ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Yana :ಜೇನು ದಾಳಿ ಪ್ರವಾಸಿಗರು ಹೈರಾಣ! 40 ಕ್ಕೂ ಹೆಚ್ಚು ಜನರಿಗೆ ಕಡಿದ ಜೇನು

Uttara kannda:- ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಪ್ರಸಿದ್ಧ ಯಾಣ ಪ್ರವಾಸಿ ಸ್ಥಳದಲ್ಲಿ ಜೇನು ದಾಳಿಯಿಂದ ಪ್ರವಾಸಿಗರು ಬೆಚ್ಚಿ ಬೀಳುವಂತೆ ಮಾಡಿದೆ
01:01 PM Feb 19, 2025 IST | ಶುಭಸಾಗರ್
Yana :ಜೇನು ದಾಳಿ ಪ್ರವಾಸಿಗರು ಹೈರಾಣ!

Yana :ಜೇನು ದಾಳಿ ಪ್ರವಾಸಿಗರು ಹೈರಾಣ!

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

Uttara kannda:- ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಪ್ರಸಿದ್ಧ ಯಾಣ ಪ್ರವಾಸಿ (Yana)ಸ್ಥಳದಲ್ಲಿ ಜೇನು ದಾಳಿಯಿಂದ ಪ್ರವಾಸಿಗರು ಬೆಚ್ಚಿ ಬೀಳುವಂತೆ ಮಾಡಿದೆ.

ಕಳೆದ ನಾಲ್ಕು ದಿನದಿಂದ 40 ಕ್ಕೂ ಹೆಚ್ಚು ಪ್ರವಾಸಿಗರಿಗೆ ಜೇನು ದಾಳಿ ನಡೆಸಿದೆ. ಕೆಲವರು ಕುಮಟಾದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೆರಳಿದರೇ ಇನ್ನು ಕೆಲವರು ಇತರೆಡೆ ಚಿಕಿತ್ಸೆ ಪಡೆದಿದ್ದಾರೆ.

Yana: 29 ವರ್ಷದ ಬಳಿಕ ಯಾಣಕ್ಕೆ ಭೇಟಿ ನೀಡಿ ಶಿವಣ್ಣ ಭಾವುಕ! ಏನಂದ್ರು ಗೊತ್ತಾ

Advertisement

ಯಾಣ ಭಾಗಕ್ಕೆ ಹೆಚ್ಚು ಪ್ರವಾಸಿಗರು ಆಗಮಿಸುತಿದ್ದಾರೆ. ಕೆಲವು ಪ್ರವಾಸಿಗರು ಯಾಣದ ಕ್ಲೇವ್ ಬಳಿ ಟ್ರಕಿಂಗ್ ಸಹ ಹೋಗುತ್ತಾರೆ.

Astrology advertisement

ಯಾಣದ ದಟ್ಟವಾದ ಕಲ್ಲುಬಂಡೆ ಬಳಿ ಜೇನುಗಳು ಗೂಡು ಕಟ್ಟಿದ್ದು ಕರಾವಳಿ ಭಾಗದಲ್ಲಿ ತಾಪಮಾನ ಹೆಚ್ಚಾಗುತ್ತಿದೆ. ಈ ಕಾರಣದಿಂದ ಜೇನುಗಳು ಮಧ್ಯಾಹ್ನದ ವೇಳೆ ಗೂಡಿನಿಂದ ಹೊರಬಂದು ದಾಳಿ ನಡೆಸುತ್ತಿವೆ.

ಸದ್ಯ ಜೇನು ಕಡಿತವಾದ ಪ್ರವಾಸಿಗರು ಕುಮಟದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಗಂಭೀರ ಸ್ವರೂಪದ ಗಾಯಗಳಾಗಿಲ್ಲ.

ಇನ್ನು ಯಾಣಕ್ಕೆ ಬರುವ ಪ್ರವಾಸಿಗರು ಮುಂಜಾನೆಯಿಂದ 12 ಗಂಟೆ ಒಳಗೆ ಹಾಗೂ ಸಂಜೆ ವೇಳೆ ಭೇಟಿ ನೀಡಲು ಅರಣ್ಯ ಇಲಾಖೆ ಸಲಹೆ ನೀಡಿದೆ.

Advertisement
Tags :
Honey Bee attackKarnatakaKumtaTourist placeUttara kanndaYana
Advertisement
Next Article
Advertisement