Haliyala |3 ಲಕ್ಷ ಮೌಲ್ಯದ ನಾಟ ವಶ ನಾಲ್ಕುಜನ ಆರೋಪಿಗಳ ಬಂಧನ
ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ (Haliyala) ಅತಿಕ್ರಮಣ ಜಮೀನಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಸಾಗುವಾನಿ ಮರದ ತುಂಡುಗಳನ್ನು ವಶಕ್ಕೆ ಪಡೆದು ನಾಲ್ಕು ಜನರನ್ನು ಬಂಧಿಸಿದ ಘಟನೆ ನಡೆದಿದೆ.
ಇದನ್ನೂ ಓದಿ:-Kumta ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷೆ ಜಯಪ್ರಕಾಶ್ ಶೇಟ್ ನಿಂದ ವಂಚನೆ -ಕೋರ್ಟ ನಿಂದ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ.
ಮೂರು ಲಕ್ಷದ ಐವತ್ತು ಸಾವಿರ ಮೌಲ್ಯದ ಸಾಗುವಾನಿ ನಾಟ ಇದಾಗಿದ್ದು ಕಾಡಿನಲ್ಲಿ ಅಕ್ರಮವಾಗಿ ಕಡಿದು ಹಳಿಯಾಳದ ಅಜಗಾಂವ ಗ್ರಾಮದಲ್ಲಿ ದಾಸ್ತಾನು ಮಾಡಿ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದರು.
ಇದನ್ನೂ ಓದಿ:-Uttara kannda 12 ಲಕ್ಷ ಕ್ಕೂ ಹೆಚ್ಚು ಮೌಲ್ಯದ ಮಾದಕ ವಸ್ತುಗಳ ನಾಶ.ಕಳೆದ ವರ್ಷ ಎಷ್ಟು ನಾಶ ಪಡಿಸಲಾಗಿತ್ತು? ಈಗೆಷ್ಟು?
ದಾಳಿಯಲ್ಲಿ ಅಜಗಾಂವ ಗ್ರಾಮದ ಗದಿಗೆಪ್ಪ ಕಾಗಿ , ಮೌಲಾನಾ ಮುಜಾವರ, ಗುರುರಾಜ ಕಾಗಿ, ಹಾಗೂ ಕೆಸರೊಳ್ಳಿಯ ಸಲಿಮ ಸನದಿ ಎನ್ನುವಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಲೆಮರೆಸಿಕೊಂಡ ಮೂವರು ಆರೋಪಿಗಳ ಪತ್ತೆಗಾಗಿ ಶೋಧ ಮುಂದುವರೆಸಲಾಗಿದೆ.