Shirur ಗಂಗಾವಳಿನದಿಯಲ್ಲಿದೆ ಒಂದುಲಕ್ಷಕ್ಕೂ ಹೆಚ್ಚು ಮೆಟ್ರಿಕ್ ಮಣ್ಣು- ಕಾರ್ಯಾಚರಣೆ ತಂಡದ ಕ್ಯಾಪ್ಟನ್ ಹೇಳಿದ್ದೇನು ಗೊತ್ತಾ?
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರಿನಲ್ಲಿ ಭೂ ಕುಸಿತ ದುರಂತದಲ್ಲಿ ಸಾವು ಕಂಡವರ ಶವ ಶೋಧ ದ ಮೂರನೇ ಹಂತದ ಡ್ರಜ್ಜಿಂಗ ಬಾರ್ಜ ಮೂಲಕ ನಡೆಸುತಿದ್ದ ಕಾರ್ಯಾಚರಣೆಯನ್ನು ಇಂದು ಸ್ಥಗಿತ ಮಾಡಲಾಗಿದೆ.
ಇದನ್ನೂ ಓದಿ:-Shirur| ಮುಂದುವರೆದ ಕಾರ್ಯಾಚರಣೆ ಅರ್ಜುನ್ ಶವ ಸಿಕ್ಕ ನಂತರ ಸಿಕ್ಕಿದ್ದೇನು?
ಈ ಕುರಿತು 13 ದಿನದ ಕಾರ್ಯಾಚರಣೆಯನ್ನು ಪೂರೈಸಿ ಶವ ಶೋಧ ನಡೆಸಿದ ಅಭಿಷೇನಿಯಾ ಓಷಿಯನ್ ಸರ್ವಿಸ್ ಕಂಪನಿಯ ಮಾಲೀಕ ಮಹೇಂದ್ರ ರವರು ತಾವು ಕಾರ್ಯಾಚರಣೆ ಸ್ಥಗಿತ ಗೊಳಿಸಿರುವ ಕುರಿತು ಮಾಹಿತಿ ನೀಡಿದರು.
13 ದಿನದ ವರೆಗೆ ಕಾರ್ಯಾಚರಣೆ ಮಾಡಿದ್ದೇವೆ ಜಿಲ್ಲಾಡಳಿತದಿಂದ 10 ದಿನದ ವರೆಗೆ ಶವ ಶೋಧ ನಡೆಸುವಂತೆ ಗುತ್ತಿಗೆ ನೀಡಲಾಗಿತ್ತು. ಆದರೂ ಎಲ್ಲವೂ ಸಿಗಬೇಕೆಂಬ ದೃಷ್ಟಿಯಿಂದ ಹೆಚ್ಚುವರಿ ಶೋಧ ಕಾರ್ಯ ಮಾಡಿದ್ದೇವೆ.
12 ದಿನದಲ್ಲಿ ಅರ್ಜುನ್ ಲಾರಿ , ಶವ ,ಮನುಷ್ಯನ ಮೂಳೆಗಳು ಸೇರಿದಂತೆ ಹಲವು ವಸ್ತುಗಳನ್ನು ಹೊರತೆಗೆದಿದ್ದು ಗಂಗಾವಳಿ ನದಿಯಲ್ಲಿ ಇದ್ದ ಆಲದ ಮರ ಸಹ ಹೊರತೆಗೆಯಲಾಗಿದೆ. 99% ಕಾರ್ಯ ಯಶಸ್ವಿಯಾಗಿದೆ. ಈ ಕಾರ್ಯಾಕ್ಕೆ ಶಾಸಕ ಸತೀಶ್ ಸೈಲ್, ಪೊಲೀಸ್ ಇಲಾಖೆ ,ಜಿಲ್ಲಾಡಳಿತ ಸಹಕಾರ ನೀಡಿದೆ. ಕುದ್ದು ಶಾಸಕರು ಕಾರ್ಯಾಚರಣೆಯಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಿದರು,ಎಲ್ಲರ ಸಹಕಾರದಿಂದ ಇಂದು ಕಾರ್ಯಾಚರಣೆ ನಡೆಸಿದ್ದೇವೆ ಎಂದರು.
