For the best experience, open
https://m.kannadavani.news
on your mobile browser.
Advertisement

Dandeli : ಎಲ್ಲಿ ಏನು ಸುದ್ದಿ ? ವಿವರ ನೋಡಿ

Dandeli :- ಕುಡಿದ ನಶೆಯಲ್ಲಿ ಯುವಕನೋರ್ವ ನೇಣಿಗೆ ಶರಣಾದ ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿ 14ನೇ ಬ್ಲಾಕಿನ ಭಾಗ್ಯಮಂದಿರದಲ್ಲಿ ನಡೆದಿದೆ. ಭಾಗ್ಯಮಂದಿರದ ನಿವಾಸಿ ಅಜಯ್ ಸಿಂಗ್ ಸುಬೇದಾರ್ (22) ಎಂಬಾತನೇ ನೇಣಿಗೆ ಶರಣಾದ ಯುವಕನಾಗಿದ್ದು, ಮನೆಯಲ್ಲಿ ಯಾರೂ ಇಲ್ಲದಿದ್ದ ಸಮಯದಲ್ಲಿ ನೇಣಿಗೆ ಶರಣಾಗಿದ್ದಾನೆ.
09:45 PM Mar 22, 2025 IST | ಶುಭಸಾಗರ್
dandeli   ಎಲ್ಲಿ ಏನು ಸುದ್ದಿ   ವಿವರ ನೋಡಿ

ಕುಡಿದ ನಡೆಯಲ್ಲಿ ಆತ್ಮಹತ್ಯೆ ಗೆ ಶರಣಾದ ಯುವಕ.

ದಾಂಡೇಲಿ ಶವಾಗಾರ

Dandeli :- ಕುಡಿದ ನಶೆಯಲ್ಲಿ ಯುವಕನೋರ್ವ ನೇಣಿಗೆ ಶರಣಾದ ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿ 14ನೇ ಬ್ಲಾಕಿನ ಭಾಗ್ಯಮಂದಿರದಲ್ಲಿ ನಡೆದಿದೆ.
ಭಾಗ್ಯಮಂದಿರದ ನಿವಾಸಿ ಅಜಯ್ ಸಿಂಗ್ ಸುಬೇದಾರ್ (22) ಎಂಬಾತನೇ ನೇಣಿಗೆ ಶರಣಾದ ಯುವಕನಾಗಿದ್ದು,
ಮನೆಯಲ್ಲಿ ಯಾರೂ ಇಲ್ಲದಿದ್ದ ಸಮಯದಲ್ಲಿ ನೇಣಿಗೆ ಶರಣಾಗಿದ್ದಾನೆ.

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಸ್ಥಳಕ್ಕೆ ದಾಂಡೇಲಿ ನಗರ ಠಾಣೆಯ ಪಿಎಸ್ಐ ಅಮೀನ್ ಅತ್ತಾರ್ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ,
ಪರಿಶೀಲನೆ ನಡೆಸಿದ್ದು ,ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನೆಮಾಡಲಾಗಿದ್ದು ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರಡಿ ದಾಳಿ-ರೈತ ಗಂಭೀರ.

Dandeli :ಕರಡಿ ದಾಳಿಗೆ ಒಳಗಾದ ವ್ಯಕ್ತಿ.

