
Posted: November 29, 2020
ಕಾರವಾರ:- ಕಳೆದ ಒಂದು ತಿಂಗಳ ಹಿಂದೆ ಕಾರವಾರದ ಡ್ರೈವಿನ್ ಹೋಟಲ್ ನಲ್ಲಿ ಹೋಟೆಲ್ ಮಾಲೀಕ ನಿಲ್ಲಿಸಿದ್ದ ಬುಲೆಟ್ ಕಳ್ಳತನ ಮಾಡಿದ್ದ ಕಳ್ಳನನ್ನು ಕಾರವಾರ ನಗರ ಪೊಲಿಸರು ಇಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿಕಾರಿಪುರ ಮೂಲದ ಸೈಯದ್ ಇಸ್ರಾರ್ ಎಂಬ ವ್ಯಕ್ತಿಯೇ ಬಂಧಿತನಾದವನಾಗಿದ್ದು.ಈ ಹಿಂದೆ ಮುಂಡಗೋಡಿನ ಅರಣ್ಯ ಇಲಾಖೆ ಪ್ರಕರಣದಲ್ಲಿ ಬಂಧಿಯಾಗಿದ್ದ ಈತನಿಗೆ ಕೋವಿಡ್ ಪಾಸಿಟಿವ್ ಬಂದಿದ್ದರಿಂದ ಕಾರವಾರದ ಕೋವಿಡ್ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೇ ಅಲ್ಲಿಂದ ತಪ್ಪಿಸಿಕೊಂಡ ಈತ ಪರಾರಿಯಾಗಲು ಬೀಚ್ ಬಳಿ ಇರುವ ಡ್ರೈವಿನ್ ಹೋಟಲ್ ನ ಮಾಲೀಕನ ಬೈಕ್ ಕದ್ದಿದ್ದ.ಇದಲ್ಲದೇ ಬೈಕ್ ನ ಬಣ್ಣ,ಆಕಾರ ಬದಲಿಸಿ ತಾನು ಬಳಕೆ ಮಾಡಿಕೊಳ್ಳುತಿದ್ದ.ಈ ಕುರಿತು ತನಿಖೆ ಕೈಗೊಂಡ ಕಾರವಾರ ನಗರದ ಸಿಪಿಐ ಸಂತೋಷ್ ನೇತ್ರತ್ವದ ತಂಡ ಕಳ್ಳನನ್ನು ಹಿಡಿದು ಹೆಡೆಮುರಿ ಕಟ್ಟಿದ್ದಾರೆ.

Posted: November 29, 2020
ಶಿರಸಿ:-ಸೊಸೆ ಮಹಿಳಾ ಸಂಘಕ್ಕೆ ಸೇರಿದ್ದಾಳೆ ಎಂಬ ಕಾರಣದಿಂದ ಅತ್ತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಸಂಜೆ ಶಿರಸಿಯ ಮಾರುತಿ ಗಲ್ಲಿಯಲ್ಲೊ ನಡೆದಿದೆ.ಪುಷ್ಪ ರಂಗಸ್ವಾಮಿ ಮರಾಟೆ ಆತ್ಮಹತ್ಯೆ ಮಾಡಿಕೊಂಡ ವೃದ್ಧೆಯಾಗಿದ್ದು,ಇಂದು ಬೆಳಗ್ಗೆ ಸೊಸೆ ಹಾಗೂ ಮಗನೊಂದಿಗೆ ಸೊಸೆ ಮಹಿಳಾ ಸಂಘಕ್ಕೆ ಸೇರುವ ಕುರಿತು ಜಗಳವಾಡಿದ್ದು ನಂತರ ಅತ್ತೆ ಪುಷ್ಪ ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಘಟನೆ ಸಂಬಂಧಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.

