Mla ಗಾಗಿ ಕಾದು ಕುಳಿತ ಶೋಧ ಕಾರ್ಯಾಚರಣೆ ತಂಡ| ಏನಾಯ್ತು ವಿವರ ನೋಡಿ.
ಅಂಕೋಲ:- ಶಿರೂರಿನಲ್ಲಿ ನಲ್ಲಿ ಭೂ ಕುಸಿತದಿಂದ ಕಾಣೆಯಾದ ಮೂರು ಜನರ ಶವ ಶೋಧಕ್ಕಾಗಿ ಡ್ರಜ್ಜಿಂಗ್ ಬೋಟ್ ತರಿಸಲಾಗಿದ್ದು ,ಇಂದು ಬೆಳಗ್ಗೆ 11 ಕ್ಕೆ ಶಿರೂರಿನ ಗಂಗಾವಳಿ ನದಿಯಲ್ಲಿ ಬಂದು
04:34 PM Sep 20, 2024 IST | ಶುಭಸಾಗರ್
ಅಂಕೋಲ:- ಶಿರೂರಿನಲ್ಲಿ ನಲ್ಲಿ ಭೂ ಕುಸಿತದಿಂದ ಕಾಣೆಯಾದ ಮೂರು ಜನರ ಶವ ಶೋಧಕ್ಕಾಗಿ ಡ್ರಜ್ಜಿಂಗ್ ಬೋಟ್ ತರಿಸಲಾಗಿದ್ದು ,ಇಂದು ಬೆಳಗ್ಗೆ 11 ಕ್ಕೆ ಶಿರೂರಿನ ಗಂಗಾವಳಿ ನದಿಯಲ್ಲಿ ಬಂದು ನಿಂತಿದೆ.
Advertisement
ಆದರೇ ಡ್ರಜ್ಜಿಂಗ್ ಮಿಷನ್ ಗೆ ಪೂಜೆ ಸಲ್ಲಿಸಿ ಕಾರ್ಯ ಪ್ರಾರಂಭ ಮಾಡಬೇಕಿದ್ದು ಕಾರವಾರದ ಶಾಸಕರು ತುರ್ತು ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದು ಇಂದು ಬರುವಾಗ ಫೈಟ್ ಮಿಸ್ ಆಗಿದ್ದು ತಡವಾಗಿ ಕಾರವಾರಕ್ಕೆ ಬಂದಿದ್ದು ಅಂಕೋಲದಲ್ಲಿ ಸಭೆಯಲ್ಲಿ ಭಾಗವಹಿಸಿದ್ದರು.
ಹೀಗಾಗಿ ಶಾಸಕ ಕೈಯಿಂದ ಪೂಜೆ ನೆರವೇರಬೇಕಿದ್ದು ಶಾಸಕರು,ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವ ಕಾರಣ ಕಾರ್ಯಾಚರಣೆ ಗೆ ಪೂಜೆ ಹಿನ್ನೆಲೆಯಲ್ಲಿ ಪ್ರಾರಂಭವಾಗಿಲ್ಲ. ಹೀಗಾಗಿ ಸಂಜೆಯಾದ್ದರಿಂದ ಶನಿವಾರದಿಂದ ಕಾರ್ಯಾಚರಣೆ ಸಂಪೂರ್ಣ ಪ್ರಮಾಣದಲ್ಲಿ ನಡೆಯುವ ಸಾಧ್ಯತೆಗಳಿವೆ.
Advertisement