ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

ಅಸಂಸದೀಯ ಪದ ಬಳಸುವ ಶಾಸಕ ಹರೀಶ್ ಪೂಂಜಾ ಜನಪ್ರತಿನಿಧಿಯಾಗಿರಲು ಯೋಗ್ಯರಲ್ಲ -ಮಂಜುನಾಥ್ ನಾಯ್ಕ.

Kumta news 03 November 2024:- . ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ  ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯ ಸಂಯೋಜಕ ಮತ್ತು ಹಿಂದುಳಿದ ವರ್ಗಗಳ ಯುವ ನಾಯಕ ಮಂಜುನಾಥ ನಾಯ್ಕ ಕುಮಟಾ ಟೀಕಿಸಿಕೋರಬೇಕು ಎಂದು ಆಗ್ರಹಿಸಿದ್ದಾರೆ.
04:57 PM Nov 03, 2024 IST | ಶುಭಸಾಗರ್

Kumta news 03 November 2024:- . ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ  ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯ ಸಂಯೋಜಕ ಮತ್ತು ಹಿಂದುಳಿದ ವರ್ಗಗಳ ಯುವ ನಾಯಕ ಮಂಜುನಾಥ ನಾಯ್ಕ ಕುಮಟಾ ಟೀಕಿಸಿಕೋರಬೇಕು ಎಂದು ಆಗ್ರಹಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರುಐದು ದಶಕಗಳ ಕಾಲ, ರಾಜ್ಯ ದೇಶದಲ್ಲಿ ಮೌಲ್ಯಯುತ ರಾಜಕಾರ ನಡೆಸಿ, ಎರಡು ದಶಕಗಳ ಕಾಲ ಸಂಸತ್ತಿನಲ್ಲಿ ಹಿಂದುಳಿ, ಬಡ, ದಲಿತ, ಶೋಷಿತರ ಪರವಾಗಿ ಧ್ವನಿಯಾಗಿರುವ ಕಾಂಗ್ರೆಸ್ ನಿಷ್ಠಾವಂತ ಹಿರಿಯ ನಾಯಕರು, ವಿಧಾನ ಪರಿಷತ್ ಸದಸ್ಯರಾದ ಬಿಕೆ ಹರಿಪ್ರಸಾದ್ ಅವರ ಬಗ್ಗೆ ಅವಹೇಳನಕಾರಿ ಹಾಗೂ ಅಸಂಸದೀಯ ಪದವನ್ನು ಸಾರ್ವಜನಿಕವಾಗಿ ಬಳಸಿರುವ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಜನಪ್ರತಿನಿಧಿಯಾಗಿರಲು ಯೋಗ್ಯರಲ್ಲ ಎಂದು ಹರೀಶ್ ಪೂಂಜಾ ರವರ ಹೇಳಿಕೆಯನ್ನು ಖಂಡಿಸಿದ್ದಾರೆ.

ಶಾಸಕರಾಗಿ ಪೊಲೀಸ್ ಅಧಿಕಾರಿಗಳು, ಅರಣ್ಯ ಅಧಿಕಾರಿಗಳು ಸೇರಿದಂತೆ ಇಡೀ ಕಾರ್ಯಾಂಗದ ಅಧಿಕಾರಿಗಳ ಮೇಲೆ ಪುಡಿ ರೌಡಿಗಳಂತೆ ವರ್ತಿಸುವ ಹರೀಶ್ ಪೂಂಜಾ ಶಾಸಕರಾಗಿ ಮುಂದುವರೆಯುವ ಅರ್ಹತೆ ಇಲ್ಲದವರು.

