ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Shirur ದುರಂತ |ಮಗನಿಗಾಗಿ ಲಾರಿಯ ಆಟಿಕೆ ಖರೀದಿಸಿದ್ದ ಮೃತ ಅರ್ಜುನ್.

ಅಂಕೋಲ :- ಜುಲೈ 16 ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶಿರೂರಿನಲ್ಲಿ ಭೂ ಕುಸಿತವಾಗಿ 11 ಜನ ಮೃತಪಟ್ಟಿದ್ದಾರೆ. ಮೂರನೇ ಹಂತದ ಸುದೀರ್ಘ ಕಾರ್ಯಾಚರಣೆಯಲ್ಲಿ ಕೇರಳ ಮೂಲದ ಅರ್ಜುನ್ ರವರ ಮೃತದೇಹ ಭಾರತ್ ಬೇಂಜ್ ಲಾರಿಯಲ್ಲೇ ಸಿಕ್ಕಿದ್ದು ಇದೀಗ ಲಾರಿ ಅವಶೇಷದಡಿ ಅರ್ಜುನ್ ತನ್ನ ಮಗುವಿಗಾಗಿ ಕರೀದಿಸಿದ್ದ ಲಾರಿಯ ಅಟಿಕೆ ,ಮೊಬೈಲ್ ಗಳು ದೊರೆತಿದೆ.
10:37 AM Sep 27, 2024 IST | ಶುಭಸಾಗರ್

ಅಂಕೋಲ :- ಜುಲೈ 16 ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶಿರೂರಿನಲ್ಲಿ ಭೂ ಕುಸಿತವಾಗಿ 11 ಜನ ಮೃತಪಟ್ಟಿದ್ದಾರೆ. ಮೂರನೇ ಹಂತದ ಸುದೀರ್ಘ ಕಾರ್ಯಾಚರಣೆಯಲ್ಲಿ ಕೇರಳ ಮೂಲದ ಅರ್ಜುನ್ ರವರ ಮೃತದೇಹ ಭಾರತ್ ಬೇಂಜ್ ಲಾರಿಯಲ್ಲೇ ಸಿಕ್ಕಿದ್ದು ಇದೀಗ ಲಾರಿ ಅವಶೇಷದಡಿ ಅರ್ಜುನ್ ತನ್ನ ಮಗುವಿಗಾಗಿ ಕರೀದಿಸಿದ್ದ ಲಾರಿಯ ಅಟಿಕೆ ,ಮೊಬೈಲ್ ಗಳು ದೊರೆತಿದೆ.

Advertisement

ಇದನ್ನೂ ಓದಿ:- Shirur.| ನನ್ನ ಕ್ಷಮಿಸಿ ಎಂದು ಈಶ್ವರ್ ಮಲ್ಪೆ ನಡೆದಿದ್ದೇಕೆ?

ಸದ್ಯ ಅರ್ಜುನ್ ರವರ ಕೊಳತ ಸ್ಥಿತಿಯ ದೇಹವನ್ನು ಅಂಕೋಲದ ಶವಾಗಾರದಲ್ಲಿ ಇರಿಸಲಾಗಿದೆ. ಜೊತೆಗೆ ಡಿ.ಎನ್.ಎ ಪರೀಕ್ಷೆಗೆ ಕಳುಹಿಸಲಾಗಿದ್ದು , ವರದಿ ಬಂದ ನಂತರ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಿದ್ದಾರೆ‌.

ಮೃತ ಅರ್ಜುನ್ ವಸ್ತುಗಳು ಕುಟುಂಬಸ್ತರಿಗೆ ಹಸ್ತಾಂತರ.

ಗಂಗಾವಳಿ ನದಿಯಲ್ಲಿ ತೆಗೆದ ನಜ್ಜುಗುಜ್ಜಾದ ಲಾರಿಯಲ್ಲಿ ಅರ್ಜುನ್ ಗೆ ಸೇರಿದ ಎರಡು ಮೊಬೈಲ್,ಪಾತ್ರೆಗಳು ,ಲಾರಿ ಮಾದರಿಯ ಆಟಿಕೆ ದೊರೆತಿದ್ದು ಅರ್ಜುನ್ ಸಹೋದರ ಅಭಿಜಿತ್ ಗೆ ನೀಡಲಾಗಿದೆ.

Advertisement

ಸಧ್ಯ ಕಾರ್ಯಾಚರಣೆಯಲ್ಲಿ ಶಿರೂರಿನ ಜಗನ್ನಾಥ್ , ಗಂಗೆಕೊಳ್ಳದ ಲೋಕೇಶ್ ಮೃತ ದೇಹ ದೊರೆಯಬೇಕಿದ್ದು ಇಂದು ಕೂಡ ಎಂದಿನಂತೆ ಡ್ರಜ್ಜಿಂಗ್ ಬಾರ್ಜ ನಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

Advertisement
Tags :
Ankola newsArjun lorryKannda newsLandslideShirurToy
Advertisement
Next Article
Advertisement