Karwar ದಲ್ಲಿ ಒಬ್ಬ ಸೈಕೋ ವೈದ್ಯ ವಾರ್ಡ ನಲ್ಲೇ ಒಣಗಿಸ್ತಾನೆ ಒಳ ವಸ್ತ್ರ!

ಇದನ್ನೂ ಓದಿ:-Deepavali ಗೆ ಖರ್ಚು ಹೆಚ್ಚಾಯ್ತಾ? ಕಾರವಾರದಲ್ಲಿ ಸಿಗುತ್ತೆ ಕಮ್ಮಿ ಬೆಲೆಗೆ ಗುಣಮಟ್ಟದ ವಸ್ತುಗಳು ವಿವರ ನೋಡಿ.

Karwar news 30 October 2024 :-ವೈದ್ಯೋ ನಾರಯಣೋ ಹರಿ ಅಂತಾರೆ.ಆದ್ರೆ ಇಲ್ಲೊಬ್ಬ ವೈದ್ಯ ಆಟಾಟೋಪ ನೋಡಿದ್ರೆ ಸಿಬ್ಬಂದಿಳು ಹಾಗೂ ಬರುವ ರೋಗಿಗಳು ಸಹ ಭಯ ಬೀಳ್ತಾರೆ.
ಹೌದು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ತಾಲೂಕಿನ ಅಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ಅವಿನಾಶ್ ನಾಯಕ್ ಎಂಬ ವೈದ್ಯನ ಸೈಕೋ ಮನಸ್ತಿತಿಯ ಆಟಾಟೋಪಕ್ಕೆ ಜನರೊಬ್ಬರೇ ಅಲ್ಲ ಕುದ್ದು ಸಿಬ್ಬಂದಿಗಳು ಹಾಗೂ ಮೇಲಾಧಿಕಾರಿಗಳು ಸಹ ಬೆಸ್ತು ಬಿದ್ದಿದ್ದಾರೆ.
ಇದನ್ನೂ ಓದಿ:-Karwar ಶಾಸಕ ಸತೀಶ್ ಸೈಲ್ ಪರ ನಿಂತ ಮಾಜಿ ಸಚಿವ ಅಸ್ನೋಟಿಕರ್ ಹೇಳಿದ್ದೇನು ವಿಡಿಯೋ ನೋಡಿ.
ಈತ ಬಂದ ರೋಗಿಗಳಿಗೆ ಚಿಕಿತ್ಸೆ ನೀಡಬೇಕು ಎಂದರೇ ಆತನ ಟೇಬಲ್ ಮೇಲೆ ಮನುಷ್ಯನ ತಲೆ ಬುರಡೆ ಜೊತೆ ಡಂಬಲ್ಸ್ ಇರಬೇಕು.
ಒಂದ ರೋಗಿಗಿಗಳಿಗೆ ಬುರುಡೆ ತೋರಿಸಿ ಚಿಕಿತ್ಸೆ ನೀಡುತ್ತಾನೆ. ಇನ್ನು ಮಹಿಳಾ ವಾರ್ಡ ನನ್ನೇ ಕಾಯಂ ನಿವಾಸವಾಗಿ ಮಾಡಿಕೊಂಡಿರುವ ಈತ ಮಹಿಳಾ ವಾರ್ಡ ನಲ್ಲಿ ತನ್ನ ಒಳುಡುಪುಗಳನ್ನು ಒಣಗಿಸಿ ಸಿಬ್ಬಂದಿಗಳಿಗೆ ಕಿರಿಕಿರಿ ಮಾಡುತ್ತಾನೆ.
ಏನೇನೋ ಮಾತನಾಡುವ ಈತನ ಕಿರಿಕಿರಿಗೆ ಬೇಸತ್ತ ಸಿಬ್ಬಂದಿ ತಾಲೂಕು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:-Karwar:ಅರಣ್ಯ ಇಲಾಖೆ ನಿರ್ಲಕ್ಷ ದಿಕ್ಕು ಕಳೆದುಕೊಂಡ ಕಾಂಡ್ಲಾ ನಡಿಗೆ ಪಥ!
ಈತನ ಹುಂಬತನ ,ಸೈಕೋ ಮನಸ್ತಿತಿ ಹೇಗಿದೆ ಎಂದರೇ ತನಿಖೆಗೆ ಬರುವ ಅಧಿಕಾರಿಗಳ ವಿರುದ್ದವೇ ವಾಟ್ಸ್ ಅಪ್ ಸ್ಟೇಟಸ್ ಹಾಗಿ ಧಮ್ಕಿ ಕೊಡ್ತಾನೆ.
ಇನ್ನು ಆಸ್ಪತ್ರೆ ಯಲ್ಲಿ ಶುಚಿತ್ವ ಇಲ್ಲ, ಕರ್ತವ್ಯಕ್ಕೂ ಸರಿಯಾಗಿ ಬರದೇ ಬೇಕಾಬಿಟ್ಟಿಯಾಗಿ ಆಸ್ಪತ್ರೆಯಲ್ಲಿ ವರ್ತಿಸುತ್ತಾನೆ.
ಹೀಗಾಗಿ ಈ ಆಸ್ಪತ್ರೆಗೆ ಇತರೆ ವೈದ್ಯರೂ ಬರುತ್ತಿಲ್ಲ.ಇದಲ್ಲದೇ ಎಷ್ಟೇ ಬಾರಿ ಜಿಲ್ಲಾ ಆರೋಗ್ಯಾಧಿಕಾರಿಗಳು ನೊಟಿಸ್ ನೀಡಿ ಎಚ್ಚರಿಕೆ ನೀಡಿದರೂ ಆತ ಮಾತ್ರ ಬದಲಾಗಿಲ್ಲ.
ಇದನ್ನೂ ಓದಿ:-Kumta Breaking News :ಮದ್ಯದ ಅಮಲ್ಲಿ ಕೊಲೆ ಆರೋಪಿಗಳ ಬಂಧನ.
ಇನ್ನು ಈತನ ಕಾಟದಿಂದಾಗಿ ಮೇಲಾಧಿಕಾರಿಗಳು ಸಹ ಯಾವುದೆ ಕ್ರಮ ಕೈಗೊಳ್ಳದೇ ಸುಮ್ಮನಾಗಿದ್ದು ಇದೀಗ ಆತನೊಂದಿಗೆ ಕೆಲಸ ಮಾಡುವ ಸಿಬ್ಬಂದಿಗಳಿಗೂ ತಲೆನೋವಾಗಿ ಪರಿಣಮಿಸಿದೆ.
ಒಟ್ಟಿನಲ್ಲಿ ವೈದ್ಯನಾಗಿ ಹೇಗಿರಬೇಕು ಎಂಬುದನ್ನ ಮರೆತು ಕೆಟ್ಟ ವರ್ತನೆ ತೋರುತ್ತಾ ಇತರರಿಗೆ ಕಿರಿ ಕಿರಿ ಉಂಟುಮಾಡುತ್ತಿರುವ ಈ ಗುತ್ತಿಗೆ ವೈದ್ಯ ನ ಆಟಾಟೋಪಕ್ಕೆ ಯಾವಾಗ ಬ್ರೇಕ್ ಬೀಳಿತ್ತೆ ಎನ್ನುವುದು ಕಾದು ನೋಡಬೇಕಿದೆ.