Shirur|ಗಂಗಾವಳಿನದಿಯಲ್ಲಿ ಬಗೆದಷ್ಟೂ ಅವಶೇಷ-ಇಂದು ಸಿಕ್ಕಿದ್ದೇನು ನೋಡಿ.
ಅಂಕೋಲ: ಅಂಕೋಲದ ಶಿರೂರು (shirur) ದುರಂತದಲ್ಲಿ ಕಣ್ಮರೆಯಾದ ಮೂವರಿಗಾಗಿ ಮೂರು ದಿನದಿಂದ ಮೂರನೇ ಹಂತದ ಕಾರ್ಯಾಚರಣೆ ನಡೆಸಲಾಗಿದೆ.
05:25 PM Sep 22, 2024 IST | ಶುಭಸಾಗರ್
ಅಂಕೋಲ: ಅಂಕೋಲದ ಶಿರೂರು (shirur) ದುರಂತದಲ್ಲಿ ಕಣ್ಮರೆಯಾದ ಮೂವರಿಗಾಗಿ ಮೂರು ದಿನದಿಂದ ಮೂರನೇ ಹಂತದ ಕಾರ್ಯಾಚರಣೆ ನಡೆಸಲಾಗಿದೆ.
Advertisement
ಕಳೆದ ಮೂರು ದಿನದಿಂದ ಗೋವಾ (goa) ದಿಂದ ಶಿರೂರಿಗೆ ಆಗಮಿಸಿದ ಡ್ರಜ್ಜಿಂಗ್ ಬೋಟ್ ಮೂಲಕ ಶೋಧ ಕಾರ್ಯ ನಡೆಸಿದ್ದು ,ಮೂರನೇ ಹಂತದ ಕಾರ್ಯಾಚರಣೆ ವೇಳೆ ಮಲ್ಪೆಯ ಈಶ್ವರ್ ರವರು ಗಂಗಾವಳಿ ನದಿಯಲ್ಲಿ ಮುಳುಗಿ ಲಾರಿಯ ಬಿಡಿಭಾಗಗಳನ್ನು ಹಾಗೂ ಸ್ಕೂಟಿ ಮೊಫೆಡ್ ನ ಗುರುತುಮಾಡಿ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:-ಶಿರೂರು ಭೂ ಕುಸಿತ ಪ್ರಕರಣ| ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಹಣವೆಷ್ಟು? ವಿವರ ಇಲ್ಲಿದೆ.
ಕಾರ್ಯಾಚರಣೆಯಲ್ಲಿ ತಮಿಳುನಾಡು ಮೂಲದ ಗ್ಯಾಸ್ ಟ್ಯಾಂಕರ್ ನ ಇಂಜಿನ್ ಭಾಗ ,ಮೃತ ಲಕ್ಷ್ಮಣ್ ನಾಯ್ಕ ರವರಿಗೆ ಸೇರಿದ ಸ್ಕೂಟಿ, ಪಾತ್ರೆಗಳು ದೊರೆತಿವೆ.
ಸದ್ಯ ನಾಳೆಯೂ ಶೋಧಕಾರ್ಯ ನಡೆಯಲಿದ್ದು ಕೇರಳ ಮೂಲದ ಅರ್ಜುನ್ ಲಾರಿಯನ್ನು ಮೇಲೆತ್ತುವ ಕಾರ್ಯ ನಡೆಯಲಿದೆ.
Advertisement