For the best experience, open
https://m.kannadavani.news
on your mobile browser.
Advertisement

Uttara kannda:ಯಲ್ಲಾಪುರದಲ್ಲಿ ಆನೆ ದಾಳಿ  ಅಡಿಕೆ, ಬಾಳೆ ಧ್ವಂಸ!

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ(uttara kannda) ಯಲ್ಲಾಪುರ (yallapur) ತಾಲ್ಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೇಲಂಗಾರ ಸಮೀಪದ ದರ್ಬೆಜಡ್ಡಿ ಅರಣ್ಯ ಪ್ರದೇಶದಲ್ಲಿ (Forest) ರಾತ್ರಿ ವೇಳೆ ಆನೆಗಳು ತೋಟಕ್ಕೆ ನುಗ್ಗಿ ದಾಳಿ ಮಾಡುತಿದ್ದು ಸುಮಾರಿಗೆ ಮೂರು ಕಾಡಾನೆಗಳು ಹೊಲದಲ್ಲಿ ಕಾಣಿಸಿಕೊಂಡಿದ್ದು ಗ್ರಾಮಸ್ಥರನ್ನ ಆತಂಕಕ್ಕೆ ಈಡುಮಾಡಿದೆ.
10:38 PM Mar 24, 2025 IST | ಶುಭಸಾಗರ್
uttara kannda ಯಲ್ಲಾಪುರದಲ್ಲಿ ಆನೆ ದಾಳಿ  ಅಡಿಕೆ  ಬಾಳೆ ಧ್ವಂಸ

Yallapur:ಯಲ್ಲಾಪುರದಲ್ಲಿ ಆನೆ ದಾಳಿ  ಅಡಿಕೆ, ಬಾಳೆ ಧ್ವಂಸ

Advertisement

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ(uttara kannda) ಯಲ್ಲಾಪುರ (yallapur) ತಾಲ್ಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೇಲಂಗಾರ ಸಮೀಪದ ದರ್ಬೆಜಡ್ಡಿ ಅರಣ್ಯ ಪ್ರದೇಶದಲ್ಲಿ (Forest) ರಾತ್ರಿ ವೇಳೆ ಆನೆಗಳು ತೋಟಕ್ಕೆ ನುಗ್ಗಿ ದಾಳಿ ಮಾಡುತಿದ್ದು  ಸುಮಾರಿಗೆ ಮೂರು ಕಾಡಾನೆಗಳು ಹೊಲದಲ್ಲಿ ಕಾಣಿಸಿಕೊಂಡಿದ್ದು ಗ್ರಾಮಸ್ಥರನ್ನ ಆತಂಕಕ್ಕೆ ಈಡುಮಾಡಿದೆ.

ಪ್ರಕೃತಿ ಮೆಡಿಕಲ್ ,ಕಾರವಾರ.

ಆನೆಗಳು (elephant )ದರ್ಬೆಜಡ್ಡಿಯ ಗಣೇಶ ಗಾಂಡ್ಕರ ಅವರ ತೋಟಕ್ಕೂ ನುಗ್ಗಿದ್ದು ಅಡಿಕೆ, ಬಾಳೆ ಗಿಡಗಳನ್ನು ದ್ವಂಸಗೊಳಿಸಿವೆ.

ಇದನ್ನೂ ಓದಿ:-Yallapura : ಕೋಟಿ ವಂಚನೆ ಮಾಡಿ ದುಬೈಗೆ ಪರಾರಿಯಾಗಿದ್ದ ಮಾಜಿ PDO ಬಂಧನ

ತಾಲ್ಲೂಕಿನ ಕಿರವತ್ತಿ ಮತ್ತು ಮದನೂರು ಗ್ರಾಮ ಪಂಚಾಯಿತಿಯ ಸುತ್ತಮುತ್ತಲ ಪ್ರದೇಶದಲ್ಲಿ ಆನೆದಾಳಿ

ನಡೆಯುತಿದ್ದು ಮುಂಡವಾಡ, ಬೊಂಬಡೇಕೊಪ್ಪ, ತೆಂಗಿನಗೇರಿ, ಜೋಗಿಕೊಪ್ಪ ಮುಂತಾದ ಪ್ರದೇಶದಲ್ಲಿ ಪ್ರತಿವರ್ಷ ಆನೆದಾಳಿ ನಡೆಯುತ್ತದೆ. ಡೌಗಿನಾಳ, ತಾಟವಾಳ, ಲಾಲಗುಳಿ ಪ್ರದೇಶದಲ್ಲಿ ಆನೆಗಳು ಆಗಾಗ ಕಾಣಿಸಿಕೊಳ್ಳುತ್ತವೆ. ವಡೇಹೊಕ್ಕಳಿ, ಸಾತೊಡ್ಡಿ ಪಾಲ್ಸ್, ಕುಂಬ್ರಾಳ ಅರಣ್ಯ, ಕಣ್ಣಿಗೇರಿ, ಚಿಪ್ಪಿನಗದ್ದೆ, ಗುಡ್ಡಹೊಂಡ ಪ್ರದೇಶದಲ್ಲಿಯೂ ಆನಗಳು ಆಗಾಗ ತಮ್ಮ ಇರುವಿಕೆಯನ್ನು ಪ್ರದರ್ಶಿಸುತ್ತವೆ. ಆದರೆ ಇದೇ ಮೊದಲಬಾರಿಗೆ  ವಜ್ರಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ಆನೆ ದಾಳಿ ಮಾಡುತ್ತಿವೆ.

2019ರಲ್ಲಿ ಮಾನಿಮೂಲೆ, ಶೆಳೆಮನೆ, ಮೂಲೆಮನೆ ಭಾಗದಲ್ಲಿ ಐದು ಆನೆಗಳು ಬೀಡುಬಿಟ್ಟು ತೋಟ, ಗದ್ದೆಗಳಿಗೆ ನುಗ್ಗಿ ಫಸಲನ್ನು ಹಾಳುಮಾಡಿದ್ದವು.

ಸಂಗ್ರಹಿಸಿಟ್ಟ  ಭತ್ತದ ಪೈರಿನ ಬಣವೆಯನ್ನು ಕೆಡವಿ ತಮ್ಮ ದೈತ್ಯ ಕಾಲಿನಿಂದ ಹೊಸಕಿ ಹಾಕಿದ್ದವು. ಕೊಡಸಳ್ಳಿ ಅಣೆಕಟ್ಟು ಮಾರ್ಗವಾಗಿ ಬಾಗಿನಕಟ್ಟಾ ಗುಡ್ಡ ಹತ್ತಿ ಬಂದ ಈ ಆನೆಗಳು ವಾರಗಳ ಕಾಲ ಹಗಲಿನಲ್ಲಿ ಅರಣ್ಯದಲ್ಲಿಯೇ ಬೀಡುಬಿಟ್ಟು ರಾತ್ರಿವೇಳೆ ತೋಟಗಳಿಗೆ ನುಗ್ಗಿ ಸಾಕಷ್ಟು ಹಾನಿಮಾಡಿದ್ದವು. ಆ ನಂತರ ಈ ಭಾಗದಲ್ಲಿ ಆನೆಗಳ ಹಾವಳಿ ಇರಲಿಲ್ಲ. ಈಗ ಮತ್ತೆ ಆನೆಗಳು ದಾಂಗುಡಿ ಇಟ್ಟಿರುವುದು ರೈತರ  ಚಿಂತೆಗೆ ಕಾರಣವಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