ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

bhatka:ಆರು ಜನ ಭಯೋತ್ಪಾದಕರ ಬಂಧನ| ಮುರುಡೇಶ್ವರದಲ್ಲಿ ಬಾಂಬ್ ಇಡಲು ಬಂದವರು ಸಹ ವಶಕ್ಕೆ

bhatkal ಆರು ಜನ ಭಯೋತ್ಪಾದಕರ ಬಂಧನ| ಮುರುಡೇಶ್ವರದಲ್ಲಿ ಬಾಂಬ್ ಇಡಲು ಬಂದವರು ಸಹ ವಶಕ್ಕೆ
07:29 PM Oct 17, 2024 IST | ಶುಭಸಾಗರ್

bhatkal ಆರು ಜನ ಭಯೋತ್ಪಾದಕರ ಬಂಧನ| ಮುರುಡೇಶ್ವರದಲ್ಲಿ ಬಾಂಬ್ ಇಡಲು ಬಂದವರು ಸಹ ವಶಕ್ಕೆ

Advertisement

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ
ಭಟ್ಕಳ ಕರಾವಳಿ ಕಾವಲು ಪಡೆ ಪೊಲೀಸ್ ಠಾಣೆಯವರು (Coastal security police)
ನಡೆಸಿದ ಕಾರ್ಯಾಚರಣೆಯಲ್ಲಿ ಆರು ಜನ ಭಯೋತ್ಪಾದಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದಲ್ಲದೇ ಮುರುಡೇಶ್ವರ ದೇವಸ್ಥಾನದಲ್ಲಿ ಸಮುದ್ರ ಮಾರ್ಗವಾಗಿ ಬಾಂಬ್ ಇಡಲು ಬಂದಿದ್ದ ನಾಲ್ಕು ಜನ ಭಯೋತ್ಪಾದಕರನ್ನು ಕರಾವಳಿ ಕಾವಲು ಪೊಲೀಸರು ಬಂಧಿಸಿದ್ದಾರೆ.

ಹೌದು ಇದು ನಿಜ ಎಂದು ಹೆದರಬೇಡಿ. ಇದು ಅಣಕು ಕಾರ್ಯಾಚರಣೆ ಅಷ್ಟೇ. ರಾಜ್ಯದ ಸೂಷ್ಮ ಪ್ರದೇಶದಲ್ಲಿ ಒಂದಾದ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿ ವರ್ಷ ಸಾಗರ ಕವಚ್ ಅಣುಕು ಕಾರ್ಯಾಚರಣೆ ನಡೆಸಲಾಗುತ್ತದೆ.

Advertisement

ಇದನ್ನೂ ಓದಿ:-Bhatkal| ಅರಬ್ಬಿ ಸಮುದ್ರದಲ್ಲಿ ಮೂರು ದಿನ ವಿಮಾನದಲ್ಲಿ ಫೈರಿಂಗ್ : ಮೀನುಗಾರರಿಗೆ ನಿರ್ಬಂಧ

ಈಬಾರಿ ಅಕ್ಟೋಬರ್ 16 ಮತ್ತು 17ರಂದು ಕೋಸ್ಟ್ ಗಾರ್ಡ್ ಹಾಗೂ ಕೋಸ್ಟಲ್ ಪೋಲಿಸ್ ವತಿಯಿಂದ ನಡೆಸಿದ ಸಾಗರ ಕವಚ ಅಣುಕು ಕಾರ್ಯಾಚರಣೆಯಲ್ಲಿ ಸಮುದ್ರವಾಗಿ ನುಸುಳುತ್ತಿರುವ ಹತ್ತು ಜನ ಭಯೋತ್ಪಾದಕರನ್ನು ಬಂದಿಸುವಲ್ಲಿ ಭಟ್ಕಳ ಕರಾವಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಕರಾವಳಿ ಪೊಲೀಸ್ ಅಧೀಕ್ಷಕರಾದ ಮಿಥುನ್ ಹೆಚ್.ಎನ್ IPS ರವರು ಭಟ್ಕಳ ಸಿಎಸ್‌ಪಿಯ ಪೊಲೀಸ್ ನಿರೀಕ್ಷಕರಾದ ಕುಸುಮಾಧರ ಕೆ. ಹಾಗೂ ಸಿಬ್ಬಂದಿ, KND, ಮತ್ತು ತಾಂತ್ರಿಕ ಸಿಬ್ಬಂದಿಯವರೊಂದಿಗೆ ಖುದ್ದು ಹಾಜರಿದ್ದು ಬೋಟುಗಳನ್ನು ಪರಿಶೀಲನೆ ಮಾಡುತ್ತಿರುವಾಗ ಬಂಧಿಸಲಾಯಿತು.

ಈ ರೀತಿಯ ಅಣಕು ಕಾರ್ಯಾಚರಣೆ ಪ್ರತಿ ವರ್ಷ ನಡೆಯುತಿದ್ದು ಈ ಮೂಲಕ ಕರಾವಳಿ ಭಾಗದಲ್ಲಿ ಭದ್ರತೆ ಕುರಿತು ಅವಲೋಕನ ನಡೆಸಲಾಗುತ್ತದೆ.

Advertisement
Tags :
BhatkalKannda newsKarnatakasagar kavachTerrorismUttra kannda
Advertisement
Next Article
Advertisement