Karavali ನೀವು ನೋಡದ ಕಪ್ಪೆಚಿಪ್ಪುಗಳು ಹೇಗಿವೆ ಗೊತ್ತಾ ? ಒಂದು ಕಪ್ಪೆ ಚಿಪ್ಪಿನ ಲೋಕ ವಿಡಿಯೋ ನೋಡಿ.
Uttara kannda :- ಕರಾವಳಿ ಕರ್ನಾಟಕದಲ್ಲಿ ಮತ್ಸ್ಯಗಳ ಲೋಕವೇ ಇದೆ. ಹಲವು ಮೀನುಗಳನ್ನು (fish) ನೋವು ನೋಡಿದ್ದೀರ ಆದರೇ ಸಮುದ್ರದಲ್ಲಿ (sea)ಚಿತ್ರ ವಿಚಿತ್ರ ಕಪ್ಪೆ ಚಿಪ್ಪುಗಳು ಸಹ ಇವೆ.
ಬಹುತೇಕ ಜನರು ಕೆಲವೇ ಕೆಲವು ಕಪ್ಪೆಚಿಪ್ಪುಗಳನ್ನು ನೋಡಿರುತ್ತೀರ. ಆದರೇ ನಾವಿಂದು ನಿಮಗೆ ವಿವಿಧ ತರದ ಕಪ್ಪೆ ಚಿಪ್ಪಿನ ದೃಶ್ಯಗಳನ್ನ ನಿಮಗಾಗಿ ತಂದಿದ್ದೇವೆ.
ಇದನ್ನೂ ಓದಿ:-Murdeshwar|ಬೀಚ್ ನಲ್ಲಿ ವಾಹನ ಓಡಿಸಿ ಹುಚ್ಚಾಟ ವಾಹನ ಸವಾರನಿಗೆ 184 IMVನಡಿ ದಂಡ!
ಕಪ್ಪೆ ಚಿಪ್ಪುಗಳು ಬೆನ್ನುಮೂಳೆ ಇಲ್ಲದ ಪ್ರಾಣಿಗಳಾಗಿದ್ದು , ಆಹಾರಕ್ಕಾಗಿ ಸಮುದ್ರದ ಉಪ್ಪು, ರಸಾಯನಿಕವನ್ನು ಬಳಸಿಕೊಳ್ಳುತ್ತವೆ.
ತಮ್ಮ ಮೃದುವಾದ ದೇಹ ರಕ್ಷಣೆಗಾಗಿ ಮೇಲ್ಭಾಗದಲ್ಲಿ ಕ್ಯಾಲ್ಸಿಯಂ ಅಂಶದ ಪದರವನ್ನು ಇವು ಹೊಂದಿವೆ.ಇವು ಸತ್ತ ನಂತರ ಇವುಗಳ ಚಿಪ್ಪುಗಳು ಸಮುದ್ರಭಾಗಕ್ಕೆ ಬಂದು ಬೀಳುತ್ತದೆ.
ಕಳೆದ ಕೆಲವು ದಿನದ ಹಿಂದೆ ಮುರುಡೇಶ್ವರ ದಲ್ಲಿ ಮೀನುಗಾರಿಕಾ ಇಲಾಖೆ ಮತ್ಸ್ಯ ಉತ್ಸವ ಕಾರ್ಯಕ್ರಮ ಆಯೋಜಿಸಿತ್ತು. ಈ ಸಂದರ್ಭದಲ್ಲಿ ವಿವಿಧ ರೀತಿಯ ಕಪ್ಪೆ ಚಿಪ್ಪುಗಳ ಪ್ರದರ್ಶನ ಮಾಡಲಾಯಿತು.
ಇವುಗಳ ಬಗ್ಗೆ ಬಂಧಪಟ್ಟವರಿಗೆ ಮಾಹಿತಿ ಇರದ ಕಾರಣ ನಾವು ಕಂಡ ದೃಶ್ಯಗಳನ್ನು ಮಾತ್ರ ಇಲ್ಲಿ ನೀಡಿದ್ದೇವೆ.