Weather report| ಹವಾಮಾನ 09 october 2024
ಹವಾಮಾನ :-ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆ ಮುಂದಿನ 2-3 ದಿನ ಮಳೆ ಬಿರುಸು ಪಡೆಯುವ ಸಾಧ್ಯತೆಯಿದ್ದು, 4 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ:-Sirsi | ಕರ್ತವ್ಯದಲ್ಲಿ ಮದ್ಯ ಸೇವಿಸದ ಅಬಕಾರಿ ಚಾಲಕ| ಬುದ್ದಿ ಹೇಳಿದ ತಪ್ಪಿಗೆ ಆತ್ಮಹತ್ಯೆ ಬೆದರಿಕೆ
ಎಲ್ಲಿ ಆರೆಂಜ್ ಅಲರ್ಟ /ರೆಡ್ ಅಲರ್ಟ
ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಿಗೆ ಮುಂದಿನ ಎರಡು ದಿನ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ:- Karwar | ಮೀನು ತುಂಬಿದ ವಾಹನ ಹರಿದು ಕಾರ್ಮಿಕ ಸಾವು
ಇನ್ನು ಉತ್ತರ ಕನ್ನಡ ಕರಾವಳಿಯಲ್ಲಿ ಮಳೆ ಕಡಿಮೆ ಇದ್ದು ರಾತ್ರಿ ವೇಳೆ ಅಲ್ಪ ಮಳೆಯಾಗುವ ಸೂಚನೆ ಇದೆ. ಜೊತೆಗೆ ಉಷ್ಟಾಂಶ ಹೆಚ್ಚಾಗಲಿದೆ.
ಉಷ್ಣಾಂಶ ವಿವರ:-
ಉಡುಪಿ: 31-24
ಕಾರವಾರ: 29-24
ಚಿಕ್ಕಮಗಳೂರು: 27-18
ದಾವಣಗೆರೆ: 31-22
ಹಾವೇರಿ: 30-22
ಬಳ್ಳಾರಿ: 32-23
ಗದಗ: 30-22
ಕೊಪ್ಪಳ: 31-23
ಶಿವಮೊಗ್ಗ: 30-21
ಬೆಳಗಾವಿ: 28-21
ಮೈಸೂರು: 30-21