Posted: November 30, 2020
ಸಾಗರ:- ಹಲವು ತಿಂಗಳಿಂದ ಸಾಗರ,ತುಮರಿ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಕಳ್ಳತನ ಮಾಡುತಿದ್ದ ಮನೆಕಳ್ಳರನ್ನು ಸಾಗರ ಗ್ರಾಮಾಂತರ ಪೊಲೀಸರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಗರ ನಗರ, ತುಮರಿ ಹಾಗೂ ಆನಂದ ಪುರದಲ್ಲಿ 9 ಕಡೆ ಮನೆಗಳ್ಳತನ ಮತ್ತು ಬೈಕ್ ಕಳವು ನಡೆಸಿ ಪರಾರಿಯಾಗಿದ್ದ ಆರೋಪಿಗಳನ್ನು ಹಿಡಿಯಲು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ ಶಾಂತರಾಜು, ಹೆಚ್ಚುವರಿ ಜಿಲ್ಲರಕ್ಷಣಾಧಿಕಾರಿ ಡಾ.ಹೆಚ್.ಟಿ.ಶೇಖರ್ ಹಾಗೂ ಸಾಗರದ ಪೊಲೀಸ್ ಉಪಾಧೀಕ್ಷಕ ವಿನಾಯಕ ಶೆಟಗೇರಿ ಅವರ ಮಾರ್ಗದರ್ಶನದಲ್ಲಿ ಸಾಗರ ಗ್ರಾಮಾಂತರ ಠಾಣೆಯ ಪಿಎಸ್ಐ ಭರತ್ ಕುಮಾರ್ ಡಿ.ಆರ್. ಸಿಬ್ಬಂದಿಗಳಾದ ಶೇಖ್ ಫೈರೋಜ್, ಸಂತೋಷ್ ನಾಯ್ಕ್, ಹಜರತ್ ಅಲಿ, ಅಶೋಕ್, ರವಿ ಕುಮಾರ್, ಕಾಳನಾಯ್ಕ್ ಲಕ್ಷ್ಮಣ ಇವರುಗಳ ತಂಡವೊಂದನ್ನ ರಚಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ ತಂಡ ಶಿವಮೊಗ್ಗ ಅಶೋಕ ನಗರದ ನಿವಾಸಿ ನದೀಂ ಯಾನೆ ನದ್ದು (26), ಇಲಿಯಾಜ್ ಯಾನೆ ಇಲ್ಲು ಇವರನ್ನ ಬಂಧಿಸಿದ್ದಾರೆ. ಬಂಧಿತರಿಂದ 2.25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 25 ಸಾವಿರ ರೂ.ವಿನ ಬೈಕ್ 20 ಸಾವಿರ ರೂ.ವಿನ ಟಿ.ವಿಎಸ್ ಮೊಪೆಡ್…

Posted: November 30, 2020
ಅಂಬಟೆಮರ ಹೆಸರು ಕೇಳದವರಿಲ್ಲ.ಮಲೆನಾಡು ಭಾಗದಿಂದ ಹಿಡಿದು ಕರಾವಳಿ ಉದ್ದಕ್ಕೂ ಇದು ಹಚ್ಚ ಹಸಿರಿನಿಂದ ಬೆಳೆಯುತ್ತದೆ.ಇದರ ಕಾಯಿ,ಹಣ್ಣು,ತೊಗಟೆಗಳಲ್ಲಿ ಔಷಧೀಯ ಗುಣಗಳು ಹೇರಳವಾಗಿವೆ. ಇಂಗ್ಲಿಷ್ ನಲ್ಲಿ Great hog plum ಎಂದು ಕರೆಸಿಕೊಳ್ಳುವ ಇದು ಸಸ್ಯ ಶಾಸ್ತ್ರದಲ್ಲಿ Spondias pinnata (L.f) Kurz ಎಂದು ಕರೆಯಲಾಗುತ್ತದೆ. Anacardiacceae ಎಂಬ ಕುಟುಂಬಕ್ಕೆ ಸೇರಿದೆ. ಉಪಯೊಗ:-ಇದರ ಕಾಯಿಗಳು ಉಪ್ಪಿನಕಾಯಿ,ಅಡುಗೆಯಲ್ಲಿ ಬಳಕೆ,ಇತರ ವ್ಯಂಜನಗಳಿಗೂ ಯೋಗ್ಯವಾಗಿದೆ. ಇದು ಜೀರ್ಣಾಂಗವ್ಯೂಹದ ಆರೋಗ್ಯಕ್ಕೆ ಒಳ್ಳೆಯದು,ಎಲೆ,ಹೂಗಳು ರುಚಿಕರ ಅಡುಗೆ ದ್ರವ್ಯಗಳು.