ಭಟ್ಕಳದಲ್ಲಿ ರಂಗೇರಿದ ಜೂಜಾಟ:ರಾಜಕೀಯ ಮುಖಂಡರ ನೆರಳಲ್ಲಿ ಕಣ್ಣುಮುಚ್ಚಿ ಕುಳಿತ ಪೊಲೀಸರು!
ಕಾರವಾರ :- ದೀಪಾವಳಿ (deepavali) ಬಂತು ಎಂದರೇ ಹಬ್ಬದ ಜೊತೆ ಜೂಜಾಟ ಸಹ ರಂಗೇರುತ್ತದೆ. ಇತ್ತೀಚೆಗಷ್ಟೇ ಪೊಲೀಸರು ಇಸ್ಪೀಟ್ ,ಕೋಳಿ ಜೂಜಾಟ ಮಾಡಿದರೇ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೇನೋ ನೀಡಿದ್ದಾರೆ.ಆದ್ರೆ ಹಳಿಯಾಳ ,ಭಟ್ಕಳದಲ್ಲಿ ಯಾರ ಹೆದರಿಕೆಯೂ ಇಲ್ಲದೇ ಜೂಜಾಟಗಳು ನಡೆಯುತ್ತಿದೆ.
ಭಟ್ಕಳದ ಕಾಯ್ಕಿಣಿ ಬಸ್ತಿ ಜ್ಯೋತಿ ವೈನ್ಸ್ ಹಿಂಭಾಗ ಷಾಮಿಯಾನ ಹಾಕಿ ಜೂಜಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ . ಕೆಲವು ಪಕ್ಷದ ಮುಖಂಡರೇ ರಾಜಾರೋಷವಾಗಿ ಶಾಮಿಯಾನ ಹಾಕಿ ಇಸ್ಪೀಟ್ ,ಅಂದರ್ ಬಾಹರ್, ಕೋಳಿ ಜೂಜಾಟ ನಡೆಸಿದ್ರೆ ,ನೂರಾರು ಜನರು ಜಾತ್ರೆಯಂತೆ ಸೇರುವ ಮೂಲಕ ಆಟ ಆಡಿ ಹಣ ಕಳೆದುಕೊಳ್ಳುತಿದ್ದಾರೆ.
ಈ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ರೂ ರೈಡ್ ಮಾಡುವ ಗೋಜಿಗೆ ಮಾತ್ರ ಪೊಲೀಸರು (police) ಹೋಗದೇ ಪ್ರಭಾವಿಗಳ ಒತ್ತಡಕ್ಕೆ ಕಣ್ಮುಚ್ಚಿ ಕುಳಿತಿದ್ದು ಅಕ್ರಮ ಚಟುವಟಿಕೆಗೆ ದಾರಿ ಮಾಡಿಕೊಟ್ಟಿದ್ದಾರೆ.
ಇನ್ನು ಭಟ್ಕಳ ತಾಲೂಕಿನ ಚಿತ್ರಾಪುರ ಮುಖ್ಯರಸ್ತೆಯಲ್ಲೇ ಜೂಜಾಟ ನಡೆಯುತ್ತಿದೆ. ಇದಲ್ಲದೇ ಹಲವು ಕಡೆ ಸೆಣ್ಣ ಮಟ್ಟದ ಜೂಜು ಅಡ್ಡೆಗಳು ತೆರೆದಿದ್ದು ಜನರ ಜೇಬಿಗೆ ಕತ್ತರಿ ಹಾಕುತ್ತಿವೆ.
ಇನ್ನು ಜೂಜಾಟದ ಜೊತೆ ಮದ್ಯ,ಗಾಂಜಾ ಅಮಲು ಸಹ ತಳಕು ಹಾಕಿಕೊಂಡಿದ್ದು ಇನ್ನಾದರೂ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತದೆಯೇ ಅಥವಾ ಪ್ರಭಾವಿಗಳ ಪ್ರಭಾವಕ್ಕೆ ಸುಮ್ಮನಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಶಿರಸಿಯ ನಗರ ಠಾಣೆ ವ್ಯಾಪ್ತಿಯ ಡ್ರೈವರ್ ಕಟ್ಟಾ ಸಂತೆ ಮಾರುಕಟ್ಟೆಯಲ್ಲಿ ಅಂದರ್ ಬಾಹರ್ ಆಡುತಿದ್ದ ನಾಲ್ಕು ಜನರನ್ನು ಬಂಧಿಸಿ ಅಲ್ಪ ಮೊತ್ತದ ಹಣ ,ಇಸ್ಪಿಟ್ ಎಲೆಗಳನ್ನು ವಶಕ್ಕೆ ಪಡೆಯಲಾಗಿದೆ.ಘಟನೆ ಸಂಬಂಧ ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:- (ಫೋಟೋದ ಮೇಲೆ ಕ್ಲಿಕ್ ಮಾಡಿ)
