Joida|ರಾಮನಗರ -ಅನಮೋಡ್ ಹೆದ್ದಾರಿ ಭಾರಿ ವಾಹನ ಸಂಚಾರ ಮುಕ್ತ-ಡಿ.ಸಿ
Joida : ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರ-ಅನಮೋಡ ಹೆದ್ದಾರಿಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅನುಮತಿ ನೀಡಿ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾರವರು ಆದೇಶ ನೀಡಿದ್ದಾರೆ.
ಭಾರೀ ಮಳೆ(rain) ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 4Aರಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು.
ಇದನ್ನೂ ಓದಿ:-ರಾಮನಗರ-ಅನಮೋಡ್ ಗಡಿಯಲ್ಲಿ ನಿಷೇಧ ವಿದ್ದರೂ ಭಾರಿ ವಾಹನ ಸಂಚಾರ| ಅಧಿಕಾರಿಗಳಿಗೆ ಹಫ್ತ!
ಮಂಗಳವಾರ ಭಾರೀ ವಾಹನಗಳ ಸಂಚಾರಕ್ಕೆ
ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ.ಕೆ ರವರು ಶರತ್ತುಬದ್ದ ಆದೇಶ ಮಾಡಿದ್ದು, ರಾಮನಗರ-ಅನಮೋಡ್ ಹೆದ್ದಾರಿಯಲ್ಲಿ 40 ಕಿಮೀ ವೇಗದಲ್ಲಿ ಭಾರೀ ವಾಹನಗಳ ಸಂಚರುಸಬೇಕು,
ಹೆದ್ದಾರಿಯಲ್ಲಿ ವಾಹನಗಳ ವೇಗಮಿತಿ ಸೂಚನಾ ಫಲಕ ಅಳವಡಿಕೆ ಮಾಡಬೇಕು,24x7 ಪೊಲೀಸರನ್ನ ನಿಯೋಜಿಸಿ ಹೆದ್ದಾರಿ ಸಂಚಾರ ಸುಗಮಗೊಳಿಸಬೇಕು.
ಹೆದ್ದಾರಿಯಲ್ಲಿನ ಹೊಂಡಗಳನ್ನ ಸೆಪ್ಟೆಂಬರ್ 20ರೊಳಗೆ ಸರಿಪಡಿಸುವುದು ಕಡ್ಡಾಯವಾಗಿದ್ದು ,ಆನೆ ಸಂಚಾರದ ಅಂಡರ್‌ಪಾಸ್ ಸೇರಿ ಬಾಕಿ ಕಾಮಗಾರಿ ವೇಳೆ ವಾಹನ ಸಂಚಾರ ನಿರ್ಬಂಧಕ್ಕೆ ಎನ್.ಹೆಚ್.ಎ.ಐ ಧಾರವಾಡ ಯೋಜನಾ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.