ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Uttara kannda: ಕೃಷಿಕರಿಗೆ ಹವಾಮಾನ ಆಧರಿತ ಬೆಳೆ ವಿಮೆ ಪರಿಹಾರ ಮಂಜೂರು-ಸಂಸದ ಕಾಗೇರಿ 

ಕಾರವಾರ: ಹವಾಮಾನ ( weather) ಆಧರಿತ ಬೆಳೆ ವಿಮೆಯಿಂದ (Crop Insurance )ವಂಚಿತಗೊಂಡಿದ್ದ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ರೈತ ಫಲಾನುಭವಿಗಳಿಗೆ ಖುಷಿ ಸುದ್ದಿಯೊಂದನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಿಸಿದ್ದಾರೆ.
10:44 PM Apr 29, 2025 IST | ಶುಭಸಾಗರ್
ಕಾರವಾರ: ಹವಾಮಾನ ( weather) ಆಧರಿತ ಬೆಳೆ ವಿಮೆಯಿಂದ (Crop Insurance )ವಂಚಿತಗೊಂಡಿದ್ದ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ರೈತ ಫಲಾನುಭವಿಗಳಿಗೆ ಖುಷಿ ಸುದ್ದಿಯೊಂದನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಿಸಿದ್ದಾರೆ.
Uttara kannda :ರೈಲ್ವೆ ಬಳಕೆದಾರರಿಗೆ Good News ನೀಡಿದ ಸಂಸದ ಕಾಗೇರಿ! ಏನದು? 

Uttara kannda: ಕೃಷಿಕರಿಗೆ ಹವಾಮಾನ ಆಧರಿತ ಬೆಳೆ ವಿಮೆ ಪರಿಹಾರ ಮಂಜೂರು-ಸಂಸದ ಕಾಗೇರಿ 

Advertisement

ಕಾರವಾರ: ಹವಾಮಾನ ( weather) ಆಧರಿತ ಬೆಳೆ ವಿಮೆಯಿಂದ  (Crop Insurance )ವಂಚಿತಗೊಂಡಿದ್ದ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ರೈತ ಫಲಾನುಭವಿಗಳಿಗೆ ಖುಷಿ ಸುದ್ದಿಯೊಂದನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಿಸಿದ್ದಾರೆ.

ಪ್ರಕೃತಿ ಮೆಡಿಕಲ್ ,ಕಾರವಾರ.

ಜಿಲ್ಲೆಯ ಕೆಲ ಪಂಚಾಯ್ ವ್ಯಾಪ್ತಿಯ ರೈತರಿಗಷ್ಟೇ ಸುಮಾರು 10 ಕೋಟಿ ಅಷ್ಟು ಬೆಳೆ ವಿಮೆ ಬಂದಿದ್ದು, ಉಳಿದ ಬಹುಪಾಲು ಫಲಾನುಭವಿ ರೈತರಿಗೆ ತಾಂತ್ರಿಕ ಕಾರಣ ನೆಪವೊಡ್ಡಿ ವಿಮಾ ಕಂಪನಿ ವಿಮಾ ಪರಿಹಾರ ಮೊತ್ತ ಜಮಾ ಮಾಡಿರಲಿಲ್ಲ. ಕೇಂದ್ರ ಸರಕಾರದ ಬಳಿ ಜಿಲ್ಲೆಯ ರೈತರ ಸಮಸ್ಯೆ ಪ್ರಸ್ತಾಪಿಸಿದ್ದೆನು

