Dandeli|ಅರಣ್ಯದಲ್ಲಿ ಹುಲಿ ಬೇಟೆ ಎರಡು ವರ್ಷದ ನಂತರ ಆರೋಪಿಗಳ ಬಂಧನ
ದಾಂಡೇಲಿ:-2 ವರ್ಷಗಳ ನಂತರ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಬರ್ಚಿ ವಲಯ ವ್ಯಾಪ್ತಿಯಲ್ಲಿ ನಡೆದಿದ್ದ ಹುಲಿ ,ಭೇಟೆ ಪ್ರಕರಣ ದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ .
ಅರಣ್ಯ ಅಧಿಕಾರಿಗಳಿಂದ ಬೆಳಗಾವಿ ಮೂಲದ ಅತ್ತಿವಾಡದ ಸೋಮನಾಥ್ ಪಾಟೀಲ್ ಹಾಗೂ ಶಂಕಿತ ಆರೋಪಿ ಬೆಳಗಾವಿಯ ತಾನಾಜಿಗಲ್ಲಿಯ ಇಂದ್ರಜಿತ್ ಗಸರಿ ಬಂಧಿತರಾದವರಾಗಿದ್ದು ಇವರಲ್ಲಿ ಸೋಮನಾಥ್ ನನ್ನು ನ್ಯಾಯಾಲಯದ ಸುಪರ್ಧಿಗೆ ನೀಡಿದ್ದು ,ಇನ್ನೊಬ್ಬನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
ಘಟನೆ ಏನು ?
2022ರ ಡಿಸೆಂಬರ್ 18ರಂದು ಬರ್ಚಿಯಲ್ಲಿ ಹುಲಿ ಹತ್ಯೆ ನಡೆದಿತ್ತು. ಈ ಪ್ರಕರಣ ಸಂಬಂಧಿಸಿ ಅರಣ್ಯ ಅಧಿಕಾರಿಗಳು ಹಲವು ದಿಕ್ಕುಗಳಿಂದ ತನಿಖೆ ನಡೆಸಿದ್ದರು.
ಸಿಸಿ ಕ್ಯಾಮೆರಾ ಹಾಗೂ ಮೊಬೈಲ್ ಟವರ್ ಇನ್ನಿತರೆ ತನಿಖೆಗಳನ್ನು ಆಧರಿಸಿ ಆರೋಪಗಳನ್ನು ಪತ್ತೆ ಮಾಡಿದ್ದಾರೆ.
ಇದನ್ನೂ ಓದಿ:-Dandeli|ಈ ಕಳ್ಳರ ಹಿನ್ನಲೆ ಕೇಳಿ ಪೊಲೀಸರೇ ಸುಸ್ತು! ಯಾರೀ ಕಿರಾತಕರು ಗೊತ್ತಾ?
ಮೊದಲು ಬೆಳಗಾವಿಯ ಅತ್ತಿವಾಡದ ಸೋಮನಾಥ್ ಪಾಟೀಲ್ ಎಂಬಾತನನ್ನು ಬಂಧಿಸಿದ್ದ ಅಧಿಕಾರಿಗಳು,ಬಳಿಕ ಜಗಲಪೇಟ ಅರಣ್ಯ ಅಧಿಕಾರಿಗಳಿಂದ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಮತ್ತೋರ್ವ ಶಂಕಿತ ಆರೋಪಿ ಬೆಳಗಾವಿಯ ತಾನಾಜಿಗಲ್ಲಿಯ ಇಂದ್ರಜಿತ್ ಗಸರಿ ಎಂಬಾತ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
ಇದಲ್ಲದೇ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಹೋಂ ಸ್ಟೇ ಮಾಲಕನೋರ್ವನನ್ನು ಕೂಡಾ ಅರಣ್ಯಾಧಿಕಾರಿಗಳು ವಿಚಾರಣೆ ನಡೆಸಿರುವ ಮಾಹಿತಿ ಯಿದ್ದು
ಆರೋಪಿಗಳು ಹೋಂ ಸ್ಟೇಯಲ್ಲಿ ವಾಸ್ತವ್ಯವಿದ್ದು, ಕೃತ್ಯ ಎಸಗಿರುವುದಾಗಿ ಸಂಶಯಿಸಲಾಗಿದೆ.
ಜಗಲಪೇಟ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ವಲಯ ಅರಣ್ಯಾಧಿಕಾರಿಯಿಂದ ತನಿಖೆ ಮುಂದುವರೆದಿದೆ.