Uttra kannda|ಕಾಳಿ ನದಿಗೆ ಹಾರಿದ ಮಹಿಳೆ ಶೋಧ ಕಾರ್ಯ.
ವರದಿ| ಸಂದೇಶ್ ಜೈನ್.
ದಾಂಡೇಲಿ : ನಗರದ ಕುಳಗಿ ರಸ್ತೆಯ ಸೇತುವೆಯಿಂದ ಕಾಳಿ ನದಿಗೆ ಮಹಿಳೆಯೋರ್ವಳು ಹಾರಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದ್ದು, ನದಿಗೆ ಹಾರಿದ ಮಹಿಳೆ ಸುಮಾರು 30 ವರ್ಷದ ವಯಸ್ಸಿನವಳಾಗಿದ್ದಾಳೆಂದು ತಿಳಿದು ಬಂದಿದೆ. ಈ ಮಹಿಳೆಯ ಬಗ್ಗೆ ಹೆಚ್ಚಿನ ವಿವರ ಇನ್ನಷ್ಟೇ ತಿಳಿದು ಬರಬೇಕಾಗಿದೆ.
ನದಿಗೆ ಮಹಿಳೆ ಜಿಗಿದ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ವೈಲ್ಡರ್ ನೆಸ್ಟ್ ಮತ್ತು ಪ್ಲೈ ಕ್ಯಾಚರ್ ನವರ ರಾಫ್ಟ್ ಜೊತೆಗೆ ನುರಿತ ಸಿಬ್ಬಂದಿಗಳ ತಂಡವನ್ನು ಕರೆಸಿ, ಶೋಧ ಕಾರ್ಯಕ್ಕಿಳಿದಿದೆ.
ಇದನ್ನೂ ಓದಿ:-Dandeli|ಅರಣ್ಯದಲ್ಲಿ ಹುಲಿ ಬೇಟೆ ಎರಡು ವರ್ಷದ ನಂತರ ಆರೋಪಿಗಳ ಬಂಧನ
ಸಂಜೆ 6.30 ಗಂಟೆಯವರೆಗೂ ಶೋಧ ಕಾರ್ಯ ನಡೆಸಲಾಗಿದ್ದು, ನದಿಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿರುವುದರಿಂದ ಈವರೇಗೆ ಮಹಿಳೆ ಪತ್ತೆಯಾಗಿಲ್ಲ. ರಾತ್ರಿ ಸಮಯದಲ್ಲಿ ಕಾರ್ಯಾಚರಣೆ ಕಷ್ಟ ಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆಯನ್ನು ನಾಳೆಗೆ ಮುಂದೂಡಲಾಗಿದೆ.