For the best experience, open
https://m.kannadavani.news
on your mobile browser.
Advertisement

Yallapura |ಜನಪ್ರತಿನಿಧಿಗಳ ನಿರ್ಲಕ್ಷ ಮಕ್ಕಳಿಗಾಗಿ ಮಣ್ಣು ಹೊತ್ತ ಶಿಕ್ಷಕಿ.

ಯಲ್ಲಾಪುರ:- ಶಾಲೆಗೆ (school) ತೆರಳಲು ಪ್ರತಿ ದಿನ ಮಕ್ಕಳು ಪರದಾಡಬೇಕು.ಹೊಂಡ ಬಿದ್ದು ಹುಗಿಯುವ ರಸ್ತೆಯಲ್ಲಿ ಶಾಲೆಗೆ ಬರುವ ಮಕ್ಕಳ ಸಮಸ್ಯೆ ಯನ್ನು ಅಧಿಕಾರಿಗಳು ,ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪರಿಹರಿಸದೇ ಅಸಡ್ಡೆ ಮಾಡಿದ್ದರಿಂದ ಬೇಸತ್ತ ಸರ್ಕಾರಿ ಶಾಲೆಯೊಂದರ ಶಿಕ್ಷಕಿ ಮಕ್ಕಳಿಗಾಗಿ ಹದಗೆಟ್ಟ ಶಾಲೆಗೆ ಬರುವ ರಸ್ತೆಯನ್ನು ತಾನೇ ಶ್ರಮಧಾನ ಮಾಡುವ ಮೂಲಕ ಸರಿಪಡಿಸಿ ಮಾದರಿಯಾದ ಘಟನೆ ಯಲ್ಲಾಪುರದಲ್ಲಿ ನಡೆದಿದೆ.
12:52 PM Oct 08, 2024 IST | ಶುಭಸಾಗರ್
yallapura  ಜನಪ್ರತಿನಿಧಿಗಳ ನಿರ್ಲಕ್ಷ ಮಕ್ಕಳಿಗಾಗಿ ಮಣ್ಣು ಹೊತ್ತ ಶಿಕ್ಷಕಿ

ಯಲ್ಲಾಪುರ:- ಶಾಲೆಗೆ (school) ತೆರಳಲು ಪ್ರತಿ ದಿನ ಮಕ್ಕಳು ಪರದಾಡಬೇಕು.ಹೊಂಡ ಬಿದ್ದು ಹುಗಿಯುವ ರಸ್ತೆಯಲ್ಲಿ ಶಾಲೆಗೆ ಬರುವ ಮಕ್ಕಳ ಸಮಸ್ಯೆ ಯನ್ನು ಅಧಿಕಾರಿಗಳು ,ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪರಿಹರಿಸದೇ ಅಸಡ್ಡೆ ಮಾಡಿದ್ದರಿಂದ ಬೇಸತ್ತ ಸರ್ಕಾರಿ ಶಾಲೆಯೊಂದರ ಶಿಕ್ಷಕಿ ಮಕ್ಕಳಿಗಾಗಿ ಹದಗೆಟ್ಟ ಶಾಲೆಗೆ ಬರುವ ರಸ್ತೆಯನ್ನು ತಾನೇ ಶ್ರಮಧಾನ ಮಾಡುವ ಮೂಲಕ ಸರಿಪಡಿಸಿ ಮಾದರಿಯಾದ ಘಟನೆ ಯಲ್ಲಾಪುರದಲ್ಲಿ ನಡೆದಿದೆ.

Advertisement

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ನಂದೊಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಲೇಕಣಿ ಶಾಲೆಗೆ ಬರುವ ರಸ್ತೆ ಹದಗಟ್ಟಿದೆ. ಈ ಸರ್ಕಾರಿ ಶಾಲೆಯಲ್ಲಿ ಕೇವಲ ಐದು ಜನ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತಿದ್ದಾರೆ.

