ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Sirsi| ಅಮೇರಿಕ ಜರ್ಮನಿಯಲ್ಲಿ ವೃತ್ತಿ ಮಾಡಿದ ಇಂಜಿನಿಯರ್ ಕುಟುಂಬ ಕಲಹಕ್ಕೆ ಬೀದಿ ಪಾಲು!

ಶಿರಸಿ :- ಆತ ಉತ್ತಮ ವಿದ್ಯಾಭ್ಯಾಸ ಮಾಡಿ ಅಮೇರಿಕ ,ಜರ್ಮನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡಿದಾತ. ಇದೀಗ ವೃತ್ತಿಯಿಂದ ನಿವೃತ್ತನಾಗಿ ಶಿರಸಿಗೆ ಬಂದಾತ ಕುಟುಂಬ ಕಲಹ ಆತನನ್ನು ಸಂಪೂರ್ಣ ಅನಾಥನನ್ನಾಗಿ ಮಾಡಿದೆ.
09:49 PM Oct 15, 2024 IST | ಶುಭಸಾಗರ್

Sirsi| ಅಮೇರಿಕ ಜರ್ಮನಿಯಲ್ಲಿ ವೃತ್ತಿ ಮಾಡಿದ ಇಂಜಿನಿಯರ್ ಕುಟುಂಬ ಕಲಹಕ್ಕೆ ಬೀದಿ ಪಾಲ!

Advertisement

ಶಿರಸಿ :- ಆತ ಉತ್ತಮ ವಿದ್ಯಾಭ್ಯಾಸ ಮಾಡಿ ಅಮೇರಿಕ ,ಜರ್ಮನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡಿದಾತ. ಇದೀಗ ವೃತ್ತಿಯಿಂದ ನಿವೃತ್ತನಾಗಿ ಶಿರಸಿಗೆ ಬಂದಾತ ಕುಟುಂಬ ಕಲಹ ಆತನನ್ನು ಸಂಪೂರ್ಣ ಅನಾಥನನ್ನಾಗಿ ಮಾಡಿದೆ.

ಇದನ್ನೂ ಓದಿ:-SIRSI ಮಾರಿಕಾಂಬಾ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಇನ್ನುಮುಂದೆ ವಸ್ತ್ರ ಸಂಹಿತೆ ಜಾರಿ.

ಹೌದು ಶಿರಸಿಯ ರಮೇಶ್ ಪಾಡುರಂಗ ಪಾವಸ್ವರ (65)ಮನೆಯಿಲ್ಲದೇ ತಿನ್ನಲು ಆಹಾರ ಇರದೇ ಬೀದಿ ಸುತ್ತಿ ನೋವು ತೋಡಿಕೊಳ್ಳುತಿದ್ದ ಈತನಿಗೆ ಸಮಾಜ ಸೇವಕ ವಿಶುಶೆಟ್ಟಿ ಎಂಬುವವರು ಉಡುಪಿಯ ಬೈಲೂರಿನ ಹೊಸಬೆಳಕು ಆಶ್ರಮಕ್ಕೆ ದಾಖಲಿಸಿದ್ದಾರೆ.

Advertisement

ಶಿರಸಿಯವರಾದ ಇವರು 10ಕ್ಕೂ ಹೆಚ್ಚು ಭಾಷೆಗಳನ್ನು ಕರಗತ ಮಾಡಿಕೊಂಡ ಹಿರಿಯ ವ್ಯಕ್ತಿ ಇದೀಗ ಅಸಹಾಯಕರಾಗಿದ್ದಾರೆ,ಈ ಬಗ್ಗೆ ವಿಶುಶೆಟ್ಟಿ ವಿನಂತಿಗೆ "ಹೊಸಬೆಳಕು "ಆಶ್ರಮ ಆಶ್ರಯ ಕಲ್ಪಿಸಿದೆ. ತನ್ನ ಸಹೋದರಿ ವೈದ್ಯೆಯಾಗಿ ಸೇವೆ ಮಾಡುತ್ತಿರುವುದಾಗಿ ನೊಂದ ವ್ಯಕ್ತಿ ಮಾಹಿತಿ ನೀಡಿದ್ದಾರೆ.

ಕೌಟುಂಬಿಕ ಕಲಹದಿಂದಾಗಿ ಒಂಟಿಯಾಗಿ ಎಲ್ಲವನ್ನು ಕಳೆದುಕೊಂಡು ಆಶ್ರಯ ಇಲ್ಲದವನಾಗಿ ಈ ಪರಿಸ್ಥಿತಿ ಬಂದಿದೆ ಎಂದು ದುಃಖಿಸಿದ್ದಾರೆ ಸಂಬಂಧಿಕರು ಹೊಸಬೆಳಕು ಆಶ್ರಮ ಸಂಪರ್ಕಿಸಬಹುದಾಗಿದ್ದು
ಈ ಬಗ್ಗೆ ಉಡುಪಿ ನಗರ ಠಾಣೆಗೆ ಮಾಹಿತಿ ನೀಡಲಾಗಿದೆ.

Advertisement
Tags :
Healpold manSirsiUttra kannda newsಶಿರಸಿ
Advertisement
Next Article
Advertisement