ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Shirur| ಸಿಕ್ಕ ಮೂಳೆಗಳು ಯಾವುದು? ಕಾರ್ಯಾಚರಣೆ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದೇನು?

ಅಂಕೋಲ:-ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಭೂ ಕುಸಿತದಲ್ಲಿ ಕಾಣೆಯಾದವರ ಶೋಧಕಾರ್ಯದ ಮೂರನೇ ಹಂತದ ಹನ್ನೊಂದನೇ ದಿನವಾದ ಇಂದು ಘಟನೆ ನಡೆದ ಗಂಗಾವಳಿ ನದಿಯಲ್ಲಿ ಅಸ್ತಿಪಂಜರದ ಮೂಳೆಗಳು
06:09 PM Sep 30, 2024 IST | ಶುಭಸಾಗರ್

Shirur| ಸಿಕ್ಕ ಮೂಳೆಗಳು ಯಾವುದು? ಕಾರ್ಯಾಚರಣೆ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದೇನು?

Advertisement

ಅಂಕೋಲ:-ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಭೂ ಕುಸಿತದಲ್ಲಿ ಕಾಣೆಯಾದವರ ಶೋಧಕಾರ್ಯದ ಮೂರನೇ ಹಂತದ ಹನ್ನೊಂದನೇ ದಿನವಾದ ಇಂದು ಘಟನೆ ನಡೆದ ಗಂಗಾವಳಿ ನದಿಯಲ್ಲಿ ಅಸ್ತಿಪಂಜರದ ಮೂಳೆಗಳು ದೊರೆತಿದೆ. ಮುಳುಗು ತಜ್ಞರು ಮೂಳೆಗಳನ್ನು ಶೋಧಿಸಿದ್ದು ಎದೆ ಹಾಗೂ ಕೈನ ಮೂಳೆಗಳು ದೊರೆತಿದೆ.

ಇದನ್ನೂ ಓದಿ:-Shirur| ಶಿರೂರು ಕಾರ್ಯಾಚರಣೆಯಲ್ಲಿ ಸಿಕ್ತು ಮನುಷ್ಯನ ಮೂಳೆಗಳು

ಕಳೆದ ಬುಧವಾರ ಕೇರಳ ಮೂಲದ ಅರ್ಜುನ್ ಶವ ಶೋಧಿಸಲಾಗಿತ್ತು. ಇದೀಗ ಎರಡು ಮೂಳೆಗಳು ದೊರೆತಿದೆ‌.

Advertisement

ಜಿಲ್ಲಾಧಿಕಾರಿ ಹೇಳಿದ್ದೇನು?

ಈ ಕುರಿತು ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ರವರು ಮಾತನಾಡಿದ್ದು ,ಎರಡು ಮೂಳೆಗಳನ್ನ ಡಿಎನ್ ಎ ಟೆಸ್ಟ್ ಗೆ ಕಳುಹಿಸಿದ್ದೇವೆ.ಡಿಎನ್ ಎ ಟೆಸ್ಟ್ ಬಳಿಕ ಸಂಬಂಧ ಪಟ್ಟ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುವುದು.

ಕಾರ್ಯಾಚರಣೆ ಮುಂದುವರೆಸುವ ಬಗ್ಗೆ ಸಚಿವರ ಜೊತೆ ಚರ್ಚಿಸಲಾಗುತ್ತದೆ.ಕಣ್ಮರೆಯಾಗಿರುವವರ ಪೈಕಿ ಈಗ ಇಬ್ಬರ ಶೋಧ ಮಾಡುತಿದ್ದೇವೆ.

ಅದರ ಪೈಕಿ ಇಂದು ಸಿಕ್ಕ ಮೂಳೆ ಯಾರದ್ದು ಎಂಬುವುದು DNA ಟೆಸ್ಟ್ ಬಳಿಕ ನಿರ್ಧಾರ ಆಗುತ್ತೆ. ಮತ್ತೆ ಕಾರ್ಯಾಚರಣೆ ಮುಂದುವರೆಸುವುದಾ ಎಂಬುವುದನ್ನ ಇನ್ನೂ ನಿರ್ಧಾರ ಮಾಡಿಲ್ಲ.

ನಾವು ಹತ್ತು ದಿನ ಕಾರ್ಯಾಚರಣೆ ಮಾಡಲು ಅನುಮತಿ ಪಡೆದಿದ್ದೆವು.ಆದರೆ ಇಬ್ಬರ ಶೋಧಕ್ಕಾಗಿ ಇಂದು ಹನ್ನೂಂದನೆ ದಿನವಾದ್ರೂ ಕಾರ್ಯಾಚರಣೆ ಮುಂದುವರೆದಿದೆ ಎಂದಿದ್ದಾರೆ.

Advertisement
Tags :
Ankola newsbonsKarnatakaKarwar newsland slaidShiruruUttara kanndaಕಾರ್ಯಾಚರಣೆಮೂಳೆಗಳುಶಿರೂರು
Advertisement
Next Article
Advertisement