಲೂ ಅವರಿಗೆ ಸಮಯ ಇರುವುದಿಲ್ಲ. ಕೆಲವು ಎಸಿ ಗಳು ( Assistant Commissioner) ಹಣದ ಹಿಂದೆ ಬಿದ್ದು  ಜನರ ರಕ್ತ ಕುಡಿಯುತಿದ್ದಾರೆ. ಇಂತವರ ಮಧ್ಯೆ ಈ ರೀತಿಯ ಅಧಿಕಾರಿ ಸಹ ಇದ್ದಾರೆ ಎಂಬುದು ಖುಷಿ ಕೊಡುತ್ತದೆ.

ಮುಂದೆ Ac ಇಂದ DC ಆಗುವ ಅಧಿಕಾರಿಗಳು ಇಂತವರನ್ನ ನೋಡಿ ಕಲಿಯಲಿ ಎಂಬುದು ನಮ್ಮ ಬಯಕೆ. ಯಾಕೆಂದರೇ ಈಗಲೇ ಜನರನ್ನ ಹಿಂಡಿ ಹಿಪ್ಪೆ ಮಾಡುವ ಕೆಲವು ಅಧಿಕಾರಿಗಳು ಮುಂದೆ ಡಿ.ಸಿ ಆದರೇ ಹೇಗಿರುತ್ತಾರೆ ಎಂದು ನೆನೆದರೇ ಭಯವಾಗುತ್ತದೆ. ಕೊನೆ ಪಕ್ಷ ಇಂತವರನ್ನು ನೋಡಿ ಕಲಿಯಲಿ. ಇನ್ನೊಬ್ಬರಿಗೂ ಮಾದರಿಯಾಗಲಿ ಎಂಬುದೇ ನಮ್ಮ ಆಶಯ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