Siddapura :ವೈದ್ಯನ ನಿರ್ಲಕ್ಷ ಬಾಳಂತಿ ಸಾವು ಆಸ್ಪತ್ರೆ ಎದುರು ಸಾರ್ವಜನಿಕರ ಪ್ರತಿಭಟನೆ ಏನಿದು ಘಟನೆ?
Siddapura news 08 November 2024 :- ವೈದ್ಯರ ನಿರ್ಲಕ್ಷದಿಂದ ಗೃಹಿಣಿ ಸಾವಾದ ಹಿನ್ನಲೆಯಲ್ಲಿ ಸರ್ಕಾರಿ ಆಸ್ಪತ್ರೆ ಎದುರು ಶವ ವಿಟ್ಟು ಸಾರ್ವಜನಿಕರು ಹಾಗೂ ಕುಟುಂಬಸ್ತರು ಪ್ರತಿಭಟನೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದಿದೆ.
ಹಾರ್ಸಿಕಟ್ಟಾ ಕೋಣೆಗದ್ದೆಯ ಜ್ಯೋತಿ ರವಿ ನಾಯ್ಕ ಮೃತಪಟ್ಟ ಮಹಿಳೆಯಾಗಿದ್ದಾರೆ.
ಘಟನೆ ಏನು?
ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಕೋಣೆಗದ್ದೆಯ ಜ್ಯೋತಿ ರವಿ ನಾಯ್ಕ(36 ವರ್ಷ) ಅನ್ನೋ ಮಹಿಳೆ ನವೆಂಬರ್ 4 ರಂದು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾಗಿದ್ರು. ನವೆಂಬರ್ 4 ರಂದು ಸಿಸೇರಿಯನ್ ಮೂಲಕ ಡಾ. ರವಿರಾಜ ಚಿಕಿತ್ಸೆ ನೀಡಿದ್ದರು.
ನಂತರ ಮಹಿಳೆಗೆ ರಕ್ತಸ್ರಾವ ಪ್ರಾರಂಭವಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಹಿಳೆಯನ್ನ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದ್ರೆ ಸಿಸೇರಿಯನ್ ಮಾಡುವಾಗ ಅಚಾತುರ್ಯದಿಂದ ಬೇರೆ ಯಾವುದೋ ನರವನ್ನ ಕತ್ತರಿಸಿದ್ದರಿಂದ ರಕ್ತಸ್ರಾವ ಉಂಟಾಗಿದೆ ಅನ್ನೋ ಆರೋಪ ಕೇಳಿಬಂದಿತ್ತು. ಚಿಕಿತ್ಸೆ ಫಲಿಸದೆ ಮಹಿಳೆ ಇಂದು ಮೃತಪಟ್ಟಿದ್ದಾರೆ.
ಇದೀಗ ಮಹಿಳೆಯ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಮಹಿಳೆಯ ಶವವನ್ನ ಸಿದ್ದಾಪುರ ಸರ್ಕಾರಿ ಆಸ್ಪತ್ರೆ ಎದುರು ಇಟ್ಟು ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ:-Siddapura : ಭತ್ತದ ಗದ್ದೆಗೆ ದಾಳಿ ಮಾಡಿದ ಒಂಟಿ ಸಲಗ
ಆದ್ರೆ ಇಂತಹ ಘಟನೆ ನಡೆತಿರೋದು ಇದು ಮೊದಲಲ್ಲ. ಈ ಒಂದು ವಾರದಲ್ಲೇ 2 ಮಹಿಳೆಯರು ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದಾರೆ ಅನ್ನೋ ಆರೋಪವಿದೆ.
ವಾರದ ಹಿಂದೆ ಕೂಡ ಸಿದ್ದಾಪುರ ಹೊಸೂರಿನ ವಿನೋದಾ ರಾಘವೇಂದ್ರ ನಾಯ್ಕ(30 ವರ್ಷ) ಅನ್ನೋ ಮಹಿಳೆ ಕೂಡ ಇದೇ ಕಾರಣದಿಂದ ಮೃತಪಟ್ಟಿದ್ದರು.
ವೈದ್ಯರ ನಿರ್ಲಕ್ಷ್ಯದಿಂದಾಗಿ ಸರಣಿ ಬಾಣಂತಿ ಮಹಿಳೆಯರು ಮೃತಪಟ್ಟಿದ್ದರು. ಕಳೆದ ಒಂದು ವಾರದಲ್ಲಿ 2 ಮಹಿಳೆಯರು ಇದೆ ರೀತಿ ಸಾವನ್ನಪ್ಪಿದ್ದು ಸಾರ್ವಜನಿಕರನ್ನ ರೊಚ್ಚಿಗೆಬ್ಬಿಸಿತ್ತು. ಕಳೆದ 7 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರೋ ಡಾ. ರವಿರಾಜ್ ಸೇವಾವಧಿಯಲ್ಲಿ ಹಲವಾರು ಘಟನೆಗಳು ನಡೆದಿವೆ.
ಇದನ್ನೂ ಓದಿ:-Siddapura: ಶಾಲಾ ವಿದ್ಯಾರ್ಥಿಗೆ ಥಳಿಸಿ ಅರ್ಧ ದಾರಿಯಲ್ಲೇ ಇಳಿಸಿದ ನಿರ್ವಾಹಕ!
ಅದೂ ಅಲ್ಲದೇ ಸಾರ್ವಜನಿಕರಿಂದ ಹಣ ಪಡೆದು ಚಿಕಿತ್ಸೆ ನೀಡುತ್ತಿದ್ದಾರೆ ಅನ್ನೋ ಆರೋಪ ಕೂಡ ಇವರ ವಿರುದ್ಧ ಕೇಳಿಬಂದಿದೆ. ಆಸ್ಪತ್ರೆ ಅವಧಿಯಲ್ಲಿ ರೋಗಿಗಳನ್ನ ಸರಿಯಾಗಿ ನೋಡದೆ, ಆಸ್ಪತ್ರೆ ಮುಗಿದ ನಂತರ ಕ್ಲಿನಿಕ್ ಗೆ ಬನ್ನಿ ಅನ್ನೋ ಉಡಾಫೆಯ ಮಾತುಗಳನ್ನ ಕೂಡ ಈ ವೈದ್ಯ ದಂಪತಿ ಹೇಳುತ್ತಾರೆ ಅನ್ನೋ ಆರೋಪ ಸಾರ್ವಜನಿಕರದ್ದು .
ವೈದ್ಯರನ್ನ ಅಮಾನತ್ತು ಮಾಡುವಂತೆ ಹಾಗೂ ಮೃತ ಮಹಿಳೆಯ ಕುಟುಂಬಕ್ಕೆ 25 ಲಕ್ಷ ರೂಪಾಯಿ ನೀಡಬೇಕು ಅಂತ ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದರು.
ಸ್ಥಳಕ್ಕೆ ಬಂದ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಎಸಿ ಕ್ರಮ ಕೈಗೊಳ್ಳುವ ಭರವಸೆ ಜೊತೆ ಪರಿಹಾರ ನೀಡುವ ಭರವಸೆ ನೀಡಿದಮೇಲೆ ರಾತ್ರಿ ಶವವನ್ನು ಕುಟುಂಬದವರು ಆಸ್ಪತ್ರೆ ಆವರಣದಿಂದ ಕೊಂಡೊಯ್ದರು.
Feed: invalid feed URL