ಗೋಡುಂಬಿ ಬೆಳೆಗಳನ್ನು ತಿನ್ನಲು ಬರುತಿದ್ದ ಮಂಗಗಳನ್ನು ಓಡಿಸಲು ಹೋಗಿದ್ದ ರೈತನ ಮೇಲೆ ಎರಡು ಕರಡಿಗಳು ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಕೇಗದಾಳದಲ್ಲಿ ಇಂದು ನಡೆದಿದ್ದು ಗಂಭೀರ ಗಾಯಗೊಂಡ ಡುಮ್ಮಿಂಗ್ ಜೂಜೆ ಸಿದ್ಧಿ (56) ರವರನ್ನು ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂದು ಬೆಳಗ್ಗೆ ಕೇಗದಾಳದಲ್ಲಿನ ಗೋಡುಂಬಿ ಪ್ಲಾಟ್ ನಲ್ಲಿ ಮಂಗಗಳನ್ನು ಓಡಿಸುತ್ತಿರುವಾಗ ಎರಡು ಕರಡಿ ದಾಳಿ ಮಾಡಿದ್ದು ಜೀವ ಉಳಿಸಿಕೊಳ್ಳಲು ಎರಡು ಕರಡಿಯೊಂದಿಗೆ ಡುಮ್ಮಿಂಗ್ ಜೂಜೆ ಸಿದ್ಧಿ ಕಾದಾಡಿ ಕರಡಿಯಿಂದ ತಪ್ಪಿಸಿಕೊಂಡು ಬಂದಿದ್ದಾರೆ.ಅದೃಷ್ಟವಶಾತ್ ಪ್ರಾಣ ಉಳಿಸಿಕೊಂಡು ಬಂದ ಇವರನ್ನು ಮನೆಯವರು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುಳಗಿಯ ವಲಯ ಅರಣ್ಯಾಧಿಕಾರಿ ಸಾಗರ್ ಬೋಗುರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮಾಹಿತಿ ಪಡೆದಿದ್ದಾರೆ.

ಹುಲ್ಲಿನ ಬಣವೆಗೆ ಬೆಂಕಿ, ಲಕ್ಷಾಂತರ ರೂ ಹಾನಿ.

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲ್ಲೂಕಿನ ಬಡಕಾನಶಿರಡಾ ಗ್ರಾ.ಪಂ ವ್ಯಾಪ್ತಿಯ ಹಾರ್ನೋಡಾ ಗ್ರಾಮದಲ್ಲಿ ಹುಲ್ಲಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಹಾನಿಯಾದ ಘಟನೆ ನಡೆದಿದೆ.
ಹಾರ್ನೋಡಾ ಗ್ರಾಮದ ನಿವಾಸಿ ಬಾಬು ಲಕ್ಕು ಪಟಕಾರೆ ಎಂಬವರಿಗೆ ಸೇರಿದ ಹುಲ್ಲಿನ ಬಣವೆ ಇದಾಗಿದ್ದು , ಆರ್ಥಿಕವಾಗಿ ತೀರಾ ಬಡವರಾದ ಬಾಬು ಲಕ್ಕು ಪಟಕಾರೆ ಅವರು ತಮ್ಮ ದನಕರುಗಳಿಗಾಗಿ ರಾಮನಗರದಿಂದ ಲಕ್ಷಾಂತರ ರೂಪಾಯಿ ಹಣವನ್ನು ವ್ಯಯಿಸಿ ಹುಲ್ಲನ್ನು ಖರೀದಿಸಿದ್ದರು. ಇದೀಗ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮವಾಗಿ ಹುಲ್ಲು ಸಂಪೂರ್ಣ ಭಸ್ಮವಾಗಿದೆ. ಘಟನೆ ನಡೆದ ತಕ್ಷಣವೇ ಸ್ಥಳೀಯರು ಬೆಂಕಿ ನಂದಿಸಲು ಹರಸಪಟ್ಟಿದ್ದಾರೆ. ಇತ್ತ ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಅಗ್ನಿಶಾಮಕ ದಳವು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಶ್ರಮ‌ ಪಟ್ಟಿದೆ. ಆದಾಗ್ಯೂ ಹುಲ್ಲಿನ ಬಣವೆಯನ್ನು ಬೆಂಕಿ ಸಂಪೂರ್ಣವಾಗಿ ಆವರಿಸಿಕೊಂಡಿತ್ತು.

ಬೇಸಿಗೆ ಕಾಲದಲ್ಲಿ ದನಕರುಗಳಿಗೆ ನಿತ್ಯ ಆಹಾರಕ್ಕಾಗಿ ತಂದಿಟ್ಟ ಹುಲ್ಲು ಇದೀಗ ಬೆಂಕಿಗೆ ಆಹುತಿಯಾಗಿರುವುದರಿಂದ ಬಾಬು ಲಕ್ಕು ಪಟಕಾರೆ ಅವರು ತೀವ್ರ ನೊಂದು ಕೊಂಡಿದ್ದಾರೆ. ಅಗ್ನಿ ಅವಘಡದಿಂದ ಸರಿ ಸುಮಾರು ಒಂದುವರೆ ಲಕ್ಷ ರೂಪಾಯಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

Advertisement
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