ಇವರು ಪ್ರತಿ ದಿನ ಶಾಲೆಗೆ ಬರಬೇಕು ಎಂದರೇ ಗುಂಡಿ ಬಿದ್ದು ನೀರುತುಂಬಿ ಕೆಸರಾದ ರಸ್ತೆಯಲ್ಲಿ ಬರಬೇಕಿದೆ. ಕೆಲವೊಮ್ಮೆ ಈ ರಸ್ತೆಯಲ್ಲಿ ಮಕ್ಕಳ ಕಾಲುಗಳು ಸಿಲುಕಿ ತೊಂದರೆಯಾದ ಘಟನೆ ಸಹ ಜರುಗಿದೆ. ಶಾಲೆಯ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ಸೇತುವೆ ಎರಡೂ ಕಡೆಗಳಲ್ಲಿ ಮಳೆಯಿಂದಾಗಿ ರಸ್ತೆ ಹದಗೆಟ್ಟಿತ್ತು.

ರಸ್ತೆಯಲ್ಲಿ ತುಂಬಿದ ರಾಡಿ ಮಣ್ಣಿನಿಂದಾಗಿ ಓಡಾಡಲು ತೀರಾ ಕಷ್ಟ ಎನ್ನುವಂತಾಗತೊಡಗಿತು. ಈ ಬಗ್ಗೆ ಸ್ಥಳೀಯರಲ್ಲಿ, ಪಾಲಕರಲ್ಲೂ ಶಿಕ್ಷಕಿ ಹೇಳಿಕೊಂಡಿದ್ದರು.

ಇದನ್ನೂ ಓದಿ:-Yallapura |ಜನಪ್ರತಿನಿಧಿಗಳ ನಿರ್ಲಕ್ಷ ಮಕ್ಕಳಿಗಾಗಿ ಮಣ್ಣು ಹೊತ್ತ ಶಿಕ್ಷಕಿ.

ಕೊನೆಗೆ ಮಕ್ಕಳು ನಡೆದು ಓಡಾಡುವುದೂ ಕಷ್ಟ ಎನಿಸುವಂತೆ ರಸ್ತೆ ಇನ್ನಷ್ಟು ಹಾಳಾದಾಗ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಕೆಲಸ ಆಗದಿದ್ದಾಗ ಸ್ವತಃ ಶಿಕ್ಷಕಿ ಉಷಾ ನಾಯಕ್ ರಸ್ತೆ ದುರಸ್ತಿಗೆ ನಿಂತಿದ್ದು ,ಅಕ್ಕಪಕ್ಕದ ಕಲ್ಲುಗಳನ್ನು ತಂದು ರಾಡಿಯಾಗಿದ್ದ ರಸ್ತೆಯಲ್ಲಿ ಹಾಕಿ, ಶ್ರಮದಾನದ ಮೂಲಕ ತಾತ್ಕಾಲಿಕ ದುರಸ್ತಿ ಮಾಡಿದ್ದಾರೆ.

Uttra kannda yallapura

ಇದೀಗ ತಕ್ಕಮಟ್ಟಿಗೆ ಮಕ್ಕಳ ಓಡಾಟಕ್ಕೆ, ವಾಹನಗಳ ಓಡಾಟಕ್ಕೆ ಅನುಕೂಲವಾಗಿದೆ. ಶಿಕ್ಷಕರಿಗೆ ಜನಗಣತಿ, ಚುನಾವಣಾ ಕಾರ್ಯ ಸೇರಿದಂತೆ ಅವರ ಕರ್ತವ್ಯದ ಹೊರತಾಗಿ ಬೇರೆ ಬೇರೆ ಜವಾಬ್ದಾರಿಯನ್ನು ನೀಡಲಾಗುತ್ತದೆ. ಅದನ್ನೆಲ್ಲ ಸಮರ್ಥವಾಗಿಯೇ ನಿಭಾಯಿಸುತ್ತಾರೆ. ಇದೀಗ ಶಾಲೆಯ ರಸ್ತೆಯನ್ನೂ ಅವರೇ ಸರಿಪಡಿಸಿಕೊಳ್ಳಬೇಕು ಎಂದಾದರೆ, ಜನಪ್ರತಿನಿಧಿಗಳು ಇರಿವುದಾದರೂ ಏಕೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.

ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು, ಶಾಲೆಯ ರಸ್ತೆಯನ್ನು ಸಮರ್ಪಕವಾಗಿ ದುರಸ್ತಿ ಮಾಡುವತ್ತ ಗಮನ ಹರಿಸಬೇಕಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