For the best experience, open
https://m.kannadavani.news
on your mobile browser.
Advertisement

Shirur.| ನನ್ನ ಕ್ಷಮಿಸಿ ಎಂದು ಈಶ್ವರ್ ಮಲ್ಪೆ ನಡೆದಿದ್ದೇಕೆ?

Ankola:- ಅಂಕೋಲದ ಶಿರೂರಿನಲ್ಲಿ ಮೂರನೇ ಹಂತದ ಶೋಧ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಈಶ್ವರ್ ಮಲ್ಪೆ ಏಕಾ ಏಕಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿ ಹೊರನಡೆದಿದ್ದಾರೆ.
10:02 PM Sep 22, 2024 IST | ಶುಭಸಾಗರ್
shirur   ನನ್ನ ಕ್ಷಮಿಸಿ ಎಂದು ಈಶ್ವರ್ ಮಲ್ಪೆ ನಡೆದಿದ್ದೇಕೆ

Ankola:- ಅಂಕೋಲದ ಶಿರೂರಿನಲ್ಲಿ ಮೂರನೇ ಹಂತದ ಶೋಧ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಈಶ್ವರ್ ಮಲ್ಪೆ ಏಕಾ ಏಕಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿ ಹೊರನಡೆದಿದ್ದಾರೆ.

Advertisement

ಈ ಕುರಿತು ತನ್ನ YOUTUBE ಚಾನಲ್ ನಲ್ಲಿ ನೋವುತೋಡಿಕೊಂಡಿದ್ದಾರೆ.

ಇನ್ನು ಜಿಲ್ಲಾಡಳಿತ ಮೂರನೇ ಹಂತದ ಕಾರ್ಯಾಚರಣೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಈಶ್ವರ್ ಮಲ್ಪೆಯವರಿಗೆ ಕಾರ್ಯಾಚರಣೆ ಮಾಡಲು ಅನುಮತಿ ನೀಡಿರಲಿಲ್ಲ. ಕಾರವಾರ ಶಾಸಕ ಸತೀಶ್ ಸೈಲ್ ರವರು ಮುತುವರ್ಜಿ ವಹಿಸಿ ಅವಕಾಶ ಕೊಡಿಸಿದ್ದರು.

ಆದರೇ ಡೈವ್ ಮಾಡಿದಾಗ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡುವ ಮೊದಲು ತನ್ನ YouTube ನಲ್ಲಿ ಹಾಕುತಿದ್ದು ಜಿಲ್ಲಾಡಳಿತಕ್ಕೆ ಮಾಹಿತಿ ದೊರೆಯುತ್ತಿರಲಿಲ್ಲ.

ಇದಲ್ಲದೇ ಜಿಲ್ಲಾಡಳಿತದ ಅನುಮತಿಯಿಂದ ಓಷಿಯನ್ ಕಂಪನಿಯ ಡ್ರಜ್ಜಿಂಗ್ ಮಿಷನ್ ಕಾರ್ಯಾಚರಣೆ ಮಾಡುತಿದ್ದು,ಇವರದ್ದೇ ಆದ ಮುಳುಗುತಜ್ಞರ ತಂಡಕೂಡ ಇದೆ‌ .ಹೀಗಾಗಿ ಪ್ರತಿ ಹಂತದ ಕಾರ್ಯಾಚರಣೆ ವರದಿಯನ್ನು ಜಿಲ್ಲಾಡಳಿತಕ್ಕೆ ನೀಡಬೇಕಾಗಿರುತ್ತದೆ.

ಏಕೆಂದರೇ ಕೇರಳ ರಾಜ್ಯದಿಂದ ಈ ಘಟನೆ ಕುರಿತು ಹೈ ಕೋರ್ಟ ನಲ್ಲಿ ಪ್ರಕರಣ ಸಹ ಇದ್ದು ಕಾರ್ಯಾಚರಣೆ ಮಾಹಿತಿಯ ವರದಿ ಸಲ್ಲಿಸಬೇಕಾಗುತ್ತದೆ. ಹೀಗಾಗಿ ಹಲವು ಕಾರಣದಿಂದ ಈಶ್ವರ್ ಮಲ್ಪೆಗೆ ಅನುಮತಿ ನೀಡಿರಲಿಲ್ಲ.

