Bhatkal ಬಂದ್ ಗೆ ಕರೆ ಕೊಟ್ಟ V.H.P ಕಾರಣ ಇಲ್ಲಿದೆ.
Bhatkal news 12 December 2024:- ಬಾಂಗ್ಲಾದೇಶದಲ್ಲಿ (Bangla)ಹಿಂದುಗಳ ಮೇಲೆ ಹಲ್ಲೆ, ಹತ್ಯೆ ಖಂಡಿಸಿ ವಿಶ್ವ ಹಿಂದೂಪರಿಷತ್ ಮತ್ತು ಹಿಂದೂಜಾಗರಣ ವೇದಿಕೆ ಡಿಸೆಂಬರ್ 12 ರಂದು (bhatkal) ಹಿಂದೂ ವ್ಯಾಪಾರ ವಹಿವಾಟುದಾರರು ಸ್ವಯಂ ಪ್ರೇರಿತವಾಗಿ ಬಂದ್ ಮಾಡುವಂತೆ ಜಂಟಿಯಾಗಿ ಕರೆಕೊಟ್ಟಿದೆ.
ಬಂದ್ ಕರೆ ಕೊಡಲು ಕಾರಣ ಇದು:-
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ 'ಮೀಸಲಾತಿ ವಿರೋಧಿ ಹಿಂಸಾತ್ಮಕ ಹೋರಾಟ' ಅಲ್ಲಿನ ಪ್ರಧಾನಿಯ ಹುದ್ದೆ ಖಾಲಿ ಮಾಡಿಸಿದ ಬಳಿಕವೂ ತಣ್ಣಗಾಗಿಲ್ಲ. ಉದ್ರಿಕ್ತ ಪ್ರತಿಭಟನಾಕಾರರು ಅಲ್ಲಿನ ಅಲ್ಪಸಂಖ್ಯಾತರಾದ ಹಿಂದುಗಳು, ಕ್ರೈಸ್ತರು, ಬೌದ್ಧರ ಮೇಲೆ ಅಟ್ಟಹಾಸ ಮೆರೆಯುತ್ತಿದ್ದಾರೆ.
ಹಿಂದು ದೇವಾಲಯಗಳು,(Hindu temple) ಮನೆಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಈ ಹಿಂದೆ ಇಬ್ಬರು ಹಿಂದುಗಳನ್ನು ಹತ್ಯೆ ಮಾಡಲಾಗಿದೆ.ಹಿಂದು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಪುಂಡ ಹೋರಾಟಗಾರರು ಮಾರಣಾಂತಿಕ ಹಲ್ಲೆ ನಡೆಸುತ್ತಿದ್ದಾರೆ.
ದಾಳಿಕೋರರು ಹಿಂದುಗಳ ಅಂಗಡಿಗಳು, ದೇವಸ್ಥಾನಗಳು ಮತ್ತು ಮನೆಗಳನ್ನು ಲೂಟಿ ಮಾಡುತ್ತಿದ್ದಾರೆ. ಹಿಂದೂ ಮಹಿಳೆಯರ ಮೇಲೆ ಹಲ್ಲೆ ನಡೆಸಿ ಅಪಹರಿಸುತ್ತಿದ್ದಾರೆ. ಶೇಕ್ ಹಸೀನಾ ಅವರ ಸರ್ಕಾರ ಪತನದ ನಂತರವೂ ಹಿಂಸಾಚಾರ ನಿಲ್ಲುತ್ತಿಲ್ಲ. ದಾಳಿಯಲ್ಲಿ ಅನೇಕರು ಗಾಯಗೊಂಡಿದ್ದಾರೆ. ಪರಿಸ್ಥಿತಿ ಗಂಭೀರವಾಗಿದೆ. ಇಲ್ಲಿನ ಹಿಂದೂಗಳ ಮೇಲೆ ನಿರಂತರವಾಗಿ ದಾಳಿ ನಡೆಸಲಾಗುತ್ತಿದೆ. ಇದಲ್ಲದೇ ಹಿಂದೂ ಮಹಿಳೆಯರ ಮೇಲೆ ಕ್ರೌರ್ಯ ಮುಂದುವರೆದಿದೆ ಇದು ನಿರಂತರವಾಗಿ ನಡೆಯುತ್ತಿದೆ.
ಇದನ್ನೂ ಓದಿ:-Bhatkal :ಪುರಸಭಾ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಆತ ಪಡೆದಿದ್ದ ಹಣವೆಷ್ಟು ಗೊತ್ತಾ?
ಈ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ( bhatkal) ಡಿಸೆಂಬರ್ 13 ರಂದು ಬಂದ್ ಗೆ ಕರೆಕೊಡಲಾಗಿದೆ.
ಮಧ್ಯಾಹ್ನದ ನಂತರ ಬಂದ್.
ಇನ್ನು ಡಿಸೆಂಬರ್ 13 ರ ಮಧ್ಯಾಹ್ನದ ನಂತರ ಬಂದ್ ಮಾಡುವಂತೆ VHP ಕೋರಿಕೊಂಡಿದೆ. ಇದೇ ಸಂದರ್ಭದಲ್ಲಿ VHP ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಸಭಾ ಕಾರ್ಯಕ್ರಮ ಹಮ್ಮಿಕೊಂಡಿದೆ.
ಸಭಾ ಕಾರ್ಯಕ್ರಮದಲ್ಲಿ ವಜ್ರದೇಹಿ ಸಂಸ್ಥಾನದ ರಾಜಶೇಖರನಂದ ಸ್ವಾಮೀಜಿ ಉಪಸ್ಥಿತಿ ಇರಲಿದ್ದು ,ಅನೇಕ ಹಿಂದು ಮುಖಂಡರು ಭಾಗಿಯಾಗಲಿದ್ದಾರೆ.