Uttra kannda :ಹಾಲಕ್ಕಿ ಒಕ್ಕಲಿಗರ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ.
ಹಾಲಕ್ಕಿ ಒಕ್ಕಲಿಗರ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ.
Karwar :ಉತ್ತರ ಕನ್ನಡ (uttra Kannda) ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಅಹ್ವಾನ ಮಾಡಲಾಗಿದೆ.
2024 ನೇ ಸಾಲಿನಲ್ಲಿ SSLC, PUC ಮತ್ತು ಡಿಗ್ರಿ ಮತ್ತು ಕ್ರೀಡೆಯಲ್ಲಿ ( ಕನಿಷ್ಟ ರಾಜ್ಯ ಮಟ್ಟದಲ್ಲಿ ಭಾಗವಹಿಸಿರಬೇಕು) ಪ್ರಥಮ,ದ್ವಿತೀಯ ಮತ್ತು ತೃತೀಯ ಮತ್ತು ಸಮಾಧಾನಕರ ಸ್ಥಾನ ಗಳಿಸಿದ ಹಾಲಕ್ಕಿ ಸಮಾಜದ ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಪ್ರತಿ ವರ್ಷದಂತೆ ಉತ್ತರ ಕನ್ನಡ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘ (ರಿ) ಶಿರಕುಳಿ ಅಂಕೋಲಾ ಇವರು ಪ್ರತಿಭಾ ಪುರಸ್ಕಾರ ಆಯೋಜಿಸಿದ್ದಾರೆ.
ಇದನ್ನೂ ಓದಿ:-Kumta |ನಾಯಿ ಹಿಡಿಯಲು ಬಂದು ಬಾವಿಗೆ ಬಿದ್ದ ಚಿರತೆ ರಕ್ಷಣೆ
ಸಮಾಜದ ಪ್ರತಿಭಾನ್ವಿತ ವಿಧ್ಯಾರ್ಥಿಗಳು ತಮ್ಮ ಅಂಕಪಟ್ಟಿ, ಆಧಾರಕಾರ್ಡ, ಜಾತಿ ಪ್ರಮಾಣ ಪತ್ರ ಮತ್ತು ಕ್ರೀಡಾ ಪ್ರಮಾಣ ಪತ್ರಗಳನ್ನು ದಿನಾಂಕ: 30-10-2024 ರೊಳಗೆ ಹನುಮಂತ ಬೊಮ್ಮು ಗೌಡ (ಅದ್ಯಕ್ಷರು- ಜಿ, ಹಾ, ಒ, ಸಂಘ ) ಬೆಳಂವಾರ ಅಂಕೋಲಾ ಅಥವಾ ಪುರುಷೋತ್ತಮ ಪಿ ಗೌಡ ( ಕಾರ್ಯದರ್ಶಿ- ಜಿ, ಹಾ, ಒ, ಸಂಘ) ಇವರಿಗೆ ದಾಖಲಾತಿ ಸಲ್ಲಿಸಲು ಕೋರಲಾಗಿದೆ.
ಇದನ್ನೂ ಓದಿ:-Railway:ಪದವಿ ಪಾಸಾದವರಿಗೆ ರೈಲ್ವೆಯಲ್ಲಿ 8,113 ನಾನ್ ಟೆಕ್ನಿಕಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ಈ ವರ್ಷದ ಹಾಲಕ್ಕಿ ಪ್ರತಿಭಾ ಪುರಸ್ಕಾರದ ಮುಖ್ಯ ಪ್ರಾಯೋಜಕರಾಗಿ ಹನಮಂತ ಬೊಮ್ಮು ಗೌಡ ಬೆಳಂಬಾರ, ಗಂಗಾಧರ ಕೆ ಗೌಡ ಅಮದಳ್ಳಿ, ವಿಷ್ಣು ಗೌಡ ಬೆಳಂಬಾರ, ಪುರುಷೋತ್ತಮ ಗೌಡ ಅಮದಳ್ಳಿ ಇವರು ಮುಂದೆ ಬಂದಿದ್ದು ಇನ್ನು ಯಾರಾದರೂ ಪ್ರಯೋಜಕತ್ವ ವಹಿಸಿಕೊಳ್ಳಲು ಆಸಕ್ತಿ ಹೊಂದಿದ್ದರೆ ,ಸಂಘದ ಅದ್ಯಕ್ಷರಾದ ಹನುಮಂತ ಬಿ ಗೌಡ- 92421 21337 ಇವರನ್ನು ಸಂಪರ್ಕಿಸಲು ಉ.ಜಿ.ಹಾ.ಒ.ಸಂಘದ ಕಾರ್ಯದರ್ಶಿ ಪುರುಷೋತ್ತಮ ಪಿ ಗೌಡ ರವರು ಪ್ರಕಟಣೆಯಲ್ಲಿ ಕೋರಿದ್ದಾರೆ.