Uttara kannda:ಫಟಾಫಟ್ ಸುದ್ದಿ 14 ನವಂಬರ್ 2024
Uttara kannada News 14 November 2024 :ಉತ್ತರ ಕನ್ನಡ ಜಿಲ್ಲೆಯ ಇಂದಿನ ಪ್ರಮುಖ ಸುದ್ದಿಗಳು ಈ ಕೆಳಗಿನಂತಿದೆ.
♦ಫಟಾಫಟ್ ಸುದ್ದಿ -ಮುರುಡೇಶ್ವರ.
ಮುರುಡೇಶ್ವರದ ಹೈವೇ ಹೋಟಲ್ ಬಳಿಯ ರೈಲ್ವೆ ಹಳಿಭಾಗದಲ್ಲಿ ಉಡುಪಿಯ (udupi )ಸಂದೀಪ್ ಬಂಡಾರಿ ಎಂಬುವವರು ರೈಲು ಬಡಿದು ಸಾವು ಕಂಡಿದ್ದಾರೆ. ಘಟನೆ ಸಂಬಂಧ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:-Gokarna :ಖಿನ್ನತೆಯಲ್ಲಿ ಬಳಲುತಿದ್ದ ಮಾನಸಿಕ ವ್ಯಕ್ತಿಗೆ ಹೊಸ ಬೆಳಕು ಮೂಡಿಸಿದ್ದ ನಿರ್ದೇಶಕ ಗುರುಪ್ರಸಾದ್ !
♦ದಾಂಡೇಲಿ-ಜೋಯಿಡಾ
ಮದ್ಯ ವ್ಯಸನಿಯೊಬ್ಬ ಬಾವಿಯಲ್ಲಿ ಬಿದ್ದು ಮೃತಪಟ್ಟ ಘಟನೆ ದಾಂಡೇಲಿಯ ಮಿರ್ನೋಲಿ ಗ್ರಾಮದ ರಾಮ ಸದಾನಂದ ಧರಣಿ ಎಂಬುವವರ ಮನೆಯಲ್ಲಿ ನಡೆದಿದ್ದು , ಮೃತನು ಜೋಯಿಡಾ (joida) ದ ವಿರ್ನೂಲಿ ಗ್ರಾಮದ ಸದಾನಂದ್ ಎಂದು ಗುರುತಿಸಲಾಗಿದ್ದು ಈತ ಮದ್ಯ ಸೇವಿಸಿ ಮಾನಸಿಕ ಕಿನ್ನತೆಯಿಂದ ಬಳಲುತಿದ್ದನೆಂದು ತಿಳಿದು ಬಂದಿದ್ದು ಘಟನೆ ಸಂಬಂಧ ದಾಂಡೇಲಿ (Dandeli )ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
♦ಫಟಾಫಟ್ ಸುದ್ದಿ -ಶಿರಸಿ.

ಮಾಂಸ ಭಕ್ಷಣೆಗಾಗಿ ಜಿಂಕೆಯನ್ನು ಕೊಂದ ವ್ಯಕ್ತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ ಘಟನೆ ಶಿರಸಿಯ ಉಂಚಳ್ಳಿ ನದಿ ಭಾಗದಲ್ಲಿ ನಡೆದಿದ್ದು ,ಗಣಪತಿ ಗೌಡ ಎಂಬಾತನನ್ನು ಬಂಧಿಸಿದ್ದು ಇಬ್ಬರು ಪರಾರಿಯಾಗಿದ್ದಾರೆ.
♦ಫಟಾಫಟ್ ಸುದ್ದಿ- ಕಾರವಾರ.

ನಗರಪ್ರದೇಶದ ಅಂಗಡಿ ಮುಂಗಟ್ಟುಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಗಳನ್ನು ಬಳಸುತಿದ್ದು ಈ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ದಾಳಿ ನಡೆಸಿ ಪಶಕ್ಕೆ ಪಡೆದರು.
ಕಾರವಾರ ನಗರದ 25 ಕ್ಕೂ ಹೆಚ್ಚು ಅಂಗಡಿಗಳಿಗೆ ದಾಳಿ ನಡೆಸಿದ ಅಧಿಕಾರಿಗಳು 72 kg ಪ್ಲಾಸ್ಟಿಕ್ ( plastic) ವಶಕ್ಕೆ ಪಡೆದು 6200 ದಂಡ ವಿಧಿಸಿದ್ದಾರೆ.
Feed: invalid feed URL