2023-24 ರ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯ ಹಣ ನಮ್ಮ ಜಿಲ್ಲೆಯ ರೈತರಿಗೆ ತಲುಪುವಲ್ಲಿ ವಿಳಂಬವಾಗಿದೆ ಎಂಬುದು ಗಮನಕ್ಕೆ ಬಂದಿತ್ತು, ಮೊದಲ ಕಂತಿನಲ್ಲಿ ಕೆಲವೇ ಪಂಚಾಯತಗಳಿಗೆ ಮಾತ್ರ  ವಿಮಾ ಪರಿಹಾರ  ಬಿಡುಗಡೆಯಾಗಿದ್ದು, ವಿಮಾ ಕಂಪನಿಯವರು ಕೇಳಿದ ಕೆಲವು ನಿರ್ದಿಷ್ಟ ಮಾಹಿತಿಗಳನ್ನು ರಾಜ್ಯ ಸರ್ಕಾರವು ಒದಗಿಸದ ಕಾರಣ ಉಳಿದ ಪಂಚಾಯತಗಳಿಗೆ ದೊಡ್ಡ ಪ್ರಮಾಣದಲ್ಲಿ ಬೆಳೆ ವಿಮೆ  ಬಿಡುಗಡೆಯಾಗದೇ  ಈ ಪರಿಸ್ಥಿತಿ ಉಂಟಾಗಿತ್ತು. ಕೆಎಸ್‌ಎಂಡಿಸಿ ವಿಮಾ ಕಂಪನಿಗೆ ಸೂಕ್ತ ಕಾಲದಲ್ಲಿ ನೀಡಬೇಕಾದ ಹವಾಮಾನ ದಾಖಲೆಯ ವರದಿಗಳನ್ನು ನೀಡದೆ ನಿರ್ಲಕ್ಷಿಸಿದ್ದರಿಂದ   ವಿಮಾ ಕಂಪನಿಯವರು ವಿಮಾ ಪರಿಹಾರವನ್ನು ನೀಡಲು ಹಿಂಜರಿಯುತ್ತಿದ್ದರು.

Advertisement

ಇದನ್ನೂ ಓದಿ:-Sirsi: ಉಗ್ರ ಮೌಸೀನ್ ಗೆ 14 ದಿ‌ನ ನ್ಯಾಯಾಂಗ ಬಂಧನ

ಈ ಸಂದರ್ಭದಲ್ಲಿ, ರಾಜ್ಯ ಸರ್ಕಾರ ಮತ್ತು ವಿಮಾ ಕಂಪನಿಯೊಂದಿಗೆ ಚರ್ಚಿಸಿದ ಬಳಿಕ, ಹಾಗೂ ಕೇಂದ್ರ ಸರ್ಕಾರದಲ್ಲಿನ ನನ್ನ ವಿಶೇಷ ಜವಾಬ್ದಾರಿಯಿಂದ ಅವಶ್ಯಕ ಕ್ರಮಗಳನ್ನು  ಕೈಗೊಂಡಿದ್ದರಿಂದ , ಕೇಂದ್ರ ಸರ್ಕಾರವು ಈವರೆಗೆ ಮೂರು ಬಾರಿ ವಿಮಾ ಕಂಪನಿಗೆ ಹಣ ಬಿಡುಗಡೆ ಮಾಡುವಂತೆ ಆದೇಶಿಸಿತ್ತು. ಆದಾಗ್ಯೂ, ವಿಮಾ ಕಂಪನಿಯವರು ಇನ್ನೂ ಕೆಲವು ಮಾಹಿತಿಗಳನ್ನು ರಾಜ್ಯ ಸರ್ಕಾರದಿಂದ ಬಯಸುತ್ತಿದ್ದರು. ಮತ್ತು ಪರಿಹಾರವನ್ನು ನೀಡಲು ಮೀನಾ ಮೇಷ ಎಣಿಸುತ್ತಿದ್ದರು.

ಇದನ್ನೂ ಓದಿ:-Sirsi: ಮತ್ತಿಘಟ್ಟ ರಸ್ತೆ ನಿರ್ಮಾಣಕ್ಕೆ ಪಟ್ಟು ಹಿಡಿದ ಅನಂತಮೂರ್ತಿ- ಸ್ಥಳದಲ್ಲೇ ಕಾರ್ಯಾನುಮೋದನೆ ನೀಡಿದ ಜಿಲ್ಲಾಧಿಕಾರಿ.