ಗಂಗಾವಳಿ ನದಿಯಲ್ಲಿದೆ ಒಂದುಲಕ್ಷದ ಮೂವತ್ತಾರು ಸಾವಿರ ಮೆಟ್ರಿಕ್ ಟನ್ ಮಣ್ಣು!
ಭೂ ಕುಸಿತದಿಂದಾಗಿ ಶಿರೂರು ಭಾಗದ ಗಂಗಾವಳಿ ನದಿಯಲ್ಲಿ ಒಂದು ಲಕ್ಷದ ಮೂವತ್ತಾರು ಸಾವಿರ ಮೆಟ್ರಿಕ್ ಟನ್ ನಷ್ಟು ಮಣ್ಣು ಸಂಗ್ರಹವಾಗಿದೆ. ಇದರಲ್ಲಿ 20 % ಮಾತ್ರಮಣ್ಣು ಇದ್ದು 80% ಕಲ್ಲುಗಳಿವೆ.
13 ದಿನದ ಕಾರ್ಯಾಚರಣೆಯಲ್ಲಿ 16 ಜನರ ತಂಡ ಕಾರ್ಯ ನಿರ್ವಹಿಸಿ ಕಾಣೆಯಾದ ಮಾರು ಶವಗಳಲ್ಲಿ ಎರಡು ಶವದ ಅವಶೇಷ ಮೇಲೆ ತೆಗೆಯಲಾಗಿದೆ. ಈ ಮೂಲಕ ನಿಗದಿಗಿಂತ ಹೆಚ್ಚು ದಿನ ಕಾರ್ಯ ನಿರ್ವಹಿಸಿ ಶವ ಶೋಧ ಮಾಡಲಾಗಿದೆ.
ಇನ್ನು ಗಂಗಾವಳಿ ನದಿಯಲ್ಲಿ ಬಿದ್ದ ಮಣ್ಣನ್ನು ತೆಗೆಯಲು ಕನಿಷ್ಟ ಆರು ತಿಂಗಳು ಬೇಕು. ನಮಗೆ ಶವ ಶೋಧ ಕಾರ್ಯಾಚರಣೆ ಮಾಡಲು ಹೇಳಿದ್ದರು ಅದನ್ನು ಪೂರೈಸಿದ್ದೇವೆ.
ಜಿಲ್ಲಾಡಳಿತ ಮಣ್ಣು ತೆಗೆಯಲು ಬೇಕಾದ ವ್ಯವಸ್ಥೆ ಮಾಡಲಿದೆ . ನಮಗೆ ಮತ್ತೆ ಕಾರ್ಯಾಚರಣೆ ನಡೆಸಲು ಹೇಳಿದರೆ ಕಾರ್ಯ ನಿರ್ವಹಿಸುತ್ತೇವೆ ಎನ್ನುತ್ತಾರೆ ಮೂರನೇ ಹಂತದ ಕಾರ್ಯಾಚರಣೆ ವಹಿಸಿಕೊಂಡಿರುವ ಓಷಿಯನ್ ಕಂಪನಿ ಮಾಲೀಕ ಮಹೇಂದ್ರರವರು.
ಮಹೇಂದ್ರ ರವರು ಮೂಲತಹಾ ಕಾರವಾರದವರಾಗಿದ್ದು ಗೋವಾ ದಲ್ಲಿ ಉದ್ಯಮ ನಡೆಸುತಿದ್ದು ,ಶಾಸಕ ಸತೀಶ್ ಸೈಲ್ ರವರ ಮುತುವರ್ಜಿಯಿಂದಾಗಿ ಕಾರ್ಯಾಚರಣೆಗೆ ಇಳಿಯುವ ಮೂಲಕ ನೊಂದವರಿಗೆ ದ್ವನಿಯಾಗಿದ್ದಾರೆ.