Sirsi :ಶಿರಸಿ ನಗರಸಭೆ ಸದಸ್ಯ, ಕಂದಾಯ ಅಧಿಕಾರಿ ಲೋಕಾಯುಕ್ತ ಬಲೆಗೆ
Sirsi :ಶಿರಸಿ ನಗರಸಭೆ ಸದಸ್ಯ, ಕಂದಾಯ ಅಧಿಕಾರಿ ಲೋಕಾಯುಕ್ತ ಬಲೆಗೆ
ಕಾರವಾರ :- ಮನೆ ಜಾಗದ ದಾಖಲೆ ಮಾಡಿಕೊಡಲು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ (sirsi)ನಗರಸಭೆ ಅಧಿಕಾರಿ ಹಾಗೂ ನಗರಸಭೆ ಸದಸ್ಯ ಮೂರು ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಹಣದ ಸಮೇತ ಬಿದ್ದಿದ್ದಾರೆ.
ನಗರಸಭೆ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಗಣಪತಿ ನಾಯ್ಕ ಹಾಗೂ ನಗರಸಭೆ ಕಂದಾಯ ಅಧಿಕಾರಿ ಆರ್.ಎಂ.ವೆರ್ಣೇಕರ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದವರಾಗಿದ್ದಾರೆ.
ರಮೇಶ ಹೆಗಡೆ ಎಂಬುವವರ ದೂರಿನ ಮೇಲೆ ಲೋಕಾಯುಕ್ತ ಎಸ್.ಪಿ ಕುಮಾರಚಂದ ಹಾಗೂ ಇನ್ಸ್ ಪೆಕ್ಟರ್ ವಿನಾಯಕ ಬಿಲ್ಲವ ನೇತೃತ್ವದಲ್ಲಿ ಈ ದಾಳಿ ನಡೆದಿದೆ.
ಮನೆ ಜಾಗದ ದಾಖಲೆ ಪತ್ರ ಸರಿಪಡಿಸಿ ನೀಡುವ ಸಂಬಂಧಿಸಿದಂತೆ ಮೂರು ಲಕ್ಷ ಹಣವನ್ನು ಕಂದಾಯ ಅಧಿಕಾರಿ ವರ್ಣೇಕರ್ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಗಣಪತಿ ನಾಯ್ಕ ರಮೇಶ್ ಹೆಗಡೆ ಗೆ ಬೇಡಿಕೆ ಇಟ್ಟಿದ್ದರು.
ಇದನ್ನೂ ಓದಿ:-Sirsi:ಅಳಿಯನಿಂದಲೇ ಅತ್ತೆಯ ಕೊಲೆ-ಆಸ್ತಿ ಜಗಳದಲ್ಲಿ ಹೋಯ್ತು ವೃದ್ದೆಯ ಪ್ರಾಣ
ಕೊಡಲು ತಡವಾಗಿದ್ದಕ್ಕೆ ದಾಖಲೆಪತ್ರ ಬೇರೆಯವರ ಹೆಸರಿಗೆ ಮಾಡುವ ಬೆದರಿಕೆ ಒಡ್ಡಿದ್ದರು. ಕೊನೆಗೆ ಲೋಕಾಯುಕ್ತಕ್ಕೆ ದೂರು ನೀಡಿ ಶಿರಸಿಯ ಎಪಿಎಮ್ ಸಿ ಭಾಗದ ಜಯನಗರ ಬಡಾವಣೆಯಲ್ಲಿ ಹಣ ನೀಡುವಾಗ ಲೋಕಾಯುಕ್ತರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಇನ್ನು ಮಾಜಿ ನಗರಸಭೆ ಅಧ್ಯಕ್ಷ ಹಾಗೂ ಹಾಲಿ ಸದಸ್ಯನಾಗಿದ್ದ ಗಣಪತಿ ನಾಯ್ಕ ಈ ಹಿಂದೆ ನಗರಸಭೆ ಕಬ್ಬಿಣದ ಪೈಪ್ ಗಳನ್ನು ಕದ್ದು ಮಾರಾಟ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದನು. ನ್ಯಾಯಾಲಯದಲ್ಲಿ ಈತನಿಗೆ ಜಾಮೀನು ಸಹ ದೊರೆತಿರಲಿಲ್ಲ. ಆದರೇ ಇದೀಗ ಲಂಚ ಪಡೆಯುವಾಗ ಲೋಕಾಯುಕ್ತರು ಅಧಿಕಾರಿಯೊಂದಿಗೆ ಈತನನ್ನು ಸಹ ವಶಕ್ಕೆ ಪಡೆದಿದ್ದಾರೆ.