For the best experience, open
https://m.kannadavani.news
on your mobile browser.
Advertisement

Kumta| ಮೆಕ್ಕೆಜೋಳ ,ಡ್ರಾಗನ್ ಪ್ರೂಟ್ ನಲ್ಲಿ ಅರಳಿದ ಗ್ರಾಮ ದೇವತೆ ಶ್ರೀ ಶಾಂತಿಕಾ ಪರಮೇಶ್ವರಿ

ಕಾರವಾರ:- ಕುಮಟಾ ಪಟ್ಟಣದ (kumta) ಅಧಿದೇವತೆ ದೇವರಹಕ್ಕಲದ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಹೂವಿನ ಪೂಜೆ ವಿಜೃಂಭಣೆಯಿಂದ ಸಂಪನ್ನಗೊಂಡಿತು.
11:08 PM Sep 27, 2024 IST | ಶುಭಸಾಗರ್
kumta  ಮೆಕ್ಕೆಜೋಳ  ಡ್ರಾಗನ್ ಪ್ರೂಟ್ ನಲ್ಲಿ ಅರಳಿದ ಗ್ರಾಮ ದೇವತೆ ಶ್ರೀ ಶಾಂತಿಕಾ ಪರಮೇಶ್ವರಿ
Kumta| ಮೆಕ್ಕೆಜೋಳ ,ಡ್ರಾಗನ್ ಪ್ರೂಟ್ ನಲ್ಲಿ ಅರಳಿದ ಗ್ರಾಮ ದೇವತೆ ಶ್ರೀ ಶಾಂತಿಕಾ ಪರಮೇಶ್ವರಿ

ಕಾರವಾರ:- ಕುಮಟಾ ಪಟ್ಟಣದ (kumta) ಅಧಿದೇವತೆ ದೇವರಹಕ್ಕಲದ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಹೂವಿನ ಪೂಜೆ ವಿಜೃಂಭಣೆಯಿಂದ ಸಂಪನ್ನಗೊಂಡಿತು.

Advertisement

ದೇವರಹಕ್ಕಲದಲ್ಲಿ ನೆಲೆಸಿರುವ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಹೂವಿನ ಪೂಜೆ ನಿಮಿತ್ತ ಶ್ರೀ ದೇವಿಗೆ ಈಬಾರಿ ಡ್ರಾಗನ್ ಫ್ರೂಟ್ ( Dragon Fruit) ಜೊತೆ ಮೆಕ್ಕೆ ಜೋಳದ ಅಲಂಕಾರ ವಿಶೇಷವಾಗಿದ್ದು ಒಟ್ಟು ಮೂರು ಲಕ್ಷದಷ್ಟು ಹೂವಿನ ವೆಚ್ಚಕ್ಕೆ ಭರಿಸಲಾಗಿದೆ.

ದೇವಿಗೆ ಮಾಡಲಾದ ಪುಷ್ಪಾಲಂಕಾರ ಅತೀ ಸುಂದರವಾಗಿ ಕಾಣುತ್ತಿರುವುದರಿಂದ ಅಲಂಕಾರಭೂಷಿತ ದೇವಿಯ ದರ್ಶನ ಪಡೆಯಲು ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ, ದೇವಿಗೆ ಹಣ್ಣು-ಕಾಯಿ ಸೇವೆ ಸಲ್ಲಿಸಿದ ಭಕ್ತರು ಇಷ್ಠಾರ್ಥ ಸಿದ್ಧಿಸುವಂತೆ ಪ್ರಾರ್ಥಿಸಿದರು.

ಮುತ್ತೈದೆಯರು ದೇವಿಗೆ ಉಡಿ ತುಂಬಿ ಅರಿಶಿಣ-ಕುಂಕುಮ ಸೇವೆ ಗೈದರು. ರಾತ್ರಿ ನಡೆದ ಮಹಾ ಮಂಗಳಾರತಿ ಪೂಜೆ ಅದ್ಧೂರಿಯಾಗಿ ಸಂಪನ್ನಗೊಂಡಿತು. ಬಳಿಕ ತೀರ್ಥಪ್ರಸಾದ ವಿತರಣೆ ಮಾಡಲಾಯಿತು.

ವಿಡಿಯೋ ನೋಡಿ:-

ಈ ದೇವಿಯು ಹೂವಿನ ಪ್ರಸಾದಕ್ಕೆ ಹೆಚ್ಚು ಜನಪ್ರಿಯವಾಗಿದ್ದು , ದೇವಿಯಲ್ಲಿ ಬೇಡಿಕೆಯಿಟ್ಟು ಬರುವ ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಸಾದ ಕೇಳುತ್ತಾರೆ. ಪ್ರಾಸಾದ ನೀಡಿದಲ್ಲಿ ಕಾರ್ಯ ಸಿದ್ದಿಯಾಗುವ ನಂಬಿಕೆ ಇದ್ದು ಪ್ರತಿ ವರ್ಷ ಭಕ್ತರಿಂದಲೇ ಹೂವಿನ ಅಲಂಕಾರ ಸೇವೆ ವೈಭವದಿಂದ ನಡೆದುಕೊಂಡು ಬರುತ್ತಿದೆ.

ಇದನ್ನೂ ಓದಿ:- ಕಳೆದ ವರ್ಷ ಹೇಗಿತ್ತು ಇಲ್ಲಿದೆ ನೋಡಿ.

ಕುಮಟಾ ಶಾಂತಿಕಾ ಪರಮೇಶ್ವರಿ ವಿಶೇಷ ಹೂವಿನ ಅಲಂಕಾರದ ಸೊಬಗು ನೋಡಿ

Advertisement
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