ಜಾತಿ ಗಣತಿಯ ಪರವಾಗಿ ಧ್ವನಿ ಎತ್ತುವ ನಾಯಕರ ಮೇಲೆ ವ್ಯವಸ್ಥಿತವಾಗಿ ಧ್ವನಿ ಅಡಗಿಸುವ ಹುನ್ನಾರ ನಡೆಯುತ್ತಿದೆ. ಹಿಂದುಳಿದ ನಾಯಕರಾದ ಬಿಕೆ ಹರಿಪ್ರಸಾದ್ ಅವರ ಮೇಲೆ ಹರೀಶ್ ಪೂಂಜಾ ನೀಡಿರುವ ಹೇಳಿಕೆಗಳೇ ಅದಕ್ಕೆ ಸಾಕ್ಷಿ. ಜಾತಿ ಗಣತಿಯ ವಿರುದ್ಧ ಇರುವ ಬಿಜೆಪಿಯ ನಾಯಕರು, ತಮ್ಮ ನಿಲುವು ಬಹಿರಂಗವಾಗಿ ಸ್ಪಷ್ಟನೆ ಪಡಿಸಲಿ.

Advertisement

ಅದನ್ನು ಬಿಟ್ಟು ಪುಡಾರಿ ರೌಡಿ ಪಡೆಯ ನಾಯಕರಂತೆ ವರ್ತಿಸುತ್ತಿರುವುದು ನಾಚಿಕೆಗೇಡು. ಕೂಡಲೇ ಹರೀಶ್ ಪೂಂಜಾ ನೀಡಿರುವ ಹೇಳಿಕೆಗಳನ್ನು ಹಿಂಪಡೆದು ಬೇಷರತ್ ಕ್ಷಮೆ ಕೋರಬೇಕು

ಬಿ ಕೆ ಹರಿಪ್ರಸಾದ್ ಬ್ರಾಹ್ಮಣ
ಸಮುದಾಯದ ವಿರೋಧಿ ಅಲ್ಲ. ಯಾವುದೇ
ಜಾತಿಯನ್ನು ಇಡಿಯಾಗಿ ವಿರೋಧಿಸುವ
ಜಾಯಮಾನವೂ ಅವರದ್ದಲ್ಲ. ಹರಿಪ್ರಸಾದ್ ಅವರದ್ದು ಸೈದ್ಧಾಂತಿಕ ವಿರೋಧ ಮಾತ್ರ.

ಕಾಂಗ್ರೆಸ್ ಹಿರಿಯ ನಾಯಕರಾದ ಬಿಕೆ ಹರಿಪ್ರಸಾದ್ ಅವರ ಹಿರಿತನ, ಘನತೆ, ಮುತ್ಸದ್ದಿತನದ ಬಗ್ಗೆ ಹರೀಶ್ ಪೂಂಜಾ ಅಂತಹ ಎಳಸು ರಾಜಕಾರಣಿಗಳ ಸರ್ಟಿಫಿಕೇಟ್ ಅಗತ್ಯವಿಲ್ಲ. ಸಂಸ್ಕೃತಿ, ಧರ್ಮದ ಬಗ್ಗೆ ಪೊಳ್ಳು ಭಾಷಣ ಬಿಗಿಯುವ ಪೂಂಜಾ, ತನ್ನ ಅಸಬ್ಯ ಭಾಷೆಗೆ ಕಡಿವಾಣ ಹಾಕಿ, ನಾಲಗೆಯ ಮೇಲೆ ಹಿಡಿತ ಇಟ್ಟು ಮಾತಾಡಲಿ, ಇಲ್ಲದಿದ್ದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸುತ್ತೇವೆ.

ಹಿರಿಯ ರಾಜಕಾರಣಿ ಬಿಕೆ ಹರಿಪ್ರಸಾದ್ ಅವರ ನೈತಿಕ ಶಕ್ತಿ ಕುಗ್ಗಿಸಲು ನಡೆಸುತ್ತಿರುವ ವ್ಯವಸ್ಥಿತ ಹುನ್ನಾರವನ್ನು ಇಡೀ ಹಿಂದುಳಿದ ಸಮುದಾಯಗಳು ಖಂಡಿಸುತ್ತವೆ ಹಾಗೂ ಅವರ ಸಾಮಾಜಿಕ ಹೋರಾಟ ಹಾಗೂ ಸೈದ್ದಾಂತಿಕ ನಿಲುವುಗಳಿಗೆ ಬಹಿರಂಗ ಬೆಂಬಲ ನೀಡಲಿದ್ದೇವೆ ಎಂದರು.

Advertisement
Tags :
Bk HariprasadKarnatakaKumtaMangalurUdupi
Advertisement
Next Article
Advertisement