Siddapura : ಮಿತಿಮೀರಿದ ಆನೆ ಹಾವಳಿ ಗದ್ದೆ,ಮನೆಗಳ ಬಳಿ ಪುಂಡಾಟ.
Siddapura News 09 November 2024:- ಉತ್ತರ ಕನ್ನಡ (uttra kannda) ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಸೂರಿನಲ್ಲಿ ಆನೆ ಹಾವಳಿ ಮಿತಿಮೀರಿದೆ.
ಕಾನಸೂರು ಗ್ರಾಮಪಂಚಾಯ್ತಿ ವ್ಯಾಪ್ತಿಯ ಗವಿನಗುಡ್ಡ ಗ್ರಾಮದ ಕಬ್ಬು ಹಾಗೂ ಭತ್ತದ ಹದ್ದೆಗೆ ದಾಳಿ ಇಟ್ಟು ಬೆಳೆ ನಾಶಮಾಡಿವೆ.
ಇದನ್ನೂ ಓದಿ:- Siddapura :ವೈದ್ಯನ ನಿರ್ಲಕ್ಷ ಬಾಳಂತಿ ಸಾವು ಆಸ್ಪತ್ರೆ ಎದುರು ಸಾರ್ವಜನಿಕರ ಪ್ರತಿಭಟನೆ ಏನಿದು ಘಟನೆ?
ಜೊತೆಗೆ ಗ್ರಾಮಗಳ ಮನೆಗಳ ಬಳಿಯೇ ಆನೆ ಓಡಾಡುತಿದ್ದು ಜನರಿಗೆ ಭಯ ಹುಟ್ಟಿಸಿದೆ. ಕಳೆದ ಮೂರ್ನಾಲ್ಕು ದಿನದಿಂದ ಈ ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದು ಆನೆಗಳನ್ನು ಓಡಿಸುವಂತೆ ಮನವಿ ಮಾಡಿದ್ದಾರೆ.
ಪುಂಡಾಟ ಜೋರು.

ಕಳೆದ ಒಂದು ವಾರದಿಂದ ಯಲ್ಲಾಪುರ ಭಾಗದ ಅರಣ್ಯದಿಂದ ಸಿದ್ದಾಪುರ ಭಾಗದ ಅರಣ್ಯ ಭಾಗದಲ್ಲಿ ಬಂದಿರುವ ಆನೆಗಳ ಹಿಂಡು ತನ್ನ ಕಾರಿಡಾರ್ ಮೂಲಕ ಮುಂಡಗೋಡು ಭಾಗವನ್ನು ಸೇರಿ ನಂತರ ಇತರೆ ಭಾಗಕ್ಕೆ ಹೋಗುತ್ತವೆ .
ಹೀಗೆ ಮಾರ್ಗ ಮಧ್ಯದಲ್ಲಿ ಸಿದ್ದಾಪುರ ಭಾಗದ ಗ್ರಾಮದ ಮೂಲಕ ಹಾದು ಹೋಗುತ್ತವೆ ಹೀಗೆ ಹೋಗುವಾಗ ಹಲವು ಭಾಗದಲ್ಲಿ ದಾಂದಲೆ ನಡೆಸುತಿದ್ದು ಕಳೆದ ವರ್ಷ ಗುಂಪಾದ ಆನೆಗಳ ತಂಡ ದಾಳಿ ಇಟ್ಟಿದ್ದರೇ ಈ ಭಾರಿ ಒಂಟಿ ಸಲಗದ ಉಪಟಳ ಹೆಚ್ಚಾಗಿದೆ.
Feed: invalid feed URL