Dandeli : ಕುಟುಂಬಸ್ತರಿಂದಲೇ ಸರಪಳಿಯಲ್ಲಿ ಬಂದಿಯಾದ ಮಾನಸಿಕ ಅಸ್ವಸ್ತನ ರಕ್ಷಣೆ
Dandeli : ಕುಟುಂಬಸ್ತರಿಂದಲೇ ಸರಪಳಿಯಲ್ಲಿ ಬಂದಿಯಾದ ಮಾನಸಿಕ ಅಸ್ವಸ್ತನ ರಕ್ಷಣೆ
ಕಾರವಾರ :- ಕಾಲಿಗೆ ಸರಪಳಿ ಕಟ್ಟಿ ಗೃಹ ಬಂಧನದಲ್ಲಿ ಇರಿಸಿದ್ದ ಮಾನಸಿಕ ಅಸ್ವಸ್ಥನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಆಲೂರು ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ:-Dandeli: ಸಾಲ ತೀರಿಸಲು 20 ದಿನದ ಹಿಂದೆ ಹುಟ್ಟಿದ ಮಗು ಮಾರಾಟ ಮಾಡಿದ ಪೋಷಕರು
ಆಲೂರು ಗ್ರಾಮದ ನಿವಾಸಿ ವಿನಾಯಕ ವಸಂತ ಸೋನಶೇಟ್ ರಕ್ಷಣೆಗೊಳಗಾದವರಾಗಿದ್ದು ರೆಡ್ ಕ್ರಾಸ್ ಸಂಸ್ಥೆಯು ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸಹಕಾರದಲ್ಲಿ ರಕ್ಷಣೆ ಮಾಡಿದೆ.
ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತಿದ್ದ ತಂದೆ ಸಾವಿನ ನಂತರ ಈತನು ಅಂಚೆ ಇಲಾಖೆಯಲ್ಲಿ ಅನುಕಂಪದ ಆಧಾರದಲ್ಲಿ ಕಾರ್ಯನಿರ್ವಹಿಸುತಿದ್ದು ಮಾನಸಿಕ ಖಿನ್ನತೆಯಿಂದಾಗಿ ತನ್ನ ಹೊಲಗಳಿಗೆ ಬೆಂಕಿ ಇಡುವುದು ಇತರರಿಗೆ ತೊಂದರೆ ಕೊಡುವುದನ್ನು ಮಾಡುತಿದ್ದನು. ಈ ಹಿನ್ನಲೆಯಲ್ಲಿ ಈತನನ್ನು ಅರ್ಧ ಕಟ್ಟಿದ ಮನೆಯೊಳಗೆ ಚೈನ್ ಬಿಗುದು ಈತನ ಸಂಬಂಧಿಗಳು ಕಟ್ಟಿಹಾಕಿದ್ದರು.
ಇದನ್ನೂ ಓದಿ:-Dandeli:ಪ್ರಧಾನಿ ಮೋದಿ ಅವಹೇಳನಕಾರಿ ಪೋಸ್ಟ್ -ದಾಂಡೇಲಿ ವ್ಯಕ್ತಿ ಬಂಧನ
ವಿಷಯ ತಿಳಿದು ಪೊಲೀಸರು ಹಾಗೂ ಸಂಬಂಧಪಟ್ಟ ಇಲಾಖೆ ಈತನನ್ನು ರಕ್ಷಣೆ ಮಾಡಿ ದಾಂಡೇಲಿ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ನೀಡಿದ್ದು , ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಮಾನಸಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.