Haliyala:ಪೊಲೀಸ್ ವಾಹನಕ್ಕೆ ಕಂಟೈನರ್ ಡಿಕ್ಕಿ ಇಬ್ಬರು ಸಿಬ್ಬಂದಿಗಳು ಗಂಭೀರ
ಗೋವಾದಿಂದ ಅಪರಾಧಿಗಳನ್ನು ಕರೆತರುತಿದ್ದ ಪೊಲೀಸರ ವಾಹನಕ್ಕೆ ಕಂಟೈನರ್ ಡಿಕ್ಕಿ ಇಬ್ಬರು ಸಿಬ್ಬಂದಿಗಳು ಗಂಭೀರ
Haliyala news 30 October 2024 :- ಗೋವಾ(goa) ದಿಂದ ಹಳಿಯಾಳಕ್ಕೆ ಪ್ರಕರಣವೊಂದರ ಆರೋಪಿಗಳನ್ನು ಕರೆತರುತಿದ್ದ ಪೊಲೀಸರ ಇನೋವಾ ವಾಹನ ಹಾಗೂ ಕಂಟೈನರ್ ಡಿಕ್ಕಿಯಾಗಿ ವಾಹನದಲ್ಲಿದ್ದ ಇಬ್ಬರಿಗೆ ಗಂಭೀರ ಗಾಯವಾಗಿದ್ದು ನಾಲ್ಕು ಜನರಿಗೆ ಅಲ್ಪ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರ ಗಡಿಯಲ್ಲಿ ಇಂದು ನಡೆದಿದೆ.
ಇದನ್ನೂ ಓದಿ:-Haliyala ವಿದ್ಯುತ್ ಅವಘಡ ಮಳಿಗೆ ಮನೆಗಳು ಬೆಂಕಿಗಾಹುತಿ.
ಗಂಭೀರ ಗಾಯಗೊಂಡ ಹಳಿಯಾಳ ಠಾಣೆಯ ಹೆಡ್ ಕಾನಸ್ಟೇಬಲ್ ಎಂ.ಎಂ ಮುಲ್ಲಾ , ಹೋಮ್ ಗಾರ್ಡ ರವಿ ಮಿರಾಜಕರ್ ಗಂಭೀರ ಗಾಯಗೊಂಡಿದ್ದು ಧಾರವಾಡದ SDM ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಲ್ಪ ಗಾಯಗೊಂಡ ಹಳಿಯಾಳ ಠಾಣೆ ಕ್ರೈಂ ಪಿ.ಎಸ್.ಐ
ಅಮೀನ್ ಅಖ್ತರ್ , ಕಾನಸ್ಟೇಬಲ್ ಇಸ್ಮಯಲ್ ಕೋಟನಕೇರಿ ಮತ್ತು ಆರೋಪಿ,ಡ್ರೈವರ್ ಗೆ ಚಿಕ್ಕಪುಟ್ಟ ಗಾಯವಾಗಿದ್ದು ಹಳಿಯಾಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಇದನ್ನೂ ಓದಿ:-Haliyala|ಆರ್.ವಿ ದೇಶಪಾಂಡೆ ಆಪ್ತನಿಂದ ಅಂಗನವಾಡಿ ಜಾಗ ಒತ್ತುವರಿ -ಗ್ರಾಮಸ್ತರಿಂದ ಮುತ್ತಿಗೆ
ಗೋವಾದಿಂದ ಆರೋಪಿಯೋರ್ವನ್ನು ಬಂಧಿಸಿ ಇನ್ನೋವಾ ಕಾರಿನಲ್ಲಿ ಕರೆ ತರುತ್ತಿದ್ದ ಹಳಿಯಾಳ ಪೊಲೀಸರು ರಾಮನಗರ ಹೆದ್ದಾರಿಯಲ್ಲಿ ತೆರಳುತಿದ್ದವೇಳೆ ಅತೀ ವೇಗದಿಂದ ರಾಂಗ್ ಸೈಡ್‌ನಿಂದ ಬಂದ ಕಂಟೈನರ್ ಲಾರಿ ಡಿಕ್ಕಿಯಾಗಿ ಘಟನೆ ಸಂಭವಿಸಿದೆ.
ಅಪಘಾತ ಪಡಿಸಿದ ಲಾರಿ ಚಾಲಕನನ್ನು,ಲಾರಿಯನ್ನು ವಶಕ್ಕೆ ಪಡೆಯಲಾಗಿದ್ದು ಘಟನೆ ಸಂಬಂಧ ರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.