ಇದನ್ನೂ ಓದಿ:-Shiruru ಕಾರ್ಯಾಚರಣೆ| ಟ್ಯಾಂಕರ್ ,ಲಾರಿ ಪಳಯುಳಿಕೆ ಹೊರತೆಗೆದ ಈಶ್ವರ್ ಮಲ್ಪೆ

ಆದರೇ ಇಂದು ಈಶ್ವರ್ ಮಲ್ಪೆ ತಂಡ ತಮ್ಮ ಕಾರ್ಯಾಚರಣೆಯ ಲೈವ್ ವಿಡಿಯೋ ಮಾಡುತಿದ್ದು ಇದನ್ನು ಮಾಡದಂತೆ ತಿಳಿಸಲಾಗಿದೆ.

ಇದಲ್ಲದೇ ಡ್ರಜ್ಜಿಂಗ್ ಮಾಡುತಿದ್ದ ಕಂಪನಿಯ ಸಿಬ್ಬಂದಿ ಬಳಿಯೂ ಈಶ್ವರ್ ಮಲ್ಪೆ ಕಿರಿಕ್ ಮಾಡಿಕೊಂಡಿದ್ದರು ಎಂದು ಹೇಳಲಾಗುತಿದ್ದು ಕಾರ್ಯಾಚರಣೆಗೆ ತೊಂದರೆ ಆಗದೇ ಇರಲು ಈಶ್ವರ್ ಮಲ್ಪೆಗೆ ಸೂಚಿಸಿತ್ತು.

ಆದರೇ ಇದೀಗ ತಮ್ಮ Youtub ಮತ್ತು ಕೇರಳ ಮಾಧ್ಯಮದ ಮುಂದೆ ಜಿಲ್ಲಾಡಳಿತದ ವಿರುದ್ಧ ಅಸಮದಾನ ಹೊರಹಾಕಿದ್ದಾರೆ. ಇಂಡಿಪೆಂಡೆಂಟ್ ಆಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟರೆ ಮಾತ್ರ ಶೋಧ ಕಾರ್ಯ ಮಾಡುವುದಾಗಿ ಹೇಳಿದ್ದಾರೆ.

ಕರ್ನಾಟಕ ಮಾನ ಕಳೆಯುತ್ತಿರುವ ಕೇರಳ ಮಾಧ್ಯಮಗಳು.

ಕೇರಳ( Kerala media) ಮಾಧ್ಯಮಗಳಲ್ಲಿ ಶಿರೂರು ಕಾರ್ಯಾಚರಣೆ ಕುರಿತು ಊಹಾ ಪೋಹದ ಸುದ್ದಿ ಬಿತ್ತರವಾಗುತ್ತಿದೆ. ಜಿಲ್ಲಾಡಳಿತ ಸಮರ್ಪಕ ಕಾರ್ಯ ನಿರ್ವಹಿಸುತಿಲ್ಲ,ನಿರ್ಲಕ್ಷಿಸುತ್ತಿದೆ ಎಂದು ಬಿಂಬಿಸಲಾಗುತ್ತಿದೆ. ಹೀಗಿರುವಾಗ ಉತ್ತಮ ಕಾರ್ಯ ಮಾಡಿ ನೌಕಾದಳದವರು ಮಾಡದ ಕಾರ್ಯ ಮಾಡಿ ತೋರಿಸಿದ ಈಶ್ವರ್ ಮಲ್ಪೆ ಉದ್ವೇಗದಲ್ಲಿನ ಹೇಳಿಕೆ ಯಾವ ಪರಿಣಾಮ ಬೀರಲಿದೆ ಎಂಬುದನ್ನು ಅರಿತು ನಡೆಯಬೇಕಿತ್ತು ಎಂಬುದು ಹಲವರ ಮಾತು.

ನಾಳೆ ವಿಶೇಷ ತಂಡ ಶಿರೂರಿಗೆ.

ನಾಳೆ ಕೇರಳ ಮೂಲದ ಲಾರಿ ಪತ್ತೆಗಾಗಿ ದೆಹಲಿಯಿಂದ ವಿಶೇಷ ತಂಡ ಶಿರೂರಿಗೆ ಆಗಮಿಸಲಿದ್ದು ಕಾರ್ಯಾಚರಣೆ ನಡೆಸಲಿದೆ.
ಇನ್ನು ನೀರು ತಿಳಿಯಾಗಿದ್ದರೇ ಮುಳುಗು ತಜ್ಞರು ಸಹ ಕಾರ್ಯಾಚರಣೆ ನಡೆಸಲಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