ಗಂಟಲು,ಕಿವಿ,ಮೂಗು,ಕಣ್ಣುಗಳ ತೊಂದರೆಗಳಿಗೆ ಪರಿಣಾಮಕಾರಿ ಮದ್ದು.ಬೆಂಕಿ ಹುಣ್ಣು,ಫೈತ್ತಿಕವ್ರಣ,ವುಷವ್ರಣಗಳು,ಚರ್ಮದ ವರ್ಣ ರಾಹಿತ್ಯಗಳಿಗೆ ಇವುಗಳ ಎಲೆ ,ತೊಗಟೆಗಳು ಉಪಯುಕ್ತವಾಗಿದೆ.ಸ್ತ್ರೀರೋಗಗಳಿಗೆ ತೊಗಟೆ ಮತ್ತು ಬೇರುಗಳು ಒಳ್ಳೆಯ ಔಷಧಗಳಾಗಿದೆ.ಜಾನುವಾರುಗಳ ಹಾಗೂ ಕರುಗಳಿಗೆ ವಿಶೇಷ ಔಷಧವಾಗಿ ಬಳಕೆ ಆಗುತ್ತದೆ.ಕರಾವಳಿಯಲ್ಲಿ ಆಯುರ್ವೇದದ ಅಂಬಷ್ಟವಾಗಿ ಪ್ರಸಿದ್ಧ. ಇಡೀ ಏಷ್ಯ ಭಾಗದಲ್ಲಿ ಪಸರಿಸಿರುವ ಈ ಸಸ್ಯಗಳಲ್ಲಿ ಹಲವಾರು ಒಳ ಪ್ರಬೇದಗಳು ಸಹ ಇವೆ.ಪ್ರಮುಖವಾಗಿ ಬಿಳಿ,ಕಾರೆ,ಕಾಡು-ಮೂರು ಭೇದಗಳು. ದೇಹದ ಕೈಕಾಲುಗಳ ಅವಶತೆ,ಬಲಹೀನತೆ ಗೆ ಔಷಧವಾಗಿದ್ದು ಅಂಬಟೆ ಎಲೆ ಹಾಗೂ ಹುಣಸೆ ಎಲೆಗಳನ್ನು ಹಾಕಿ ಬೇಯಿಸಿದ ನೀರಿನಲ್ಲಿ ತಣಿಸಿ ಅದರಲ್ಲಿ…

Posted: November 30, 2020
ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಹಳ್ಳಿ ಫೈಟ್ ಗೆ ದಿನಾಂಕ ಯಾವಾಗ ಎನ್ನುವ ಕುತೂಹಲ ಬಹುತೇಕರಲ್ಲಿತ್ತು. ಆದರೆ ಇಂದು ಕೊನೆಗೂ ಚುನಾವಣಾ ಆಯೋಗ ಮೂಹುರ್ತ ಫಿಕ್ಸ್ ಮಾಡಿದ್ದು, ಚುನಾವಣೆ ದಿನಾಂಕಕ್ಕೆ ಎದುರು ನೋಡುತ್ತಿದ್ದವರ ಸಂತಸಕ್ಕೆ ಕಾರಣವಾಗಿದೆ ಡಿಸೆಂಬರ್ ಅಂತ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ. 113 ತಾಲ್ಲೂಕುಗಳಲ್ಲಿನ ಗ್ರಾಮ ಪಂಚಾಯಿತಿಗಳಿಗೆ ಮೊದಲ ಹಂತದ ಚುನಾವಣೆ ಡಿ. 22ರಂದು ನಡೆಯಲಿದೆ. ಡಿ. 27ರಂದು ಉಳಿದ ತಾಲ್ಲೂಕುಗಳಲ್ಲಿನ ಗ್ರಾಮ ಪಂಚಾಯಿತಿಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 7ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ರಾಜ್ಯದ ಒಟ್ಟು 5,762 ಗ್ರಾಮ ಪಂಚಾಯಿತಿಗಳ 45128 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕೆಲವು ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ. ನ.30 ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ, ಡಿ. 11 ನಾಮಪತ್ರ ಸಲ್ಲಿಸಲು ಕೊನೆಯ ದಿನ. ಡಿ. 14 ನಾಮಪತ್ರ ವಾಪಸ್ ಪಡೆದುಕೊಳ್ಳಲು ಕೊನೆಯ ದಿನವಾಗಿದೆ. ಡಿ. 30ರಂದು ಫಲಿತಾಂಶ…