 ಹವಾಮಾನ ಬೆಳೆ ವಿಮಾ ಯೋಜನೆಯಡಿ ನಮ್ಮ ಜಿಲ್ಲೆಯಲ್ಲಿರುವ ಮಳೆ ಮಾಪನ ಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಅವುಗಳ ನಿರ್ವಹಣೆಯನ್ನು ನಿರಂತರವಾಗಿ ಮಾಡದಿರುವುದರಿಂದ ಈ ಸಮಸ್ಯೆ ಉಂಟಾಗಿತ್ತು.

ಇದೀಗ, ಕೇಂದ್ರ ಸರ್ಕಾರದ ಸ್ಪಷ್ಟವಾದ  ಸೂಚನೆಯ ಮೇರೆಗೆ ವಿಮಾ ಕಂಪನಿಯು ಬಾಕಿ ಉಳಿದಿರುವ ಹಣವನ್ನು ಬಿಡುಗಡೆ ಮಾಡಲು ಇಂದಿನಿಂದ ಪ್ರಾರಂಭಿಸಿದೆ. ಮುಂದಿನ ಮೂರು-ನಾಲ್ಕು ದಿನಗಳಲ್ಲಿ ಎಲ್ಲಾ ರೈತರ ಖಾತೆಗಳಿಗೆ ವಿಮಾ ಪರಿಹಾರದ ಹಣ ಜಮಾ ಆಗಲಿದೆ ಎಂದು ಉತ್ತರ ಕನ್ನಡ ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಇನ್ನು ಮುಂದಿನ ದಿನಗಳಲ್ಲಿ  ಹವಾಮಾನ ವರದಿಯ ದಾಖಲೆಕರಣದ  ತಪ್ಪುಗಳು ಮರುಕಳಿಸಬಾರದು ಮತ್ತು ವಿಳಂಬವಾಗಬಾರದು ಎಂದಾದರೆ, ರಾಜ್ಯ ಸರ್ಕಾರವು ತಕ್ಷಣವೇ ಜಿಲ್ಲೆಯ ಗ್ರಾಮ ಪಂಚಾಯತಗಳಲ್ಲಿನ ಎಲ್ಲಾ ಮಳೆ ಮಾಪನ ಕೇಂದ್ರಗಳನ್ನು ಸರಿಪಡಿಸಬೇಕು ಮತ್ತು ಅವುಗಳ ಸರಿಯಾದ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಬೇಕು. ಈ ನಿರ್ವಹಣೆಯ ಜವಾಬ್ದಾರಿಯನ್ನು ಸಂಬಂಧಪಟ್ಟ ಅಧಿಕಾರಿಗಳು ವಹಿಸಬೇಕೆಂದು ನಾನು ಆಗ್ರಹಿಸುತ್ತೇನೆ.

ರೈತರು( farmer )ಇನ್ನೊಂದು ವಾರದೊಳಗೆ ಪೂರ್ಣ ಪ್ರಮಾಣದ ವಿಮಾ ಪರಿಹಾರವನ್ನು ಪಡೆಯಲಿದ್ದಾರೆ. ಹಣ ಜಮಾ ಮಾಡುವ ಪ್ರಕ್ರಿಯೆ ಇಂದಿನಿಂದಲೇ ಪ್ರಾರಂಭವಾಗಿದೆ. ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆ ರೈತರ ಹಿತ ಕಾಪಾಡಲು ನೆರವಾಗುತ್ತಿದೆ ಎಂದು ಅವರು ಹೇಳಿದರು.

 

Advertisement
Tags :
Crop insuranceMp Vishweshwar Hegde KageriUttara kanndaWeatherಕೃಷಿಬೆಳೆ ವಿಮೆ
Advertisement
Next Article
Advertisement