Sirsi |ರಸ್ತೆಯಲ್ಲಿ ಹೋಗುತಿದ್ದ ಯುವತಿ ಕೈಹಿಡಿದು ಎಳೆದು ಅಸಭ್ಯ ವರ್ತನೆ ಯುವಕನ ಬಂಧನ
Sirsi |ರಸ್ತೆಯಲ್ಲಿ ಹೋಗುತಿದ್ದ ಯುವತಿ ಕೈಹಿಡಿದು ಎಳೆದು ಅಸಭ್ಯ ವರ್ತನೆ ಯುವಕನ ಬಂಧನ
Sirsi 22 October 2024 :- ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿಯ ಕೈ ಹಿಡಿದು ಎಳೆದು ಅಸಭ್ಯ ವರ್ತನೆ ತೋರಿದ ಯುವಕನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಶಿರಸಿಯಲ್ಲಿ ನಡೆದಿದೆ.
ಇದನ್ನೂ ಓದಿ:-Sirsi| ಅಮೇರಿಕ ಜರ್ಮನಿಯಲ್ಲಿ ವೃತ್ತಿ ಮಾಡಿದ ಇಂಜಿನಿಯರ್ ಕುಟುಂಬ ಕಲಹಕ್ಕೆ ಬೀದಿ ಪಾಲು!
ಬಿಸಲಕೊಪ್ಪ ಗ್ರಾ ಪಂ ವ್ಯಾಪ್ತಿಯ ಆನಗೋಡಕೊಪ್ಪದ ರಸ್ತೆಯಲ್ಲಿ ಯುವತಿ ನಡೆದು ಹೋಗುತ್ತಿದ್ದರು. ಆಗ ಬೈಕಿನಲ್ಲಿ ಬಂದ ದುಷ್ಟನೊಬ್ಬ ಯುವತಿಯ ಕೈ ಹಿಡಿದು ಎಳೆದಾಡಿದ್ದಾನೆ. ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಆಗ ಯುವತಿ ದೊಡ್ಡದಾಗಿ ಕೂಗಿಕೊಂಡಿದ್ದು, ಆತ ಬೈಕ್ ಬಿಟ್ಟು ಪರಾರಿಯಾಗಿದ್ದಾನೆ. ಈ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಜನ ಜಮಾಯಿಸಿದ್ದಾರೆ.
ಇದನ್ನೂ ಓದಿ:-Sirsi | ಕರ್ತವ್ಯದಲ್ಲಿ ಮದ್ಯ ಸೇವಿಸದ ಅಬಕಾರಿ ಚಾಲಕ| ಬುದ್ದಿ ಹೇಳಿದ ತಪ್ಪಿಗೆ ಆತ್ಮಹತ್ಯೆ ಬೆದರಿಕೆ
ಸುತ್ತಲು ಹುಡುಕಾಟ ನಡೆಸಿದಾಗ ಹಾವೇರಿ ಮೂಲದ ಕಾಮುಕ ಸಿಕ್ಕಿಬಿದ್ದಿದ್ದು, ಸ್ಥಳೀಯರು ಆತನನ್ನು ಪೊಲೀಸರಿಗೆ ಒಪ್ಪಿಸಿದರು. ಕೂಲಿ ಕೆಲಸಕ್ಕಾಗಿ ಬಾಳೆಕೊಪ್ಪಕ್ಕೆ ಬಂದಿದ್ದ ಆತ ತನ್ನ ಹೆಸರನ್ನು ಸರಿಯಾಗಿ ಹೇಳುತ್ತಿಲ್ಲ. ಪೊಲೀಸರು ಆತನನ್ನು ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.