Haliyala|ಆರ್.ವಿ ದೇಶಪಾಂಡೆ ಆಪ್ತನಿಂದ ಅಂಗನವಾಡಿ ಜಾಗ ಒತ್ತುವರಿ -ಗ್ರಾಮಸ್ತರಿಂದ ಮುತ್ತಿಗೆ
ಹಳಿಯಾಳ :- ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ( RV Deshpande) ಆಪ್ತನಿಂದ ಅಂಗನವಾಡಿ ಜಾಗ ಒತ್ತುವರಿ ಮಾಡಿರುವುದನ್ನು ಖಂಡಿಸಿ
03:51 PM Sep 30, 2024 IST | ಶುಭಸಾಗರ್
Haliyala|ಆರ್.ವಿ ದೇಶಪಾಂಡೆ ಆಪ್ತನಿಂದ ಅಂಗನವಾಡಿ ಜಾಗ ಒತ್ತುವರಿ -ಗ್ರಾಮಸ್ತರಿಂದ ಮುತ್ತಿಗೆ
ಹಳಿಯಾಳ :- ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ( RV Deshpande) ಆಪ್ತನಿಂದ ಅಂಗನವಾಡಿ ಜಾಗ ಒತ್ತುವರಿ ಮಾಡಿರುವುದನ್ನು ಖಂಡಿಸಿ ಜನಗಾ ಗ್ರಾಮ ಪಂಚಾಯತಿ ವ್ಯಾಪ್ತಿಯ ನಂದಿಗದ್ದಾ ಗ್ರಾಮಸ್ಥರು ಗ್ರಾಮಪಂಚಾಯ್ತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ನಡೆದಿದೆ.
Advertisement
ಇದನ್ನೂ ಓದಿ:-HALIYALA |ಪೊಲೀಸಪ್ಪನ ಮನೆಯ ಮುಂದೆ ಬಿದ್ದ ಮಗುವಿನ ಪಿಂಡ ಯಾರದ್ದು!ಪಿಂಡದ ಮೂಲಕ್ಕಾಗಿ ರೈತ ಸಂಘ ದೂರು ಏಕೆ?
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ನಂದಿಗದ್ದಾ ಗ್ರಾಮದ ಶಾಸಕ ಆರ್ ವಿ ದೇಶಪಾಂಡೆ ಆಪ್ತ ನಂದಿಗದ್ದಾ ಗ್ರಾಮದ ರಾಜಪ್ಪಾ ಮೈತ್ರಿ ಯಿಂದ ಅಂಗನವಾಡಿ ಜಾಗ ಒತ್ತುವರಿಯಾಗಿದ್ದು ,ಮೂರುಬಾರಿ ಮನವಿ ಸಲ್ಲಿಸಿದರೂ ಶಾಸಕರ ಆಪ್ತರಾಗಿದ್ದರಿಂದ ಗ್ರಾಮಪಂಚಾಯ್ತಿ ಪಿಡಿಒ ಕ್ರಮ ಕೈಗೊಳ್ಳದೇ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈಕಾರಣ ಇಡೀ ಗ್ರಾಮದವರು ಗ್ರಾಮವನ್ನೇ ಬಂದ್ ಮಾಡಿ ಗ್ರಾಮಪಂಚಾಯ್ತಿಗೆ ಮುತ್ತಿಗೆ ಹಾಕಿ ಅನಿರ್ಧಿಷ್ಟಾವಧಿ ಪ್ರತಿಭಟನೆಗಿಳಿದಿದ್ದಾರೆ.
Advertisement